ಜೆಡಿಎಸ್‌ ಶಾಸಕರು ಪಕ್ಷ ನಿಷ್ಠರಾಗಿದ್ದೇವೆ

| Published : Nov 27 2024, 01:01 AM IST

ಸಾರಾಂಶ

ತಾಳಿಕೋಟೆ: ಜೆಡಿಎಸ್ ಪಕ್ಷದ ಸಿದ್ಧಾಂತಕ್ಕೆ ಒಳಪಟ್ಟ ಶಾಸಕರು ಪಕ್ಷ ನಿಷ್ಠೆಯಾಗಿ ಸಂವಿಧಾನಬದ್ಧರಾಗಿದ್ದೇವೆ. ಸಿ.ಪಿ.ಯೋಗೇಶ್ವರ ಅವರು ಗೆಲುವಿನ ಹುಮ್ಮಸ್ಸಿನಿಂದ ಹೊರಬಂದು ತಮ್ಮ ಕೈ ಪಕ್ಷದ ಅತೃಪ್ತ ಶಾಸಕರ ಬಗ್ಗೆ ಗಮನಹರಿಸಲಿ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ತಿರುಗೇಟು ನೀಡಿದ್ದಾರೆ.

ತಾಳಿಕೋಟೆ: ಜೆಡಿಎಸ್ ಪಕ್ಷದ ಸಿದ್ಧಾಂತಕ್ಕೆ ಒಳಪಟ್ಟ ಶಾಸಕರು ಪಕ್ಷ ನಿಷ್ಠೆಯಾಗಿ ಸಂವಿಧಾನಬದ್ಧರಾಗಿದ್ದೇವೆ. ಸಿ.ಪಿ.ಯೋಗೇಶ್ವರ ಅವರು ಗೆಲುವಿನ ಹುಮ್ಮಸ್ಸಿನಿಂದ ಹೊರಬಂದು ತಮ್ಮ ಕೈ ಪಕ್ಷದ ಅತೃಪ್ತ ಶಾಸಕರ ಬಗ್ಗೆ ಗಮನಹರಿಸಲಿ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ತಿರುಗೇಟು ನೀಡಿದ್ದಾರೆ.

ಈ ಕುರಿತು ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕ ರಾಜುಗೌಡ ಪಾಟೀಲ, ಜೆಡಿಎಸ್ ಪಕ್ಷದ ಸಿದ್ಧಾಂತಕ್ಕೆ ಒಳಪಟ್ಟು ಶಾಸಕರನ್ನಾಗಿ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಸಿ.ಪಿ.ಯೋಗೇಶ್ವರ ಹಣ, ಹೆಂಡ, ಸರ್ಕಾರಿ ಯಂತ್ರಗಳನ್ನು ಬಳಕೆ ಮಾಡಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಶಾಸಕರ್‍ಯಾರೂ ಇಲ್ಲಿ ಕಾಂಗ್ರೆಸ್‌ಗೆ ಹೋಗಲು ಹಸಿದು ಕುಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜೆಡಿಎಸ್‌ನ ಎಲ್ಲ ಶಾಸಕರು ವಿರೋಧ ಪಕ್ಷದಲ್ಲಿದ್ದರೂ ಸಮರ್ಥವಾಗಿ ನಮ್ಮ ಕಾರ್ಯ ನಿಭಾಯಿಸಲಿದ್ದೇವೆ. ಕೈ ಪಕ್ಷದ ಸರ್ಕಾರದಲ್ಲಿಯೇ ಸಾಕಷ್ಟು ಶಾಸಕರು ಅನುದಾನ ಸಿಗುತ್ತಿಲ್ಲವೆಂದು ಅವರದ್ದೇ ಪಕ್ಷದ ವಿರುದ್ಧ ಹೈಕಮಾಂಡ್‌ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಮೊದಲು ಅವರನ್ನು ಉಳಿಸಿಕೊಳ್ಳುವುದನ್ನು ನೋಡಲಿ. ಅದನ್ನು ಬಿಟ್ಟು ಮತ್ತೊಂದು ಪಕ್ಷದ ಶಾಸಕರ ಕರೆತರುವ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಸಿ.ಪಿ.ಯೋಗೇಶ್ವರ ಅವರಿಗೆ ಜೆಡಿಎಸ್ ಶಾಸಕರ್‍ಯಾರೂ ಅವರ ಸಂಪರ್ಕಕ್ಕೆ ಬಂದಿದ್ದರೆ ಮೊದಲು ಹೆಸರು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಸಿ.ಪಿ.ಯೋಗೇಶ್ವರಗೆ ಚನ್ನಪಟ್ಟಣದ ಜನರು ಆಶೀರ್ವಾದ ಮಾಡಿದ್ದಾರೆ. ಇನ್ನೂ ೩ ವರ್ಷ ಜನರ ನಂಬಿಕೆ ಉಳಿಸಿಕೊಳ್ಳುವ ಹಾಗೆ ಕೆಲಸ ಮಾಡಿ ತೋರಿಸಲಿ. ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿದ್ದರೂ ಎಲ್ಲ ಶಾಸಕರು ಮಾಜಿ ಪ್ರಧಾನಿ ದೇವೇಗೌಡರ ಮತ್ತು ಕುಮಾರಸ್ವಾಮಿ ಅವರ ಜೊತೆಯಲ್ಲಿದ್ದಾರೆ. ಸಿ.ಪಿ.ಯೋಗೇಶ್ವರ ಅವರಂತೆ ಅಧಿಕಾರದ ಲಾಲಸೆಯಿಂದ ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರು ಯಾರೂ ಇಲ್ಲವೆಂದು ಹೇಳಿದರು.