ಸಾರಾಂಶ
ಬ್ಯಾಡಗಿ: ರಾಜ್ಯದಲ್ಲಿ ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದಿದ್ದು, ಗ್ಯಾರಂಟಿ ಯೋಜನೆ ಪ್ರಚಾರ ಬಿಟ್ಟು ಬೇರೇನೂ ಮಾಡುತ್ತಿಲ್ಲ. ಬಡವರು ಖರೀದಿಸುವ ಎಲ್ಲ ದಿನಸಿ ಸೇರಿದಂತೆ ಹಲವಾರು ಸಾಮಗ್ರಿಗಳ ಬೆಲೆ ಗಗನಕ್ಕೆ ತಲುಪಿದೆ. ಜನವಿರೋಧಿ ನೀತಿ ಮುಂದುವರಿದರೆ ರಾಜ್ಯದ ಜನತೆ ಸಹಿಸಲ್ಲವೆಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಮೃತ್ಯುಂಜಯ್ಯ ಕೊಪ್ಪದ ಎಚ್ಚರಿಸಿದರು.ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಸೋಮವಾರ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಎರಡು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರದ ಧೋರಣೆಯಿಂದ ಜನರು ಬೇಸತ್ತಿದ್ದು, ಸ್ವಪಕ್ಷದ ಶಾಸಕರೇ ತಮ್ಮ ಪಕ್ಷದ ಆಡಳಿತ ವ್ಯವಸ್ಥೆಯನ್ನು ಖಂಡಿಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಸ್ವಪಕ್ಷದ ಶಾಸಕರೇ ಸರ್ಕಾರವನ್ನು ಟೀಕಿಸುವಲ್ಲಿ ಹಾಗೂ ಸತ್ಯಾಂಶವನ್ನು ತಿಳಿಸುತ್ತಿದ್ದಾರೆ ಎಂದರು.
ಇಲಾಖೆಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಲಂಚದ ಹಾವಳಿಗೆ ಸಾರ್ವಜನಿಕರು ಬೇಸತ್ತಿದ್ದು, ಎಲ್ಲಿ ನೋಡಿದರೂ ಹಣ ವಸೂಲಾತಿ ಜೋರಾಗಿದೆ. ದುರಾಡಳಿತ ಹಾಗೂ ಭ್ರಷ್ಟ ವ್ಯವಸ್ಥೆಯನ್ನು ಜನರು ನೋಡಿ ಮೌನವಾಗಿರಲು ಸಾಧ್ಯವಿಲ್ಲ. ಈ ಕುರಿತು ಎಲ್ಲೆಡೆ ತೀವ್ರ ಹೋರಾಟಗಳು ನಡೆದಿವೆ. ಕೂಡಲೇ ಸರ್ಕಾರ ಬಡವರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆ ಬಳಿಕ ಕಾರ್ಯಕರ್ತರು ತಾಲೂಕಾಡಳಿತ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ತಹಸೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಜೆಡಿಎಸ್ ಪದಾಧಿಕಾರಿಗಳಾದ ನಾಗರಾಜ ಮತ್ತಳ್ಳಿ, ನಾಗರಾಜ ಹಿತ್ತಲಮನಿ, ಬಿದ್ದಾಡೆಪ್ಪ ಹಂಸಭಾವಿ, ಅರುಣ ಬಸಲಿಂಗಮ್ಮನವರ, ವೀರೇಶ ಗಜ್ಜರಿ, ನಾಗಪ್ಪ ಕಾಟೇನಹಳ್ಳಿ, ಪ್ರವೀಣ ಎಂ. ಇದ್ದರು. ನರೇಗಲ್ಲಿನಲ್ಲಿ ಎಲ್‌ಕೆಜಿ ವಿಭಾಗಕ್ಕೆ ಚಾಲನೆ
ಹಾನಗಲ್ಲ: ತಾಲೂಕಿನ ನರೇಗಲ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ವಿಭಾಗಕ್ಕೆ ಶಾಸಕ ಶ್ರೀನಿವಾಸ ಮಾನೆ ಚಾಲನೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ, ಸಂಪನ್ಮೂಲ ವ್ಯಕ್ತಿ ಖ್ವಾಜಾ ಮೋಹಿದ್ದಿನ್, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಪೋಷಕರು ಪಾಲ್ಗೊಂಡಿದ್ದರು. ಮಕ್ಕಳ ಭವ್ಯ ಭವಿಷ್ಯಕ್ಕಾಗಿ ಅಕ್ಷರ ಅಭ್ಯಾಸದೊಂದಿಗೆ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಎಸ್‌ಡಿಎಂಸಿಯವರು ದಾಖಲಾತಿ ಆಂದೋಲನದ ಸಮಯದಲ್ಲಿ ಘೋಷಿಸಿದಂತೆ ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಒಂದು ಸಾವಿರ ರು. ಠೇವಣಿಯನ್ನು ಸಾಂಕೇತಿಕವಾಗಿ ವಿತರಿಸಿದರು.ಎಲ್‌ಕೆಜಿಗೆ ದಾಖಲಾದ 43 ಮಕ್ಕಳಿಗೆ ಪಠ್ಯಪುಸ್ತಕ, ಸ್ಕೂಲ್ ಬ್ಯಾಗ್, ನೋಟ್ ಪುಸ್ತಕ, ಪೆನ್ಸಿಲ್, ರಬ್ಬರ್ ಸಮೇತ ಅಭ್ಯಾಸದ ಸಾಮಗ್ರಿಗಳನ್ನು, ಹಿರಿಯ ಶಿಕ್ಷಕಿ ಕೆ.ಆರ್. ರೇಣುಕಮ್ಮ ಅವರು ತಮ್ಮ ಜನ್ಮದಿನದ ಪ್ರಯುಕ್ತ ನೋಟ್‌ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದರು. ಪ್ರಧಾನ ಗುರುಗಳಾದ ಮಲ್ಲಯ್ಯ ಹಿರೇಮಠ ತಿಳಿಸಿದರು.