ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಕೇಂದ್ರ ಸಚಿವರಾದ ಎಚ್.ಡಿ ಕುಮಾರಸ್ವಾಮಿಯವರ ಬಗ್ಗೆ ಕೆಟ್ಟ ಪದ ಬಳಕೆ ಮಾಡಿರುವ ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾದಳದ ಮುಖ್ಯಸ್ಥರಾಗಿರುವ ಎಡಿಜಿಪಿ ಎಮ್. ಚಂದ್ರಶೇಖರ್ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.ಬೀದರ್ ನಗರದ ಜೆಡಿಎಸ್ ಜಿಲ್ಲಾ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದ ಜೆಡಿಎಸ್ ನಾಯಕರು, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.|
ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲ್ಪೂರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಜೆಡಿಎಸ್ ನಾಯಕರು, ಭ್ರಷ್ಟಾಚಾರ, ದುರ್ನಡತೆ ಹಾಗೂ ಹಲವು ಕ್ರಿಮಿನಲ್ ಚಟುವಟಕೆಗಳಲ್ಲಿ ಭಾಗಿಯಾಗಿರುವ ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾದಳದ ಮುಖ್ಯಸ್ಥರಾಗಿರುವ ಎಡಿಜಿಪಿ ಎಮ್.ಚಂದ್ರಶೇಖರ ಅವರನ್ನು ಕೂಡಲೇ ಭಾರತೀಯ ಪೊಲೀಸ್ ಸೇವೆಯಿಂದ ಅಮಾನತ್ತು ಮಾಡಬೇಕು ಆಗ್ರಹಿಸಿದರು.ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಚಂದ್ರಶೇಖರ್ ಅವರು 1998ನೇ ಬ್ಯಾಚ್‌ನ ಕೇಡರ್ ಅಧಿಕಾರಿಯಾಗಿದ್ದು, ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿಯಾಗಿ, ಅತಿ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಕೇಂದ್ರ ಸಚಿವರಿಗೆ ಅವಮಾನ ಮಾಡಿ ಮಾತನಾಡಿದ ದುರ್ನಡತೆಯ ಅಧಿಕಾರಿಯನ್ನು ಕೂಡಲೇ ಭಾರತೀಯ ಪೊಲೀಸ್ ಸೇವೆಯಿಂದ ಅಮಾನತ್ತು ಮಾಡಬೇಕೆಂದು ರಾಜ್ಯಪಾಲರಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಜೆಡಿಎಸ್ ನಾಯಕರು ಮಾತನಾಡಿ, ಎಂ ಚಂದ್ರಶೇಖರ್ ಅವರನ್ನು ಕೂಡಲೇ ಅಮಾನತು ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ. ಈ ಕೂಡಲೇ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲ್ಪೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಡ್ಗೆ, ಪ್ರಮುಖರಾದ ದೇವೇಂದ್ರ ಸೋನಿ, ರಾಜು ಕಡ್ಯಾಳ, ಐಲಿನ್ ಜಾನ್ ಮಠಪತಿ, ಎಮ್.ಡಿ ಅಸದೋದ್ದಿನ್, ಸಜ್ಜಾದ ಸಾಹೇಬ್, ರಾಜಶೇಖರ ಜವಳೆ, ಬೊಮಗೊಂಡ ಚಿಟ್ಟಾವಾಡಿ, ಲಲಿತಾ ಕರಂಜಿ, ಅಭಿ ಕಾಳೆ, ಬಸವರಾಜ ಹಾರೂರಗೇರಿ, ಮಕ್ಸೂದ್ ಅಲಿ, ಶಿವಪುತ್ರ ಮಾಳಗೆ, ಪ್ರಲ್ಹಾದ್ ಚಿಟ್ಟಾವಾಡಿ, ಸಂಗು ಚಿದ್ರಿ, ರಾಜು ಚಿಂತಾಮಣಿ, ಅರುಣಕುಮಾರ್ ಎಸ್ ಹೊಸಪೇಟೆ, ಬಸವರಾಜ್ ಶಾಪೂರ್, ರವಿಕುಮಾರ್ ಎಸ್.ಎನ್ ಸಿರ್ಸಿ, ಪ್ರಶಾಂತ ವಿಶ್ವಕರ್ಮ, ಮಹಮ್ಮದ್ ಸಲಿಂ ಚಿಕನ್, ಜಗದೇವಿ ಮೇತ್ರಿ, ಶಾಂತಮ್ಮ, ನಾಗಮ್ಮ, ಲಕ್ಷ್ಮಣ ಗಾದಗಿ, ಚಂದಪ್ಪ, ಹಿರಾಮಣಿ ಬುದೇರಾ, ಶಿವಾಜಿ ಬರೂರ, ಸಂಜು ಬರೂರ, ಶಿವರಾಜ ಬಗದಲ್, ಗುರುದಾಸ್ ಕೋಳಾರ ಕೆ, ಜಾನ್ಸನ್, ಅಂಬಾದಾಸ ಸೋನಿ ಸೇರಿದಂತೆ ಅನೇಕರಿದ್ದರು.