ಸಾರಾಂಶ
ಹೊಳೆನರಸಿಪುರ ಶಾಸಕ ರೇವಣ್ಣ ಅವರಿಗೆ ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡ ಅವರು ಮುಂಗೋಪ ಬಿಡುವಂತೆ ಕಾರ್ಯಕರ್ತರ ಮುಂದೆಯೇ ಹೇಳಿದ ಪ್ರಸಂಗ ನಡೆಯಿತು.
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಕಾರ್ಯವೈಖರಿ ಕುರಿತು ಹೊಗಳಿ, ಮುಂಗೋಪ ಕೈಬಿಡುವಂತೆ ಪ್ರೀತಿಯಿಂದ ಬುದ್ಧಿವಾದ ಹೇಳಿದ ಪ್ರಸಂಗಕ್ಕೆ ಬುಧವಾರ ಚನ್ನರಾಯಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಸಾಕ್ಷಿಯಾಯಿತು.
ಭಾಷಣದಲ್ಲಿ ರೇವಣ್ಣ ಕಾರ್ಯವೈಖರಿ ಕುರಿತು ಪ್ರಸ್ತಾಪಿಸಿದ ದೇವೇಗೌಡ ಅವರು, ರೇವಣ್ಣ ಅವರ ಕೆಲಸಕ್ಕೆ ಯಾವ ಮಂತ್ರಿಯೂ ಸಾಟಿಯಿಲ್ಲ.ಆದರೆ ರೇವಣ್ಣ ಜನರ ಜೊತೆ ಮಾತನಾಡುವಾಗ ಸ್ವಲ್ಪ ಮುಂಗೋಪ ಪ್ರದರ್ಶಿಸುತ್ತಾರೆ.
ಇದನ್ನು ಅವರು ತಿದ್ದಿಕೊಳ್ಳಬೇಕು. ಮುಂಗೋಪ ಬಿಟ್ಟರೆ ಎಲ್ಲವೂ ಸರಿಯಾಗುತ್ತೆ ಎಂದು ಸಲಹೆ ನೀಡಿದರು.ಕಾಂಗ್ರೆಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ತೆಗೆದದ್ದು ಯಾರು? ಎಂದು ಪ್ರಶ್ನಿಸಿದರು.