ಇಂದು ಜೆಡಿಎಸ್‌ ನಿಂದ ಧರ್ಮಸ್ಥಳಕ್ಕೆ ಕಾರ್‌ ರ್‍ಯಾಲಿ

| Published : Aug 31 2025, 01:08 AM IST

ಇಂದು ಜೆಡಿಎಸ್‌ ನಿಂದ ಧರ್ಮಸ್ಥಳಕ್ಕೆ ಕಾರ್‌ ರ್‍ಯಾಲಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಪವಿತ್ರ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಕೆಲವರು ಮಾಡುತ್ತಿರುವ ಅಪಪ್ರಚಾರ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರಲು ನಡೆಯುತ್ತಿರುವ ಯತ್ನಗಳನ್ನು ತೀವ್ರವಾಗಿ ಖಂಡಿಸಿ, ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ಕಾರ್ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಇದು ಕೇವಲ ಒಂದು ರಾಜಕೀಯ ಕಾರ್ಯಕ್ರಮವಲ್ಲ, ನಮ್ಮ ಧರ್ಮ, ಸಂಸ್ಕೃತಿ ಹಾಗೂ ನಂಬಿಕೆಯನ್ನು ಕಾಪಾಡಿಕೊಳ್ಳುವ ಸಮೂಹ ಚಳವಳಿಯಾಗಿದೆ. ಆದ್ದರಿಂದ ಎಲ್ಲ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಏಕತೆ ಶಕ್ತಿ ತೋರಿಸಬೇಕು ಎಂದು ಮನವಿ ಮಾಡಿದರು.

ಅರಕಲಗೂಡು: ಹಿಂದೂ ಪವಿತ್ರ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಕೆಲವರು ಮಾಡುತ್ತಿರುವ ಅಪಪ್ರಚಾರ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರಲು ನಡೆಯುತ್ತಿರುವ ಯತ್ನಗಳನ್ನು ತೀವ್ರವಾಗಿ ಖಂಡಿಸಿ, ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ಕಾರ್ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.

ಶಾಸಕ ಎ.ಮಂಜು ನೇತೃತ್ವದಲ್ಲಿ ಅರಕಲಗೂಡಿನಿಂದ ಧರ್ಮಸ್ಥಳದವರೆಗೆ ಈ ಕಾರ್ ರ್‍ಯಾಲಿ ನಡೆಯಲಿದೆ ಎಂದು ತಾಪಂ ಮಾಜಿ ಅಧ್ಯಕ್ಷ ನರಸೇಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಧರ್ಮಸ್ಥಳವು ನಮ್ಮ ರಾಜ್ಯ ಮಾತ್ರವಲ್ಲದೆ ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದ್ದು, ಅಪಾರ ಭಕ್ತರ ಆರಾಧ್ಯ ದೈವ ಮಂಜುನಾಥ ಸ್ವಾಮಿಯ ಕ್ಷೇತ್ರವಾಗಿದೆ. ಇಂತಹ ಪವಿತ್ರ ಕ್ಷೇತ್ರದ ಬಗ್ಗೆ ಕೆಲವರು ಅಸತ್ಯ ಹಾಗೂ ದ್ವೇಷಪೂರಿತ ಪ್ರಚಾರ ನಡೆಸುತ್ತಿರುವುದು ಅತ್ಯಂತ ಖಂಡನೀಯ. ಹಿಂದೂ ಧರ್ಮದ ಅವಹೇಳನ ಮಾಡಲು ರೂಪಿಸಿರುವ ಈ ಸಂಚನ್ನು ಭಕ್ತರು ಏಕತೆಯಿಂದ ವಿಫಲಗೊಳಿಸಬೇಕಿದೆ ಎಂದು ಹೇಳಿದರು.

ರ್‍ಯಾಲಿ ಆ. 31 ಭಾನುವಾರ ಬೆಳಗ್ಗೆ 8 ಗಂಟೆಗೆ ಅರಕಲಗೂಡಿನ ಚಿಲುಮೆ ಮಠದ ಶ್ರೀಗುರುವಿಜಯ ಸಿದ್ಧ ಶಿವದೇವ ಮಂಗಳ ಮಂದಿರದಲ್ಲಿ ತಿಂಡಿ ಸೇವಿಸಿದ ಬಳಿಕ, ದೊಡ್ಡಮ್ಮ ದೇವಾಲಯ ಆವರಣದಿಂದ ಕಾರ್ ರ್‍ಯಾಲಿ ಪ್ರಾರಂಭವಾಗಲಿದೆ. ತಾಲೂಕಿನ ಪ್ರತಿಯೊಬ್ಬರೂ ತಮ್ಮ ಸ್ವಂತ ವಾಹನಗಳಲ್ಲಿ ಜಾತಿ- ಧರ್ಮ ಬೇಧವಿಲ್ಲದೆ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಇದು ಕೇವಲ ಒಂದು ರಾಜಕೀಯ ಕಾರ್ಯಕ್ರಮವಲ್ಲ, ನಮ್ಮ ಧರ್ಮ, ಸಂಸ್ಕೃತಿ ಹಾಗೂ ನಂಬಿಕೆಯನ್ನು ಕಾಪಾಡಿಕೊಳ್ಳುವ ಸಮೂಹ ಚಳವಳಿಯಾಗಿದೆ. ಆದ್ದರಿಂದ ಎಲ್ಲ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಏಕತೆ ಶಕ್ತಿ ತೋರಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಎ.ಎಂ. ರಘು, ರವಿಕುಮಾರ್, ಜಬೀಉಲ್ಲಾ, ಮಂಜು ಕಾಕೋಡನಹಳ್ಳಿ ಮುಂತಾದವರು ಹಾಜರಿದ್ದರು.