ಸಾರಾಂಶ
ಕೊರಟಗೆರೆ : ರಾಜ್ಯದಲ್ಲಿ ಜೆಡಿಎಸ್ ಪಕ್ಷ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿಯೇ ಕಾರ್ಯನಿರ್ವಹಿಸಿಕೊಂಡು ಬಂದಿರುವುದರಿಂದ ಪುನಃ ಕಾಂಗ್ರೆಸ್ ಜೊತೆ ಸೇರುವ ಕನಸು ಸಹ ಕಾಣುವುದಿಲ್ಲ. ಎಂದು ನಿವೃತ್ತ ಐಎಎಸ್ ಅಧಿಕಾರಿ ಮತ್ತು ಬಿಜೆಪಿ ಮುಖಂಡ ಬಿ.ಎಚ್ .ಅನಿಲ್‌ಕುಮಾರ್ ತಿಳಿಸಿದರು.
ಪಟ್ಟಣದ ಪಾಂಚಜನ್ಯ ಕಚೇರಿ ಆವರಣದಲ್ಲಿ ಅನಿಲ್‌ಕುಮಾರ್ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ೬೩ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಅಭಿಮಾನಿಗಳಿಗೆ ಸಿಹಿ ತಿನಿಸಿ ಅವರು ಮಾತನಾಡಿದರು.
ವಿಧಾನಸಭೆ ಚುನಾವಣೆಯಲ್ಲಿನ ಎರಡು ಪಕ್ಷದ ಅಭ್ಯರ್ಥಿಗಳ ಸೋಲಿಗೆ ಎನ್‌ಡಿಎ ಮೈತ್ರಿಕೂಟದ ನಿರ್ಧಾರಗಳು ಲೋಕಾಸಭೆ ಚುನಾವಣೆ ಅತ್ಯುತ್ತಮ ಫಲಿತಾಂಶದೊಂದಿಗೆ ಪ್ರತ್ಯುತ್ತರ ನೀಡಿದೆ. ಕೇಂದ್ರ ಸಚಿವ ವಿ.ಸೋಮಣ್ಣನವರ ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ಮಾದರಿಯಾಗಿದ್ದು. ಮುಂಬರುವ ಜಿ.ಪಂ ಮತ್ತು ತಾ.ಪಂ ಚುನಾವಣೆ ಗೆಲುವಿಗೆ ಬೂತ್ ಮಟ್ಟದಲ್ಲಿ ಸಂಘಟನಾತ್ಮಕ ಚಟುವಟಿಕೆಗಳನ್ನು ಮುಂದುವರೆಸಲಾಗಿದೆ ಎಂದು ಹೇಳಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ಪಕ್ಷದ ಅಭ್ಯರ್ಥಿಗಳು ಪರಭಾವಗೊಳ್ಳುವಂತಾಯಿತು. ಲೋಕಾಸಭೆಯಲ್ಲಿ ಮೈತ್ರಿಕೂಟ ತೆಗೆದುಕೊಂಡ ನಿರ್ಧಾರಗಳು ಗೆಲುವಿಗೆ ಪ್ರಮುಖ ಅಸ್ತ್ರವಾಗಿದೆ. ಅನಿಲ್‌ಕುಮಾರ್‌ರವರಿಗೆ ಅವಕಾಶ ನೀಡಿದರೆ 100ಕ್ಕೆ100 ರಷ್ಟು ಗೆಲ್ಲಿಸುವ ಜವಬ್ದಾರಿ ನಮ್ಮದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಅಧ್ಯಕ್ಷ ಕಾಮರಾಜು, ಕಾರ್ಯಾಧ್ಯಕ್ಷ ತುಂಬಾಡಿ ಲಕ್ಷ್ಮೀಶ್, ನಿಕಟಪೂರ್ವ ಕಾರ್ಯಾಧ್ಯಕ್ಷ ನರಸಿಂಹರಾಜು, ದರ್ಶನ್ ಕೆ.ಎಲ್, ಬಿಜೆಪಿ ಅಧ್ಯಕ್ಷ ರುದ್ರೇಶ್, ಅರುಣ್, ದಾಡಿವೆಂಕಟೇಶ್, ದಯಾನಂದ್, ದಾಸಲುಕುಂಟೆ ರಘು, ಸ್ವಾಮಿ, ಚೇತನ್, ಆನಂದ್, ಸೇರಿದಂತೆ ಇತರರು ಇದ್ದರು.