ಜೆಇಇ: ಆರ್.ಜೆ ಕಾಲೇಜು ವಿದ್ಯಾರ್ಥಿಗಳ ಸಾಧನೆ

| Published : Feb 15 2025, 12:31 AM IST

ಸಾರಾಂಶ

JEE: Achievement of RJ College students

ಕಲಬುರಗಿ: ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಜೆಇಇ ಮೇನ್ಸ್ ಫಸ್ಟ್ ಫೇಸ್ ಪರೀಕ್ಷೆಯಲ್ಲಿ ಪ್ರಕಾಶ ಪೂಜಾರಿ 98.57, ಸಮೀರ್ ಅಶ್ರಿತ್ 91.27, ವೈಭವ್ ವೆಂಕಟೇಶ 85.98, ಅನುವೈಷ್ಣವಿ 85.88 ಉತ್ತಮ ಪರ್ಸಂಟೈಲ್ ಪಡೆದು ಜೆಇಇ ಅಡ್ವಾನ್ಸ್‍ಗೆ ಅರ್ಹತೆ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಜೆಇಇ, ಸಿ.ಇ.ಟಿ, ನೀಟ್ ತರಬೇತಿಯಲ್ಲಿ ನುರಿತ ಉಪನ್ಯಾಸಕ ವೃಂದದ ಸೇವೆ ಅಮೋಘವಾದುದು, ವಿದ್ಯಾರ್ಥಿಗಳ ಈ ಪ್ರತಿಭೆಗೆ ನಿರ್ದೇಶಕರೂ ಆದ ಪ್ರಾಚಾರ್ಯ ಡಾ. ಭುರ್ಲಿ ಪ್ರಹ್ಲಾದ ಮೆಚ್ಚಿಗೆ ವ್ಯಕ್ತಪಡಿಸಿ, ಅಭಿನಂದಿಸಿದರು. ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕ, ಸಿಬ್ಬಂದಿ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ.

----ಫೋಟೋ- ಜೆಇಇ ಮ್ಯಾಟರ್‌