ಜೆಇಇ ಮೇನ್‌ ಪರೀಕ್ಷೆ: ಸಿದ್ಧಗಂಗಾ ಮಕ್ಕಳ ಸಾಧನೆ

| Published : Feb 16 2024, 01:47 AM IST

ಸಾರಾಂಶ

ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಕಾಲೇಜಿನಿಂದ 104 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಜೆಇಇ ಅಡ್ವಾನ್ಸ್ಡ್‌ಪರೀಕ್ಷೆಗೆ ಅರ್ಹತೆಯ ನಿರೀಕ್ಷಾ ಕಕ್ಷೆಗೆ ಬಂದು ತಲುಪಿದ್ದು, ವಿದ್ಯಾರ್ಥಿಗಳ ಸೃಜನಾತ್ಮಕ ಶ್ರಮಕ್ಕೆಪ್ರತಿಫಲ ಸಿಕ್ಕಂತಾಗಿದೆ ಎಂದು ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ ಹರ್ಷ ವ್ಯಕ್ತಪಡಿಸಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲೊಂದಾದ ದಾವಣಗೆರೆಯ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2023-24ನೇ ಸಾಲಿನ ಜೆಇಇ ಮೇನ್ ಪರೀಕ್ಷೆಯಲ್ಲಿ ಅಭೂತ ಪೂರ್ವ ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಕಾಲೇಜಿನಿಂದ 104 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಜೆಇಇ ಅಡ್ವಾನ್ಸ್ಡ್‌ಪರೀಕ್ಷೆಗೆ ಅರ್ಹತೆಯ ನಿರೀಕ್ಷಾ ಕಕ್ಷೆಗೆ ಬಂದು ತಲುಪಿದ್ದು, ವಿದ್ಯಾರ್ಥಿಗಳ ಸೃಜನಾತ್ಮಕ ಶ್ರಮಕ್ಕೆಪ್ರತಿಫಲ ಸಿಕ್ಕಂತಾಗಿದೆ ಎಂದು ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ ಹರ್ಷ ವ್ಯಕ್ತಪಡಿಸಿದೆ.

ಶ್ರೀ ಸಿದ್ಧಗಂಗಾ ಕಾಲೇಜಿನ 104 ವಿದ್ಯಾರ್ಥಿಗಳ ಪೈಕಿ ಗಿರೀಶ ಐ.ಕಾಕನೂರು ಶೇ.99.33 ಅಂಕ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿ, ಗಮನ ಸೆಳೆದಿದ್ದಾನೆ. ಒಟ್ಟು 25 ವಿದ್ಯಾರ್ಥಿಗಳು ಶೇ.90ಕ್ಕಿಂತಲೂ ಹೆಚ್ಚು ಅಂಕ ಪಡೆದು, ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ತಮ್ಮ ಸಾಧನೆಯ ಮೂಲಕ ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿಸೌಜಾ, ಕಾರ್ಯದರ್ಶಿ ಡಿ.ಎಸ್.ಹೇಮಂತ್, ಅಧ್ಯಕ್ಷರಾದ ಡಿ.ಎಸ್‌.ಪ್ರಶಾಂತ್, ನಿರ್ದೇಶಕರಾದ ಡಾ.ಡಿ.ಎಸ್.ಜಯಂತ್, ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿ, ಮುಂದಿನ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.