ಜೆಇಇ ಮೈನ್‌ ಫಲಿತಾಂಶ: ಜ್ಞಾನಸುಧಾದ ೯ ವಿದ್ಯಾರ್ಥಿಗಳಿಗೆ ೯೯ಕ್ಕಿಂತ ಅಧಿಕ ಪರ್ಸಂಟೈಲ್

| Published : Apr 20 2025, 01:56 AM IST

ಜೆಇಇ ಮೈನ್‌ ಫಲಿತಾಂಶ: ಜ್ಞಾನಸುಧಾದ ೯ ವಿದ್ಯಾರ್ಥಿಗಳಿಗೆ ೯೯ಕ್ಕಿಂತ ಅಧಿಕ ಪರ್ಸಂಟೈಲ್
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರಮಟ್ಟದಲ್ಲಿ ಎಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ. ನಡೆಸುವ ಜೆಇಇ ಮೈನ್ ಪರೀಕ್ಷೆಯ ೨ನೇ ಫೇಸ್‌ನ ಅಂತಿಮ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ೯ ವಿದ್ಯಾರ್ಥಿಗಳು ೯೯ಕ್ಕೂಅಧಿಕ ಪರ್ಸಂಟೈಲ್ ಪಡೆದಿದ್ದು, ಇಬ್ಬರು ವಿದ್ಯಾರ್ಥಿಗಳು ಭೌತಶಾಸ್ತ್ರದಲ್ಲಿ ೧೦೦ ಪರ್ಸಂಟೈಲ್‌ಗಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ವಿದ್ಯಾರ್ಥಿಗಳಾದ ಆಕಾಶ್‌ ಎಚ್. ಪ್ರಭು ೯೯.೯೧೯೪೨೦೬ ಪರ್ಸಂಟೈಲ್, ಧನುಶ್‌ ನಾಯಕ್ ೯೯.೭೩೩೦೫೦೭ ಪರ್ಸಂಟೈಲ್, ತರುಣ್‌ ಎ. ಸುರಾನ ೯೯.೭೩೨೯೮೭೯ ಪರ್ಸಂಟೈಲ್, ಕೆ.ಮನೋಜ್‌ ಕಾಮತ್ ೯೯.೬೮೧೧೮೬೪ ಪರ್ಸಂಟೈಲ್, ಚಿಂತನ್‌ ಜೆ. ಮೆಘಾವತ್ ೯೯.೬೬೮೬೧೨೩ ಪರ್ಸಂಟೈಲ್, ಹೃತ್ವಿಕ್ ಶೆಟ್ಟಿ ೯೯.೬೫೮೨೨೧೫ ಪರ್ಸಂಟೈಲ್, ವೇದಾಂತ್ ಶೆಟ್ಟಿ ೯೯.೨೯೨೯೭೦೮ ಪರ್ಸಂಟೈಲ್, ಸತೀಶ್‌ ಎಸ್. ಕರಗನ್ನಿ ೯೯.೧೪೪೪೩೭೭ ಪರ್ಸಂಟೈಲ್ ಹಾಗೂ ಅಪೂರ್ವ್ ವಿ. ಕುಮಾರ್ ೯೯.೦೫೧೨೦೪೫ ಪರ್ಸಂಟೈಲ್ ಪಡೆದಿದ್ದಾರೆ.ವಿಷಯವಾರು ಅತ್ಯಧಿಕ ಪರ್ಸಂಟೈಲ್ ಗಳಿಸಿದ ಸಂಸ್ಥೆಯ ವಿದ್ಯಾರ್ಥಿಗಳಲ್ಲಿ, ಭೌತಶಾಸ್ತ್ರದಲ್ಲಿ ಸರ್ವಜಿತ್‌ ಕೆ.ಆರ್. ಮತ್ತು ಸಿದ್ಧಾರ್ಥ್ ಎ. ೧೦೦ ಪರ್ಸಂಟೈಲ್‌, ರಸಾಯನಶಾಸ್ತ್ರದಲ್ಲಿ ಅಮರ್ಥ್ಯ ಭಟ್ ೯೯.೯೭೧೪೩೪೨ ಪರ್ಸಂಟೈಲ್ ಹಾಗೂ ಗಣಿತಶಾಸ್ತ್ರದಲ್ಲಿ ಕೆ.ಮನೋಜ್‌ ಕಾಮತ್ ೯೯.೯೩೩೧೬೬೬ ಪರ್ಸಂಟೈಲ್‌ ಪಡೆದಿದ್ದಾರೆ.ವಿಷಯವಾರು ವಿಭಾಗದಲ್ಲಿ ಸಂಸ್ಥೆಯು, ಭೌತಶಾಸ್ತ್ರದಲ್ಲಿ ೩೪ ಮಂದಿ, ರಸಾಯನಶಾಸ್ತçದಲ್ಲಿ ೩೫ ಮಂದಿ ಹಾಗೂ ಗಣಿತಶಾಸ್ತ್ರದಲ್ಲಿ ೭ ಮಂದಿ ವಿದ್ಯಾರ್ಥಿಗಳು ೯೯ಕ್ಕಿಂತ ಅಧಿಕ ಪರ್ಸಂಟೈಲ್ ದಾಖಲಸಿಕೊಂಡಿದ್ದಾರೆ.

ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾದ ಜ್ಞಾನಸುಧಾ ಎಂಟ್ರನ್ಸ್‌ ಅಕಾಡೆಮಿಯ ಪರಿಶ್ರಮವನ್ನು ಅಜೆಕಾರ್ ಪದ್ಮಗೋಪಾಲ್‌ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿ ಹರ್ಷವ್ಯಕ್ತಪಡಿಸಿದೆ.