ಜೆಇಇ ಮೈನ್‌ ಸಾಧನೆ: ಶಿಶಿರ್‌ ಶೆಟ್ಟಿಗೆ ಎಕ್ಸಲೆಂಟ್‌ ಸನ್ಮಾನ

| Published : Apr 28 2025, 11:50 PM IST

ಸಾರಾಂಶ

ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ ನಡೆಸುವ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆಯಲು ನಡೆಸುವ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ೯೯.೯೭೧೪೩ ಪರ್ಸೆಂಟೈಲ್ ನೊಂದಿಗೆ ಪ್ರಥಮ ಸ್ಥಾನಿಯಾದ ಶಿಶಿರ್ ಶೆಟ್ಟಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ೭ನೇ ಟಾಪರ್ ಆಗಿದ್ದರು. ಅವರ ಸಾಧನೆ ಗುರುತಿಸಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಎನ್‌ಟಿಎ ನಡೆಸುವ ರಾಷ್ಟ್ರಮಟ್ಟದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಜೆಇಇ ಮೈನ್ ನಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಇಲ್ಲಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಶಿಶಿರ್ ಶೆಟ್ಟಿಯನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ ನಡೆಸುವ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆಯಲು ನಡೆಸುವ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ೯೯.೯೭೧೪೩ ಪರ್ಸೆಂಟೈಲ್ ನೊಂದಿಗೆ ಪ್ರಥಮ ಸ್ಥಾನಿಯಾದ ಶಿಶಿರ್ ಶೆಟ್ಟಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ೭ನೇ ಟಾಪರ್ ಆಗಿದ್ದರು.

ಸನ್ಮಾನಕ್ಕೆ ಪ್ರತಿಕ್ರಯಿಸಿದ ಶಿಶಿರ್ ವಿದ್ಯೆ ಸಾಧಕನ ಸೊತ್ತೇ ಹೊರತು ಸೋಮಾರಿಯ ಸೊತ್ತಲ್ಲ. ಸತತ ಪರಿಶ್ರಮ, ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಅವರ ನಿರಂತರ ಪ್ರೋತ್ಸಾಹ, ಉಪನ್ಯಾಸಕ ವೃಂದದ ಬೆಂಬಲ ನಾನು ಈ ಗುರಿ ತಲುಪುವಲ್ಲಿ ಸಹಕಾರಿಯಾಯಿತು ಎಂದರು. ಸನ್ಮಾನಕ್ಕೆ ಪ್ರತಿಕ್ರಯಿಸಿದ ಶಿಶಿರ್ ಹೆತ್ತವರು ನನ್ನ ಮಗನ ಸಾಧನೆಯಲ್ಲಿ ಎಕ್ಸಲೆಂಟ್‌ನ ಕೊಡುಗೆ ಅನನ್ಯ. ಇಲ್ಲಿನ ಗುರುಕುಲ ಮಾದರಿಯ ಶಿಕ್ಷಣ ವ್ಯಕ್ತಿಗಿಂತ ರಾಷ್ಟ್ರ ಮುಖ್ಯ ಎಂಬ ಅಬ್ದುಲ್ ಕಲಾಂ ಅವರ ಯೋಜನೆಗಳು ನನ್ನ ಮಗನಲ್ಲಿ ಹುಟ್ಟುವುದಕ್ಕೆ ಕಾರಣವಾಯಿತು. ಮುಂದೆ ಇಲ್ಲಿ ಕಲಿತ ಸಂಸ್ಕಾರ ಶಿಕ್ಷಣ ಅವನಿಂದ ದೇಶಕ್ಕೆ ಏನಾದರೂ ಸೇವೆ ಸಿಗುವಲ್ಲಿ ಉಪಯೋಗವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಎಕ್ಸಲೆಂಟ್ ಸಂಸ್ಥೆ ವಿದ್ಯೆಯೆಂಬ ಬೆಳಕು ನೀಡುತ್ತದೆ. ಈ ಬೆಳಕಿನ ಸಾನಿಧ್ಯ ವಲಯಕ್ಕೆ ಸಿಕ್ಕಿ ಬಿದ್ದವುಗಳೆಲ್ಲಾ ಜ್ಯೋತಿರ್ಮಯವಾಗುತ್ತವೆ. ಪಠ್ಯ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮೌಲ್ಯಯುತ ಶಿಕ್ಷಣ ನೀಡುತ್ತಾ ಭಾರತದ ಭವಿಷ್ಯ ನಿರ್ಮಾಣಕ್ಕೆ ಶ್ರೇಷ್ಠ ಯುವ ಸಮುದಾಯವನ್ನು ಕೊಡುವುದೇ ನಮ್ಮ ಸಂಕಲ್ಪ ಎಂದರು.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಸ್ಪರ್ಧಾತ್ಮಕ ಪರೀಕ್ಷೆಗಳ ನಿರ್ದೇಶಕ ಡಾ. ಪ್ರಶಾಂತ್ ಹೆಗ್ಡೆ, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಮತ್ತಿತರರಿದ್ದರು. ಉಪನ್ಯಾಸಕ ವಿಕ್ರಮ್ ನಾಯಕ್ ನಿರೂಪಿಸಿ, ವಂದಿಸಿದರು