ಜೆಇಇ ಮೇನ್ಸ್: ಎಸ್ಬಿಆರ್‌ಗೆ ವಿನಯಕುಮಾರ ಪ್ರಥಮ

| Published : Apr 27 2024, 01:00 AM IST

ಸಾರಾಂಶ

ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಅಭ್ಯಾಸ ಮಾಡಿರುವ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಕಳೆದ ಏಪ್ರೀಲ್ ತಿಂಗಳಲ್ಲಿ ನಡೆದ ಜೆ.ಇ.ಇ. ಮೇನ್ಸ್ ಅಂತಿಮ ಪರೀಕ್ಷೆಯಲ್ಲಿ ಕುಮಾರ ವಿನಯಕುಮಾರ ಕೆ. 99.79 ಪರ್ಸೇಂಟೈಲ್ ಪಡೆದು ಕಾಲೇಜಿನ ಗೌರವ ಹೆಚ್ಚಿಸಿದ್ದಾನೆ.

ಕನ್ನಡಪ್ರಭ ವಾರ್ತೆ ಕಲಬುರಗಿ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಅಭ್ಯಾಸ ಮಾಡಿರುವ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಕಳೆದ ಏಪ್ರೀಲ್ ತಿಂಗಳಲ್ಲಿ ನಡೆದ ಜೆ.ಇ.ಇ. ಮೇನ್ಸ್ ಅಂತಿಮ ಪರೀಕ್ಷೆಯಲ್ಲಿ ಕುಮಾರ ವಿನಯಕುಮಾರ ಕೆ. 99.79 ಪರ್ಸೇಂಟೈಲ್ ಪಡೆದು ಕಾಲೇಜಿನ ಗೌರವ ಹೆಚ್ಚಿಸಿದ್ದಾನೆ.

ಇದೇ ಕಾಲೇಜಿನ ರೋಹನ ಆರ್. 99.55 ಪರ್ಸೇಂಟೈಲ್ ನೊಂದಿಗೆ ಕಾಲೇಜಿಗೆ ದ್ವಿತೀಯ ರ್ಯಾಂಕ ಗಳಿಸಿದ್ದಾನೆ. ಅಂಬರೇಶ ಹಿಬಾರೆ 99.47 ಪರ್ಸೇಂಟೈಲ್ ದೊಂದಿಗೆ ಮೂರನೇ ರ್ಯಾಂಕ ಪಡೆದರೆ ಕುಮಾರ ಮಲ್ಲಿಕಾರ್ಜನ 99.29 ಪರ್ಸೇಂಟೈಲ್ ದೊಂದಿಗೆ ನಾಲ್ಕನೆ ಸ್ಥಾನ ಪಡೆದಿದ್ದಾನೆ.7 ವಿದ್ಯಾರ್ಥಿಗಳು 98 ಪರ್ಸೇಂಟೈಲ್ ಗಿಂತ ಅಧಿಕ ಅಂಕ ಪಡೆದರೆ 09 ವಿದ್ಯಾರ್ಥಿಗಳು 97 ಪರ್ಸೇಂಟೈಲ್ ಗಿಂತ ಅಧಿಕ, 13 ವಿದ್ಯಾರ್ಥಿಗಳು 96 ಪರ್ಸೇಂಟೈಲ್ ಗಿಂತ ಅಧಿಕ ಹಾಗೂ 46 ವಿದ್ಯಾರ್ಥಿಗಳು 90 ಪರ್ಸೇಂಟೈಲ್ ಕ್ಕಿಂತ ಅಧಿಕ ಫಲಿತಾಂಶ ಪಡೆದಿದ್ದಾರೆ.

168 ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಎನ್.ಐ.ಟಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲಿದ್ದಾರೆ ಮತ್ತು ಜೆ.ಇ.ಇ ಅಡ್ವಾನ್ಸ್‍ಡ್ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ.ವಿದ್ಯಾಭಂಡಾರಿ ಡಾ. ಶರಣಬಸವಪ್ಪ ಅಪ್ಪಾ ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ ಅವರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚಿ ಉತ್ತಮ ಭವಿಷ್ಯಕ್ಕಾಗಿ ಆಶೀರ್ವಾದ ಮಾಡಿದ್ದಾರೆ.

ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ ಚೇರ್ ಪರ್ಸನ್ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ ಈ ಫಲಿತಾಂಶವನ್ನು ನೋಡಿ ಆನಂದ ಪಟ್ಟಿದ್ಧಾರೆ. ನೀಟ್ ಜೊತೆಗೆ ಜೆ.ಇ.ಇ. ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆಯಲು ಶ್ರಮಪಟ್ಟ ಗುರು-ಶಿಷ್ಯರ ಕಾಯಕನಿಷ್ಠೆಗೆ ಅಭಿನಂದಿಸಿ ವಿದ್ಯಾರ್ಥಿಗಳ ಅರ್ಥಪೂರ್ಣ ಭವಿಷ್ಯಕ್ಕಾಗಿ ಆಶೀರ್ವದಿಸಿದ್ದಾರೆ.

ಬಸವರಾಜ ದೇಶಮುಖ ಕಾರ್ಯದರ್ಶಿಗಳು ಕಲಬುರಗಿ ಇವರು ವಿದ್ಯಾರ್ಥಿಗಳ ಫಲಿತಾಂಶ ಕಂಡು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹರ್ಷ ವ್ಯಕ್ತಪಡಿಸಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ, ಪ್ರಾಚಾರ್ಯರಾದ ಎನ್.ಎಸ್.ದೇವರಕಲ್ ಸರ್ ಅವರ ಮಾರ್ಗದರ್ಶನದಲ್ಲಿ ಕಾಲೇಜಿನ ಮೇಲ್ವಿಚಾರಕರಾದ ಡಾ. ಶ್ರೀಶೈಲ್ ಹೋಗಾಡೆ ಹಾಗೂ ಗುರುವೃಂದ ದವರ ಶ್ರಮ ಸಂಸ್ಕೃತಿಗೆ ದೊರೆತ ಫಲಿತಾಂಶ ಇದಾಗಿದೆ. ವಿದ್ಯಾರ್ಥಿಗಳ ಭಾವಿ ಜೀವನ ಅರ್ಥಪೂರ್ಣವಾಗಲಿ ಎಂದು ಶುಭ ಹಾರೈಸಿದ್ದಾರೆ.