ಪ್ರತಿಯೊಬ್ಬ ಸರಕಾರಿ ನೌಕರರು ತಮ್ಮ ತಮ್ಮ ಇಲಾಖೆಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ಸಂಪೂರ್ಣ ಸೇವಾವಧಿಯನ್ನು ಮುಗಿಸಿ ನಿವೃತ್ತಿ ಜೀವನಕ್ಕೆ ಕಾಲಿಡುವುದು ಒಂದು ಸುವರ್ಣ ಸಂದರ್ಭ. ನಾಗರಾಜುರವರ 37 ವರ್ಷಗಳ ಸುದೀರ್ಘ ಶೈಕ್ಷಣಿಕ ಸೇವೆ ಮಾದರಿಯಾದುದು ಎಂದು ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ. ವರದರಾಜು ಅಭಿಪ್ರಾಯಪಟ್ಟರು. ಇದೇ ವೇಳೆ ನಿವೃತ್ತ ಶಿಕ್ಷಕ ಟಿ. ಎಂ. ನಾಗರಾಜ ಅವರಿಗೆ ಸುದೀರ್ಘ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ತಾಲೂಕು ನೌಕರರ ಸಂಘದ ವತಿಯಿಂದ "ಜೀವಮಾನ ಶಿಕ್ಷಣ ಸಾಧನ ರತ್ನ ಪ್ರಶಸ್ತಿ " ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಆಲೂರು

ಪ್ರತಿಯೊಬ್ಬ ಸರಕಾರಿ ನೌಕರರು ತಮ್ಮ ತಮ್ಮ ಇಲಾಖೆಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ಸಂಪೂರ್ಣ ಸೇವಾವಧಿಯನ್ನು ಮುಗಿಸಿ ನಿವೃತ್ತಿ ಜೀವನಕ್ಕೆ ಕಾಲಿಡುವುದು ಒಂದು ಸುವರ್ಣ ಸಂದರ್ಭ. ನಾಗರಾಜುರವರ 37 ವರ್ಷಗಳ ಸುದೀರ್ಘ ಶೈಕ್ಷಣಿಕ ಸೇವೆ ಮಾದರಿಯಾದುದು ಎಂದು ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ. ವರದರಾಜು ಅಭಿಪ್ರಾಯಪಟ್ಟರು.

ಅವರು ಆಲೂರು ಪಟ್ಟಣದ ರಾಜ್ಯ ಸರ್ಕಾರಿ ನೌಕರ ಸಂಘದ ಸಭಾಂಗಣದಲ್ಲಿ ನಿವೃತ್ತ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ "ಜೀವಮಾನ ಶಿಕ್ಷಣ ಸಾಧನಾ ರತ್ನ ಪ್ರಶಸ್ತಿ " ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಗರಾಜು ಅವರು 1966 ಆಗಸ್ಟ್ 20ರಂದು ಆಲೂರು ತಾಲೂಕಿನ ಕುಂದೂರು ಹೋಬಳಿಯ ತಟ್ಟೆಕೆರೆ ಗ್ರಾಮದಲ್ಲಿ ನಿಂಗಮ್ಮ ಹಾಗೂ ಮಲ್ಲೇಗೌಡ ದಂಪತಿಗಳ ಮೂರನೇ ಮಗನಾಗಿ ಜನಿಸಿ ಪ್ರಾಥಮಿಕ ಪ್ರೌಢಶಾಲೆ ಶಿಕ್ಷಣವನ್ನು ಪೂರೈಸಿದ ನಂತರ ಶಿಕ್ಷಕರ ತರಬೇತಿ ಪಡೆದು ತದನಂತರ 1988 ಡಿಸೆಂಬರ್ 27ರಂದು ಸಕಲೇಶಪುರ ತಾಲೂಕಿನ ವನಗೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಅಧ್ಯಾಪಕರಾಗಿ ವೃತ್ತಿ ಜೀವನಕ್ಕೆ ಪಾದರ್ಪಣೆ ಮಾಡಿ ತದನಂತರ ಸಕಲೇಶಪುರ ತಾಲೂಕಿನ ಹಳೆಕೆರೆ ಕಿರಿಯ ಪ್ರಾಥಮಿಕ ಶಾಲೆ ನಂತರ ಹಾಸನ ತಾಲೂಕಿನ ಗುಡ್ಡೇನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ 2008 ಡಿಸೆಂಬರ್ 30ರಂದು ಆಲೂರು ತಾಲೂಕಿನ ಖ್ಯಾತನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕರಾಗಿ ಭಡ್ತಿ ಪಡೆದು 2009ರ ಜೂನ್ ಮಾಹೆಯಲ್ಲಿ ಬೇಲೂರು ತಾಲೂಕಿನ ತಿರುಮಲಹಳ್ಳಿ ಶಾಲೆಗೆ ವರ್ಗಾವಣೆಗೊಂಡು ನಂತರ 2010ರಲ್ಲಿ ಹಾಸನ ತಾಲೂಕಿನ ಹಾಲುವಾಗಿಲು ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕರಾಗಿ ವರ್ಗಾವಣೆಗೊಂಡು ಪುನಹ 2021 ಏಪ್ರಿಲ್ ಒಂಬತ್ತರಂದು ಕ್ಯಾತನಹಳ್ಳಿ ಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕರಾಗಿ ವರ್ಗಾವಣೆಗೊಂಡು 2026 ಏಪ್ರಿಲ್ 10ರಂದು ಆಲೂರು ತಾಲೂಕಿನ ರಾಯರ ಕೊಪ್ಪಲು, ಕರ್ನಾಟಕ ಪಬ್ಲಿಕ್ ಶಾಲೆಗೆ ಹಿರಿಯ ಮುಖ್ಯ ಶಿಕ್ಷಕರಾಗಿ ಭಡ್ತಿ ಪಡೆದು 2026 ಆಗಸ್ಟ್ 31 ರಂದು ಸೇವಾ ನಿವೃತ್ತಿಯನ್ನು ಪಡೆದಿದ್ದಾರೆ ಇವರ ಸುದೀರ್ಘ 37 ವರ್ಷಗಳ ಶೈಕ್ಷಣಿಕ ಸೇವೆಯಲ್ಲಿ ಸಾವಿರಾರು ಮಕ್ಕಳಿಗೆ ಮಾಡಿ ಉತ್ತಮ ನಾಗರೀಕರನ್ನಾಗಿ ರೂಪಿ ಸಿದ್ದಾರೆ ಎಂದರು.

ನಿವೃತ್ತ ಶಿಕ್ಷಕ ಟಿ. ಎಂ. ನಾಗರಾಜ ಅವರಿಗೆ ಸುದೀರ್ಘ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ತಾಲೂಕು ನೌಕರರ ಸಂಘದ ವತಿಯಿಂದ "ಜೀವಮಾನ ಶಿಕ್ಷಣ ಸಾಧನ ರತ್ನ ಪ್ರಶಸ್ತಿ " ನೀಡಿ ಗೌರವಿಸಲಾಯಿತುಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ನೌಕರ ಸಂಘದ ಮಾಜಿ ಅಧ್ಯಕ್ಷರಾದ ನಯನ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಆರ್. ಶ್ರೀನಿವಾಸ್, ನಿರ್ದೇಶಕರಾದ ವೈ. ಆರ್. ರವಿ ವೆಂಕಟೇಶ್ ಶಿಕ್ಷಕರಾದ ಸಿ. ಎಸ್. ಅಣ್ಣಪ್ಪ, ಆರ್. ಶಿವರಾಂ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂಆರ್ ವೇಣುಗೋಪಾಲ್, ಕಾರ್ಯದರ್ಶಿ ಪ್ರವೀಣ್ ಕುಮಾರ್, ಮಹಿಳಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೈಮೂನ, ಕಾರ್ಯದರ್ಶಿ ವೀಣಾ, ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಇದ್ದರು.