ಚಿನ್ನಾಭರಣ ಕಳವು: ಆರೋಪಿ ಬಂಧನ

| Published : Feb 13 2025, 12:48 AM IST

ಸಾರಾಂಶ

ಪಾವಗಡ ತಾಲೂಕಿನ ಯರಪಾಳ್ಯ ಗ್ರಾಮದ 30 ವರ್ಷ ವಯಸ್ಸಿನ ಶ್ರೀನಿವಾಸ್ ಕಳ್ಳತನ ಮಾಡಿದ ಆರೋಪಿ. ಆರೋಪಿಯಿಂದ 1.42 ಲಕ್ಷ ಬೆಲೆಬಾಳುವ ಚಿನ್ನಾಭರಣ ವಶಪಡಿಸಿಕೊಂಡು ಬಂಧಿಸಿದ್ದಾರೆ.

ಶಿರಾ: ತಾಲೂಕಿನ ಚಂಗಾವರ ಗ್ರಾಮದ ಸಿದ್ದಲಿಂಗಮ್ಮ ಎಂಬುವರ ಮನೆಯಲ್ಲಿ, ಹಾಡಹಗಲೇ ಕಳ್ಳತನ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಪಟ್ಟನಾಯಕನಹಳ್ಳಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾವಗಡ ತಾಲೂಕಿನ ಯರಪಾಳ್ಯ ಗ್ರಾಮದ 30 ವರ್ಷ ವಯಸ್ಸಿನ ಶ್ರೀನಿವಾಸ್ ಕಳ್ಳತನ ಮಾಡಿದ ಆರೋಪಿ. ಆರೋಪಿಯಿಂದ 1.42 ಲಕ್ಷ ಬೆಲೆಬಾಳುವ ಚಿನ್ನಾಭರಣ ವಶಪಡಿಸಿಕೊಂಡು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ರವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿ. ಮರಿಯಪ್ಪ ಮತ್ತು ಬಿ.ಎಸ್. ಅಬ್ದುಲ್ ಖಾದರ್ ನೇತೃತ್ವದಲ್ಲಿ ಡಿವೈಎಸ್ಪಿ ಬಿ.ಕೆ.ಶೇಖರ್ ಸೂಚನೆ ಮೇರೆಗೆ ಶಿರಾ ಗ್ರಾಮಾಂತರ ವೃತ್ತ ನಿರೀಕ್ಷಕ ಕೆ.ಆರ್. ರಾಘವೇಂದ್ರ, ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಪಿಎಸ್ಐಗಳಾದ ಎನ್.ಎಂ.ಭವಿತಾ, ಸುಹೇಲ್ ಅಹಮದ್, ಸಿಬ್ಬಂದಿ ಹನುಮಂತಾಚಾರ್, ಗುಂಡ ನಾಯ್ಕ, ಗಣೇಶ್, ಆರ್. ಶ್ರೀನಿವಾಸ್, ನಟರಾಜ ನಾಯಕ, ಜಗದೀಶ್, ಗೋಪಿನಾಥರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.