ಸಾರಾಂಶ
ಸಮೀಪದ ಅರದೋಟ್ಲು ಗ್ರಾಮದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಆರೋಪಿಗಳನ್ನು ಬಂದಿಸುವಲ್ಲಿ ಪಟ್ಟಣದ ಪೋಲೀಸರು ಯಶಸ್ವಿಯಾಗಿದ್ದಾರೆ.
ಹೊಳೆಹೊನ್ನೂರು: ಸಮೀಪದ ಅರದೋಟ್ಲು ಗ್ರಾಮದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಆರೋಪಿಗಳನ್ನು ಬಂದಿಸುವಲ್ಲಿ ಪಟ್ಟಣದ ಪೋಲೀಸರು ಯಶಸ್ವಿಯಾಗಿದ್ದಾರೆ. ಅರದೋಟ್ಲು ಗ್ರಾಮದ ಚಂದ್ರಕಲಾ ಎಂಬುವರ ಮನೆಯಲ್ಲಿ ಜೂನ್ 16ರ ಸೋಮವಾರದಂದು ಕಳ್ಳತನವಾಗಿದೆ ಎಂದು ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೋಲೀಸರು ಚನ್ನಗಿರಿಯ ಅಪ್ರೋಜ್ ಅಹಮದ್ ಎಂಬ ಆರೋಪಿಯನ್ನು ಬಂದಿಸಿ 66 ಗ್ರಾಂ ಚಿನ್ನ, 113 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಐ ಲಕ್ಷ್ಮೀಪತಿ, ಸಿಬ್ಬಂದಿಗಳಾದ ಅಣ್ಣಪ್ಪ, ಪ್ರಸನ್ನ, ಮಂಜುನಾಥ್, ಪ್ರಕಾಶ್ ನಾಯ್ಕ್, ಕುಮಾರ್ ಮತ್ತು ವಿಶ್ವನಾಥ್ ಇದ್ದರು.