ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಟ್ಟಣಕ್ಕೆ ಹೊಂದಿಕೊಂಡಿರುವ ಮೊರಸರ ಕೊಟ್ಟಿಗೆ ಗ್ರಾಮದಲ್ಲಿ ಗ್ರಾಮಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶೇಷ ಯೋಜನೆಯಡಿ ನಡೆಸಲು ಉದ್ದೇಶಿಸಿರುವ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.ಗ್ರಾಮದ ಸುಮಾರು 130 ಮನೆಗಳಿಗೆ 56 ಲಕ್ಷ ರು ವೆಚ್ಚದಲ್ಲಿ ಮನೆಮನೆಗೆ ನೀರು ಒದಗಿಸಲಾಗುತ್ತಿದೆ. ಗ್ರಾಮದ ಎತ್ತರ ಭಾಗದಲ್ಲಿ ಉತ್ತಮ ಟ್ಯಾಂಕ್ ನಿರ್ಮಾಣ ಮಾಡಿ ಜನರಿಗೆ ನೀರು ನೀಡಲಾಗುವುದು ಎಂದರು. ಇದೊಂದು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಸುಮಾರು ಮೂವತ್ತು ವರ್ಷಗಳ ಕಾಲ ಈ ಯೋಜನೆ ಫಲಪ್ರದವಾಗಿರಬೇಕು. ದೇಶದ ಪ್ರತಿಯೊಂದು ಮನೆಗೂ ಉತ್ತಮ ಕುಡಿಯುವ ನೀರನ್ನು ಸರಬರಾಜು ಮಾಡಬೇಕೆಂಬುದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಾಗಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಉತ್ತಮ ಗುಣಮಟ್ಟದ ಪರಿಕರಗಳನ್ನು ಹಾಕುವ ಮೂಲಕ ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ಸೂಚಿಸಿದರು. ಈ ಸಂಧರ್ಭದಲ್ಲಿ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಿರಣ್ ಕುಮಾರ್, ಉಪಾಧ್ಯಕ್ಷೆ ಪವಿತ್ರಾ ಮಹೇಶ್, ಸದಸ್ಯರಾದ ಆದರ್ಶ್ (ಆದಿ), ಹೊಸಹಳ್ಳಿ ದೇವರಾಜ್, ಗ್ರಾಮಾಭಿವೃದ್ಧಿ ಹಾಗೂ ಪಂಚಾಯಿತ್ ರಾಜ್ ನ ಸಹಾಯಕ ಇಂಜಿನಿಯರ್ ರವಿಕುಮಾರ್, ಗುತ್ತಿಗೆದಾರರಾದ ತ್ಯಾಗರಾಜ್, ಟೌನ್ ಬ್ಯಾಂಕ್ ಅಧ್ಯಕ್ಷ ಎಚ್. ಆರ್.ರಾಮೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಭೈತರಹೊಸಳ್ಳಿ ರಾಮಚಂದ್ರು, ಕಣತೂರು ಲಕ್ಷ್ಮಣಗೌಡ, ಗ್ರಾಮದ ಮುಖಂಡರಾದ ನಟರಾಜು, ನವೀನ್, ಕಾಂತರಾಜು. ರಂಗನಾಥ್, ರಾಕೇಶ್, ಸೋಮಶೇಖರ್, ಗಂಗಾಧರ್, ಅಪ್ಪು ಡೆಕೋರೇಟರ್ಸ್ ಭರತ್ ಸೇರಿದಂತೆ ಹಲವರು ಇದ್ದರು.