ನೂತನ ಅಧ್ಯಕ್ಷ ಪ್ರಸನ್ನ ಮಾತನಾಡಿ, ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಕಾರಣಕರ್ತರಾದ ಜನಪ್ರಿಯ ಶಾಸಕರಾದ ಸಿಎನ್ ಬಾಲಕೃಷ್ಣರವರಿಗೆ, ಕರ್ನಾಟಕ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕರಾದ ಸಿಎನ್ ಪುಟ್ಟಸ್ವಾಮಿಗೌಡರಿಗೆ ಹಾಗೂ ನಮ್ಮ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರುಗಳಿಗೂ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಮುಂಬರುವ ದಿನಗಳಲ್ಲಿ ಹೊಸ ರೈತರಿಗೆ ಸಾಲ ನೀಡಲು ಕ್ಷೇತ್ರದ ಶಾಸಕರಾದ ಸಿಎನ್ ಬಾಲಕೃ಼ಷ್ಣ ಮತ್ತು ಕರ್ನಾಟಕ ಪಡೆಯರೇಶನ ನಿರ್ದೇಶಕರಾದ ಸಿ ಎನ್ ಪುಟ್ಟಸ್ವಾಮಿಗೌಡರವರ ಸಹಕಾರ ಕೋರಲಾಗುವುದು ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಕಸಬಾ ಹೋಬಳಿ ಜನಿವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಗುರುವಾರದಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ನಿರ್ದೇಶರು ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಮತ್ತು ಜನಿವಾರ ಗ್ರಾಮದ ಜೆ ಕೆ ಪ್ರಸನ್ನ ಅವರು ಅವಿರೋಧವಾಗಿ ಆಯ್ಕೆಯಾದರು. ಜನಿವಾರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ಮಖಾನ್ ಶಿವಕುಮಾರ್ ಅವರು ರಾಜೀನಾಮೆ ನೀಡಿದ್ದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತ್ತು. ಜನಿವಾರ ಗ್ರಾಮದ ಯುವ ಜೆಡಿಎಸ್ ಮುಖಂಡ ಪ್ರಸನ್ನ ಹೊರತುಪಡಿಸಿ ಬೇರೆ ಯಾವ ನಿರ್ದೇಶಕರು ನಾಮಪತ್ರ ಸಲ್ಲಿಸದೆ ಇದುದ್ದರಿಂದ ಇವರ ಆಯ್ಕೆಯನ್ನು ಚುನಾವಣಾಧಿಕಾರಿ ವಿಜಯೇಂದ್ರ ಘೋಷಿಸಿದರು.ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಪ್ರಸನ್ನ ಮಾತನಾಡಿ, ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಕಾರಣಕರ್ತರಾದ ಜನಪ್ರಿಯ ಶಾಸಕರಾದ ಸಿಎನ್ ಬಾಲಕೃಷ್ಣರವರಿಗೆ, ಕರ್ನಾಟಕ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕರಾದ ಸಿಎನ್ ಪುಟ್ಟಸ್ವಾಮಿಗೌಡರಿಗೆ ಹಾಗೂ ನಮ್ಮ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರುಗಳಿಗೂ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಮುಂಬರುವ ದಿನಗಳಲ್ಲಿ ಹೊಸ ರೈತರಿಗೆ ಸಾಲ ನೀಡಲು ಕ್ಷೇತ್ರದ ಶಾಸಕರಾದ ಸಿಎನ್ ಬಾಲಕೃ಼ಷ್ಣ ಮತ್ತು ಕರ್ನಾಟಕ ಪಡೆಯರೇಶನ ನಿರ್ದೇಶಕರಾದ ಸಿ ಎನ್ ಪುಟ್ಟಸ್ವಾಮಿಗೌಡರವರ ಸಹಕಾರ ಕೋರಲಾಗುವುದು ಎಂದರು.ಜೊತೆಗೆ ಸಂಘದ ಬಲವರ್ಧನೆಗೆ ಹೆಚ್ಚು ಶ್ರಮಿಸುವುದಾಗಿ ತಿಳಿಸಿದ ಅವರು ತಮ್ಮನ್ನು ಸಂಘಕ್ಕೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಸಂಘದ ನಿಕಟಪೂರ್ವ ಅಧ್ಯಕ್ಷರು, ಉಪಾಧ್ಯಕ್ಷರು, ಸೇರಿ ಎಲ್ಲ ನಿರ್ದೇಶಕರು ಮತ್ತು ಅರ್ಶಿವದಿಸಿದ ಸ್ಥಳೀಯ ಶಾಸಕರಾದ ಬಾಲಕೃಷ್ಣ ಹಾಗೂ ಕುಸುಮ ಬಾಲಕೃಷ್ಣ ಅವರಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಕುಂಬಾರಹಳ್ಳಿ ರಮೇಶ್ ಮಾತನಾಡಿ , ನೂತನ ಅಧ್ಯಕ್ಷರು ಶಾಸಕರಾದ ಬಾಲಕೃಷ್ಣ ಅವರ ಸಲಹೆ ಸಹಕಾರ ಪಡೆದು ಸೊಸೈಟಿಯನ್ನು ಅಭಿವೃದ್ಧಿಪಡಿಸಲಿ ಎಂದು ಮಾರ್ಗದರ್ಶನ ನೀಡಿದರು.ಬರಾಳು ಮಹೇಂದ್ರ ಮಾತನಾಡಿ ನೂತನ ಅಧ್ಯಕ್ಷರಾದ ಪ್ರಸನ್ನ ಅವರು ಎಲ್ಲಾ ನಿರ್ದೇಶಕರೊಂದಿಗೆ ಹೊಂದಾಣಿಕೆಯಿಂದ ಆಡಳಿತ ನಡೆಸಲಿ ಹಾಗೂ ಜನಿವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ತಾಲೂಕಿನಲ್ಲಿ ಮಾದರಿ ಸೊಸೈಟಿ ಮಾಡಲು ಶ್ರಮಿಸಲಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷರಾದ ಮೆಡಿಕಲ್ ವೆಂಕಟೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಕುಂಬಾರಹಳ್ಳಿ ರಮೇಶ್, ಟಿಎಪಿಎಂಎಸ್‌ನ ನಿರ್ದೇಶಕರಾದ ಸುರೇಶ್, ಜೆಡಿಎಸ್ ಮುಖಂಡರಾದ ಬರಾಳು ಮಹೇಂದ್ರ, ಗೋವಿನಕೆರೆ ಸುರೇಶ್,ರಮೇಶ್, ಹೊಂಗ್ಗೆಹಳ್ಳಿ ರಾಮಕೃ?, ಜನಿವಾರ ಸೊಸೈಟಿ ಮಾಜಿ ಅಧ್ಯಕ್ಷರಾದ ಮಖಾನ್ ಶಿವು, ಜನಿವಾರ ಕಾಳೇಗೌಡ, ಜೆ ಎಚ್ ಮಂಜುನಾಥ್, ಜೆ ಆರ್ ರಮೇಶ್, ನಿರ್ದೇಶಕರುಗಳಾದ ನಾಗರಾಜು, ಕಾಂತರಾಜು, ಜೆ ಕೆ ಕುಮಾರ್, ಪರಮೇಶ, ರಾಮಚಂದ್ರನಾಯಕ್, ವಿಜಯಮೋಹನ್, ಪದ್ಮಪ್ರಕಾಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಜೆ ಪಿ ಸತೀಶ್, ಜನಿವಾರ ಗ್ರಾಮದ ಮುಖಂಡರಾದ ಜೆ ಆರ್ ನಂಜೇಗೌಡ, ಎಚ್‌ಡಿಸಿ ಬ್ಯಾಂಕ್ ವಿಸ್ತರಣಾಧಿಕಾರಿಗಳಾದ ಮಧು, ಸೊಸೈಟಿ ಕಾರ್ಯ ನಿರ್ವಹಣಾಧಿಕಾರಿಗಳಾದ ಶೀಲಾಮಂಜುನಾಥ್, ಸೊಸೈಟಿ ಸಹಾಯಕಿಯಾದ ಮಾನಸ, ನಂಜಪ್ಪ ನಾಯಕ,ಸೇರಿದಂತೆ ಇತರರು ಹಾಜರಿದ್ದರು.