ಕನ್ನಡಪ್ರಭ ವಾರ್ತೆ ಮೈಸೂರು

ಜನಚೈತನ್ಯ ಫೌಂಡೇಷನ್ ವತಿಯಿಂದ ಜು.2ರ ಸಂಜೆ 4ಕ್ಕೆ ನಗರದ ಜೆಎಲ್ ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ಸಂಗೀತ ಲೋಕದ ಗಾನ ಕೋಗಿಲೆಗಳಾದ ಆಶಾ ಬೋಸ್ಲೆ ಹಾಗೂ ಲತಾ ಮಂಗೇಶ್ಕರ್ ಅವರ ನೆನಪಿನಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಆರ್. ಲಕ್ಷ್ಮಣ್ ತಿಳಿಸಿದರು.ಇದು ಜನಪ್ರಿಯ ಹಿಂದಿ ಹಾಗೂ ಇನ್ನಿತರ ಭಾಷೆಗಳ ಸುಮಾರು 45 ಗೀತೆಗಳನ್ನು ಹಾಡುವ ಕರೋಕೆ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಲೇಖಕ ಎಡೆಯೂರು ಸಮೀಉಲ್ಲಾ, ಡಾ. ಪೂರ್ಣಿಮಾ, ಆನಂದ್ ಶೆಟ್ಟಿ, ಟಿ.ಎಸ್. ರವಿಶಂಕರ್ ಅತಿಥಿಯಾಗುವರು. ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದರು.ಗಾಯಕರಾದ ಜಾಯ್ಸ್ ವೈಶಾಖ್, ಬಸವರಾಜು, ರವಿ, ಶ್ರೀನಿವಾಸ್ ಇದ್ದರು.