ಮಹಿಳೆಯರಿಗೆ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಸ್ವಉದ್ಯೋಗ ಹೊಲಿಗೆ ತರಬೇತಿ ತಿಂಗಳಿಗೊಂದು ಕೇಂದ್ರದ ಮೂಲಕ ವಿಷಯಗಳಿಂದದ ಶಿಕ್ಷಣ, ಆರೋಗ್ಯದ ಸಲಹೆ
ತೆಕ್ಕಲಕೋಟೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರು ಸಾವಲಂಬಿ ಜೀವನ ನಡೆಸಲು ಹಲವಾರು ಕಾರ್ಯಕ್ರಮ ಕೈಗೊಂಡಿದೆ.ಯೋಜನೆಯಲ್ಲಿ ನಡೆಯುವ ಸಾಮಾಜಿಕವಾಗಿ ನಿರ್ಗತಿಕರಿಗೆ ಮಾಶಾಸನ, ಅಂಗವಿಕಲರಿಗೆ ಜಲಮಂಗಲ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ, ಜ್ಞಾನದೀಪ ಶಿಕ್ಷಕಿ ಹೀಗೆ ಹಲವಾರು ಸಾಮಾಜಿಕ ಕೆಲಸ ಕೈಗೊಂಡಿದೆ ಎಂದು ತಾಲೂಕು ಯೋಜನಾಧಿಕಾರಿ ವಸಂತ ಎಸ್ ಹೇಳಿದರು.
ಸಿರುಗುಪ್ಪ ನಗರದ ಪಾರ್ವತಿ ನಗರದ ಶ್ರೀ ಬನ್ನಿಮಹಾಂಕಾಳಮ್ಮ ದೇವಸ್ಥಾನದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜ್ಞಾನ ವಿಕಾಸದ ಸೃಷ್ಟಿ ಕೇಂದ್ರದ ಸದಸ್ಯರಿಗೆ ವಾರ್ಷಿಕೋತ್ಸವ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ವರಮಹಾಲಕ್ಷ್ಮಿ ಪೂಜೆ, ಹುಡಿ ತುಂಬುವ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಸ್ವಉದ್ಯೋಗ ಹೊಲಿಗೆ ತರಬೇತಿ ತಿಂಗಳಿಗೊಂದು ಕೇಂದ್ರದ ಮೂಲಕ ವಿಷಯಗಳಿಂದದ ಶಿಕ್ಷಣ, ಆರೋಗ್ಯದ ಸಲಹೆ, ಜ್ವಲಂತ ಉಚಿತ ಕಾನೂನಿನ ಸೇವೆ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಕುರಿತು ಕಾರ್ಯಕ್ರಮಗಳಲ್ಲಿ ಕೈಜೋಡಿಸಿದೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸ್ವಾಸಹಾಯ ಸಂಘದ ಸದಸ್ಯರಿಗೆ ಬ್ಯಾಂಕಿನ ಮೂಲಕ ಕಡಿಮೆ ಬಡ್ಡಿ ದರದಲ್ಲಿ ವ್ಯವಹಾರ ಮಾಡಲು ಸಾಲದ ಸೌಲಭ್ಯ ಒದಗಿಸಿಕೊಟ್ಟಿದೆ ಅವರವರ ವ್ಯವಹಾರ ತಕ್ಕಂತೆ ಬ್ಯಾಂಕ್ ಲಾಭಾಂಶ ನೀಡುತ್ತದೆ. ಆದ್ದರಿಂದ ತಾವೆಲ್ಲರೂ ಆದಾಯ ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಾಲ ಸುಬ್ಬಯ್ಯ, ನಟರಾಜ್, ಹುಲಗಪ್ಪ, ವಿಕ್ರಮ್ ಜೈನ್, ಒಕ್ಕೂಟದ ಅಧ್ಯಕ್ಷೆ ರೇಖಾ, ಸುಜಾತ, ವಲಯ ಮೇಲ್ವಿಚಾರಕಿ ರಾಧಿಕಾ, ತಾಲೂಕು ಸಮನ್ವಯಾಧಿಕಾರಿ ಪ್ರಿಯಾ, ಸೇವಾ ಪ್ರತಿನಿಧಿ ಸುನೀತ ಹಾಗೂ ಕೇಂದ್ರದ ಸದಸ್ಯರು ಇದ್ದರು.