ಉದ್ಯೋಗಾಧಾರಿತ ಶಿಕ್ಷಣ ಪದ್ಧತಿ ಗಾಂಧಿ ಕನಸು

| Published : Oct 05 2024, 01:37 AM IST

ಉದ್ಯೋಗಾಧಾರಿತ ಶಿಕ್ಷಣ ಪದ್ಧತಿ ಗಾಂಧಿ ಕನಸು
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ಪ್ರಬಂಧ ಬರೆಯುವ ಮೂಲಕ ಗಾಂಧೀಜಿ ನೆನಪು ಮಾಡಿಕೊಂಡು, ಗಾಂಧಿ ಪ್ರಣೀತ ವಿಚಾರಗಳನ್ನು ಅರಿಯುವುದು ಖುಷಿ ಕೊಡುವ ಸಂಗತಿ. ಸ್ವಚ್ಛತೆ, ಪ್ರಾರ್ಥನೆ ಮತ್ತು ಶಿಕ್ಷಣ ಈ ಮೂರನ್ನು ಮೈಗೂಡಿಸಿಕೊಳ್ಳಬೇಕು.

ಧಾರವಾಡ:

ಲಕ್ಷಾಂತರ ಜನರನ್ನು ಸಂಘಟಿಸಿ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟ ಮಹಾತ್ಮ ಗಾಂಧಿ ಅವರು ಉದ್ಯೋಗಾಧಾರಿತ ಶಿಕ್ಷಣ ಪದ್ಧತಿಯ ಕನಸು ಹೊಂದಿದ್ದರು ಎಂದು ಹಾವೇರಿಯ ಡಯಟ್ ಪ್ರಾಚಾರ್ಯ ಗಿರೀಶ ಪದಕಿ ಹೇಳಿದರು.

ಇಲ್ಲಿನ ಭಾರತ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ ಗಾಂಧಿ ಓದು ಮತ್ತು ಗಾಂಧಿ ಕುರಿತ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಿಸಿದ ಅವರು, ಮಕ್ಕಳು ಪ್ರಬಂಧ ಬರೆಯುವ ಮೂಲಕ ಗಾಂಧೀಜಿ ನೆನಪು ಮಾಡಿಕೊಂಡು, ಗಾಂಧಿ ಪ್ರಣೀತ ವಿಚಾರಗಳನ್ನು ಅರಿಯುವುದು ಖುಷಿ ಕೊಡುವ ಸಂಗತಿ. ಸ್ವಚ್ಛತೆ, ಪ್ರಾರ್ಥನೆ ಮತ್ತು ಶಿಕ್ಷಣ ಈ ಮೂರನ್ನು ಮೈಗೂಡಿಸಿಕೊಳ್ಳಿ ಎಂದು ದೇಶದ ಜನತೆಗೆ ಹೇಳಿದ್ದ ಗಾಂಧೀಜಿ, ಮೂಲ ಉದ್ಯೋಗ ಶಿಕ್ಷಣವನ್ನೇ ಮಕ್ಕಳಿಗೆ ಕಲಿಸುವುದನ್ನು ಅವರು ಬಲವಾಗಿ ಪ್ರತಿಪಾದಿಸಿದ್ದರು ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಮಕ್ಕಳಿಗಾಗಿ ಮಕ್ಕಳಿಗೆ ಓದುವ ಮತ್ತು ಬರೆಯುವ ಅಭಿರುಚಿ ಬೆಳೆಸುವ ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಡೆಯಬೇಕು. ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಹೆಚ್ಚೆಚ್ಚು ಬಹುಮಾನ ಪಡೆದಿರುವುದು ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.

ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲಾಧ್ಯಕ್ಷ್ಲ ಗುರು ತಿಗಡಿ ಮಾತನಾಡಿ, ಮಕ್ಕಳ ಹಬ್ಬ, ಮಕ್ಕಳ ಸಾಹಿತ್ಯ ಸಂಭ್ರಮ, ಚಿಣ್ಣರ ಮೇಳಗಳನ್ನು ಸಂಘಟಿಸಿ ಶಾಲಾ ಮಕ್ಕಳಲ್ಲಿ ಹೊಸ ಚಿಂತನೆ ಬೆಳೆಸುವಲ್ಲಿ ಸಮಿತಿ ಶ್ರಮಿಸಿದೆ ಎಂದರು.

ಇದೇ ವೇಳೆ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪಡೆದ ಶಂಕರ ಹಲಗತ್ತಿ ಅವರನ್ನು ಸನ್ಮಾನಿಸಲಾಯಿತು. ಭಾರತ ಜ್ಞಾನ ವಿಜ್ಞಾನ ಸಮಿತಿಯ ವಿವಿಧ ಪದಾಧಿಕಾರಿಗಳಾದ ಎಲ್.ಐ. ಲಕ್ಕಮ್ಮನವರ, ಶಿವಾನಂದ ಭಜಂತ್ರಿ, ವಿ.ಎನ್. ಕೀರ್ತಿವತಿ, ವೆಂಕಟೇಶ ಲಕ್ಷಾಣ, ಪಿ.ಎಸ್. ಅಂಕಲಿ, ಚಂದ್ರಶೇಖರ ತಿಗಡಿ, ಎಂ. ಆರ್. ಕಬ್ಬೇರ, ಪ್ರಮೀಳಾ ಜಕ್ಕಣ್ಣವರ, ಗಂಗವ್ವ ಕೋಟಿಗೌಡರ, ರುದ್ರೇಶ ಕುರ್ಲಿ, ರವಿಚಂದ್ರನ್ ದೊಡ್ಡಿಹಾಳ, ಪ್ರೇಮಾ ಪೂಜಾರ, ಎ. ಎಚ್. ನದಾಫ, ಸಕ್ಕು ರಾಯಣ್ಣವರ, ಭೀಮಪ್ಪ ಕಾಸಾಯಿ, ಎಂ.ಎಸ್. ಪಾಟೀಲ, ಭಾರತಿ ಸಾಧನಿ ಇತರರು ಇದ್ದರು.

ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನದ ಜತೆಗೆ ನಗದು ಬಹುಮಾನ ಹಾಗೂ ಭಾಗವಹಿಸಿದ ನೂರಕ್ಕೂ ಅಧಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರುಗಳಿಗೆ ಅಭಿನಂದನ ಪತ್ರದ ಜತೆಗೆ ಮಕ್ಕಳಿಗಾಗಿ ಮಹಾತ್ಮ ಪುಸ್ತಕಗಳನ್ನು ನೀಡಲಾಯಿತು.