ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ 50ಕ್ಕೂ ಹೆಚ್ಚು ಮಂದಿ ಉದ್ಯೋಗ ಪಡೆದುಕೊಂಡರು.ಆರ್.ಡಿ ಟೆಕ್ನಾಲಜಿ, ಎಸ್.ಬಿ.ಐ, ಆಕ್ಸಿಸ್, ಮುತ್ತೂಟ್ ಫೈನಾನ್ಸ್, ಬೊನಿಫಿನ್ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದವು. 487 ಅಭ್ಯರ್ಥಿಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, 245 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಆಗಿದ್ದು, 47 ಅಭ್ಯರ್ಥಿಗಳು ಅಂತಿಮವಾಗಿ ಆಯ್ಕೆಯಾಗಿದ್ದಾರೆ ಎಂದು ಐಕ್ಯೂಎಸಿ ಡಾ.ಎಸ್. ವಿ. ಮುರಳೀಧರ ಮಾಹಿತಿ ನೀಡಿದರು.ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಐಕ್ಯೂಎಸಿ ಮತ್ತು ವೃತ್ತಿ ವಾರ್ಗದರ್ಶನ, ಉದ್ಯೋಗ ಮಾಹಿತಿ ಕೋಶ ಹಾಗೂ ಆರ್.ಡಿ. ಟೆಕ್ನಾಲಜಿ ಸಹಯೋಗದಲ್ಲಿ ನಡೆದ ಉದ್ಯೋಗ ಮೇಳವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಪುಟ್ಟರಾಜ ಉದ್ಘಾಟಿಸಿದರು. ಆರ್.ಡಿ. ಟೆಕ್ನಾಲಜಿಯ ಪ್ರಗತಿಗೌಡ, ವೃತ್ತಿ ಮಾರ್ಗದರ್ಶನ ಸಂಚಾಲಕಿ ಡಾ. ಶೋಭಾ ಲತಾ, ಪ್ರಾಧ್ಯಾಪಕ ಡಾ.ಪಿ. ಬೆಟ್ಟೇಗೌಡ, ಲಿಂಗಣ್ಣ ಇದ್ದರು.