ಉದ್ಯೋಗಾಂಕ್ಷಿಗಳು ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿ

| Published : Feb 20 2025, 12:45 AM IST

ಸಾರಾಂಶ

ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಡಾ.ವಿಶ್ವನಾಥ್ ಕೊರವಿ ಅವರು ಉದ್ಯೋಗ ಮೇಳವನ್ನು ಕಳೆದ 10 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ

ಹುಬ್ಬಳ್ಳಿ: ಉದ್ಯೋಗಾಕಾಂಕ್ಷಿಗಳು ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿ ಮತ್ತು ಉನ್ನತ ದೇಶ ನಿರ್ಮಾಣಕ್ಕೆ ಕೈ ಜೋಡಿಸುವಂತೆ ಹು-ಧಾ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಕರೆ ನೀಡಿದರು.

ಅವರು ಇಲ್ಲಿನ ಉಣಕಲ್ಲಿನ ಶ್ರೀನಗರದಲ್ಲಿರುವ ಚೇತನ್‌ ಬ್ಯುಸಿನೆಸ್‌ ಸ್ಕೂಲ್‌ನಲ್ಲಿ ಎಲ್.ಸಿ.ಸಿ ಧಾರವಾಡ ಮತ್ತು ಬಾಷ್ ಬ್ರಿಡ್ಜ್ ಸಿಎಸ್ಆರ್ ಸಹಯೋಗದೊಂದಿಗೆ ಬುಧವಾರ ಆಯೋಜಿಸಲಾಗಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.

ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಡಾ.ವಿಶ್ವನಾಥ್ ಕೊರವಿ ಅವರು ಉದ್ಯೋಗ ಮೇಳವನ್ನು ಕಳೆದ 10 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಈ ವರ್ಷ ಬಾಷ್ ಬ್ರಿಡ್ಜ್ ಸಿಎಸ್ಆರ್ ಸಹಯೋಗದೊಂದಿಗೆ 35ಕ್ಕೂ ಅಧಿಕ ಕಂಪನಿಗಳು ಈ ಮೇಳದಲ್ಲಿ ಪಾಲ್ಗೊಂಡಿದ್ದು, ಉದ್ಯೋಗಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಎಲ್‌ಸಿಸಿ ಕಂಪನಿಯ ಸಿಇಐ ಮಹೇಶ ಭಟ್ ಮಾತನಾಡಿ, ಕಳೆದ 8 ವರ್ಷಗಳಿಂದ ಉದ್ಯೋಗ ಮೇಳ ಏರ್ಪಡಿಸುತ್ತಿದ್ದು, ಆದಷ್ಟು ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ಮೇಳದ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ಬಾಷ್ ಬ್ರಿಡ್ಜ್‌ನ ಅಸಿಸ್ಟೆಂಟ್ ಪ್ಲೇಸ್ಮೆಂಟ್ ಆಫೀಸರ್ ಸುಧೀರ ಪಿಡ್ಡಿ, ಅಧ್ಯಕ್ಷತೆ ವಹಿಸಿದ್ದ ನಿರ್ದೇಶಕ ಡಾ.ವಿ.ಎಂ. ಕೊರವಿ ಮಾತನಾಡಿದರು. ಉದ್ಯೋಗಮೇಳದಲ್ಲಿ ಸುಮಾರು 35ಕ್ಕೂ ಅಧಿಕ ಕಂಪನಿಗಳು ಹಾಗೂ 2 ಸಾವಿರಕ್ಕೂ ಅಧಿಕ ಉದ್ಯೋಗಾಸಕ್ತರು ಭಾಗವಹಿಸಿದ್ದರು.

ಡಾ.ರಮಾಕಾಂತ್ ಕುಲಕರ್ಣಿ ಪರಿಚಯಿಸಿದರು. ಡಾ.ಕಿರಣಕುಮಾರ ಸ್ವಾಗತಿಸಿದರು. ಪ್ರೊ. ಶ್ರೇಯಸ್ ಮುರ್ಡೇಶ್ವರ ನಿರೂಪಿಸಿದರು. ಡಾ.ಎಂ.ಎನ್‌. ಮಾಣಿಕ ವಂದಿಸಿದರು.