ಸಾರಾಂಶ
ವ್ಯಸನ ಮುಕ್ತ ಸಮಾಜಕ್ಕೆ ಕೈ ಜೋಡಿಸಿ: ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್
ಕನ್ನಡಪ್ರಭ ವಾರ್ತೆ ಕುಣಿಗಲ್
ಪ್ರತಿಯೊಬ್ಬರು ವ್ಯಸನ ಮುಕ್ತ ಹೋರಾಟದಲ್ಲಿ ಯೋಧರಂತೆ ನಡೆದುಕೊಳ್ಳಬೇಕು ಎಂದು ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ಆಶಿಸಿದರು. ಪಟ್ಟಣದ ಜಿಕೆ ಬಿಎಮ್ಎಸ್ ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು,ಆಧುನಿಕ ಯುಗ ಮತ್ತು ಹಲವಾರು ಪ್ರಭಾವ ಮತ್ತು ಸಹವಾಸದಿಂದ ಕೆಲವು ದುಷ್ಟಗಳಿಗೆ ಅಪ್ರಾಪ್ತರು ಬಲಿ ಆಗುತ್ತಿರುವುದು ಶೋಚನೀಯ ಸಂಗತಿಯಾಗಿದೆ, ಕುಣಿಗಲ್ ನಲ್ಲೂ ಕೂಡ ಅಂತಹ ಒಂದು ಮಾರಾಟ ಜಾಲ ಪತ್ತೆ ಆಗಿರುವುದು ತಲೆತಗ್ಗಿಸುವ ವಿಚಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಸುಭದ್ರ ದೇಶದ ನಿರ್ಮಾಣ ಹಾಗೂ ಭವಿಷ್ಯದ ಉತ್ತಮ ಪ್ರಜೆಗಳ ಸುಂದರ ಬದುಕಿಗಾಗಿ ಪ್ರತಿಯೊಬ್ಬರೂ ವ್ಯಸನ ಮುಕ್ತ ಭಾರತ ನಿರ್ಮಾಣ ಮಾಡಲು ಸಹಕರಿಸಬೇಕೆಂದರು,ಈ ಸಂದರ್ಭದಲ್ಲಿ ಹಲವಾರು ಶಾಲಾ ವಿದ್ಯಾರ್ಥಿಗಳು ವಿಶೇಷ ರೂಪಕಗಳ ಮುಖಾಂತರ ದೇಶಭಕ್ತಿ ಗೀತೆಗಳನ್ನು ಹಾಡಿ ಅಭಿನಯಿಸಿದರು. ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡಿ ಅಭಿನಂದಿಸಲಾಯಿತು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಸೂಲಗಿತ್ತಿ ನಂಜಮ್ಮ ರಾಮಲಿಂಗಯ್ಯ ಮಾಜಿ ಸೈನಿಕ ಕೆ ನಾಗರಾಜು, ಪಿ ಎಚ್ ಡಿ ಪದವಿ ಪಡೆದ ಕೆ ಎಸ್ ಸಾಗರ್ ಪ್ರಗತಿಪರ ರೈತ ಮಂಜುನಾಥ್, ಸಮಾಜ ಸೇವಕ ಕಾರ್ಪೆಂಟರ್ ಕುಮಾರ್ ಹಾಗೂ ಸರ್ಕಾರಿ ಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಂತೋಷ ಕಾವ್ಯ ಮುಖೇಶ್ ಗೌಡ ಅವರನ್ನು ಅಭಿನಂದಿಸಲಾಯಿತು, ಈ ಸಂದರ್ಭದಲ್ಲಿ ತಹಸೀಲ್ದಾರ್, ರಶ್ಮಿ ಯು, ತಾಪಂ ಇಒ ನಾರಾಯಣ್, ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ, ಡಿವೈಎಸ್ಪಿ ಓಂ ಪ್ರಕಾಶ್, ಕಟ್ಟಡ ಕಾರ್ಮಿಕ ಅಭಿವೃದ್ಧಿ ಮಂಡಳಿ ನಿಗಮದ ಸದಸ್ಯ ಎಚ್ ಜಿ ರಮೇಶ್,ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕಪನಿಪಾಳ್ಯ ರಮೇಶ್, ಸಿಪಿಐ ನವೀನ್ ಕುಮಾರ್ ಸೇರಿದಂತೆ ಇತರರು ಇದ್ದರು.