ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಂಕಷ್ಟದ ಸನ್ನಿವೇಶದಲ್ಲಿ ರೈತರ ನೆರವಿಗೆ ನಿಲ್ಲುವ ಸಹಕಾರ ಸಂಘಗಳ ಪ್ರಗತಿಗೆ ಪ್ರತಿಯೊಬ್ಬ ರೈತರು ಕೈ ಜೋಡಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.ತಾಲೂಕಿನ ಹರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತ ಸಮುದಾಯದ ಎರಡು ಕಣ್ಣುಗಳಿದ್ದಂತೆ ಎಂದರು.
ಕೆಲ ಸಂಘಗಳಲ್ಲಿನ ಆಡಳಿತ ಲೋಪದೋಷಗಳಿಂದ ಅಭಿವೃದ್ಧಿಯಿಂದ ಹಿಂದುಳಿದಿವೆ. ನಿಷ್ಟೆ, ಪ್ರಾಮಾಣಿಕ, ಹೊಸತನ ಹಾಗೂ ಸರ್ಕಾರದ ವಿಶೇಷ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದರು.ಹುಟ್ಟೂರಿನ ಹರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉತ್ತಮವಾಗಿ ವ್ಯವಹರಿಸುವ ಮೂಲಕ ಆದಾಯದಲ್ಲಿ 4ನೇ ಸ್ಥಾನದಲ್ಲಿ ಇರುವುದು ನಿಜಕ್ಕೂ ಸಂತೋಷಕರ. ನನ್ನ ರಾಜಕೀಯ ಬೆಳವಣಿಗೆ ಅಡಿಗಲ್ಲಾದ ಸಹಕಾರ ಸಂಘದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ವೃತ್ತಿಪರತೆ ಅಳವಡಿಸಿಕೊಳ್ಳದಿದ್ದರೆ ಸಹಕಾರ ಪತ್ತಿನ ಸಂಘಗಳು ಬೆಳೆಯುವುದು ಕಷ್ಟ. ಸಂಘಗಳ ಪ್ರತಿನಿಧಿಗಳು ವೃತ್ತಿಪರತೆ, ಶಿಸ್ತು ಹಾಗೂ ಬದ್ದತೆ ಮೈಗೂಡಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್ ಮಾತನಾಡಿದರು. ಸಂಘದ ಅಧ್ಯಕ್ಷ ಎಚ್. ಟಿ. ಲೋಕೇಶ್, ಉಪಾಧ್ಯಕ್ಷೆ ಅನಿತಾ, ನಿರ್ದೇಶಕರಾದ ಭೈರಾಪುರ ಜೆ.ಹರೀಶ್, ರಾಯಸಮುದ್ರ ಪ್ರೇಮಕುಮಾರ್, ಮೈಲನಹಳ್ಳಿ ಮಂಜೇಗೌಡ,ಚಟ್ಟೆನಹಳ್ಳಿ ಮಹದೇವ, ಸಿಂಗಾಪುರ ಬೋರೇಗೌಡ, ಚಟ್ಟೆನಹಳ್ಳಿ ಗೋಪಾಲಶೇಟ್ಟಿ, ನೀತಿಮಂಗಲ ಲೋಕಮಾತೇ, ರಾಯಸಮುದ್ರ ಲೋಕೇಶಚಾರಿ, ಸರೋಜಮ್ಮ, ಗ್ರಾ.ಪಂ ಅಧ್ಯಕ್ಷ ಯೋಗೇಶ್, ಸದಸ್ಯರಾದ ಉಮಾ ಶ್ರೀಧರ್, ಸಂಘದ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಡೇರಿ ಮಾಜಿ ಅಧ್ಯಕ್ಷ ಮಹೇಶ್, ಸಂಘದ ಕಾರ್ಯದರ್ಶಿ ಡಿ.ಆದರ್ಶ ಸೇರಿದಂತೆ ಷೇರುದಾರ ಸದಸ್ಯರು ಭಾಗವಹಿಸಿದ್ದರು.