ಸಾರಾಂಶ
ಯುವ ಜನತೆ ಮಾದಕ ವಸ್ತು ವ್ಯಸನದಿಂದ ಮುಕ್ತರಾಗಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಬೇಕೆಂದು ಹೆಲ್ತ್ ಎಜುಕೇಟರ್ ಕೃಷ್ಣೇಗೌಡ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಯುವ ಜನತೆ ಮಾದಕ ವಸ್ತು ವ್ಯಸನದಿಂದ ಮುಕ್ತರಾಗಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಬೇಕೆಂದು ಹೆಲ್ತ್ ಎಜುಕೇಟರ್ ಕೃಷ್ಣೇಗೌಡ ತಿಳಿಸಿದರು. ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಐಡಿಎಫ್‌ಸಿ ಫಸ್ಟ್ ಭಾರತ್ ಹಾಗೂ ಕಾಲೇಜಿನ ವಿಜ್ಞಾನ ಕ್ಲಬ್ ಸಹಯೋಗದೊಂದಿಗೆ ಆಯೋಜಿಸಿದ್ದ ಮಾದಕ ವಸ್ತು ಬಳಕೆ, ನಿವಾರಣೆ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮಾದಕ ವಸ್ತುಗಳಾದ ಆಲ್ಕೋಹಾಲ್, ಗಾಂಜಾ, ತಂಬಾಕು, ಹೆರಾಯಿನ್, ಕೊಕೈನ್, ಕೊಡೈನ್‌ಗಳ ಸೇವನೆಯಿಂದ ದೂರವಿದ್ದು ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಂತೆ ತಿಳಿಸಿದರು. ಐಟಿಎಫ್‌ಸಿ ಫಸ್ಟ್ ಭಾರತ್‌ನ ಪ್ರಾಂತೀಯ ವ್ಯವಸ್ಥಾಪಕ ಕಾಂತರಾಜು ಮಾತನಾಡಿ, ಮಾದಕ ವಸ್ತುಗಳ ಜಾಲ ದೇಶಾದ್ಯಂತ ಹೆಚ್ಚುತ್ತಿದ್ದು ಯುವಕರು ಎಚ್ಚರಿಕೆಯ ಹೆಜ್ಜೆ ಇಡುವತ್ತ ದುಶ್ಚಟಗಳಿಗೆ ಬಲಿಯಾಗದಂತೆ ಜೀವನ ಸಾಗಿಸಲು ಕಿವಿ ಮಾತು ಹೇಳಿದರು. ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಸಮೂಹ ಮಾದಕ ವಸ್ತುಗಳ ಸೇವನೆಯಿಂದ ಅಗುವ ದುಶ್ಪರಿಣಾಮಗಳ ಬಗ್ಗೆ ತಿಳಿದುಕೊಂಡು ವ್ಯಸನ ಮುಕ್ತ ವ್ಯಕ್ತಿ, ಕುಟುಂಬ, ಸಮಾಜ, ಗ್ರಾಮ ನಿರ್ಮಾಣ ಮಾಡುವತ್ತ ಪಣತೊಡಬೇಕೆಂದರು. ಕಾರ್ಯಕ್ರಮದಲ್ಲಿ ಐಟಿಎಫ್‌ಸಿ ಫಸ್ಟ್ ಭಾರತ್‌ನ ಸಹಾಯಕ ವ್ಯವಸ್ಥಾಪಕ ಸುನೀಲ್‌ಕುಮಾರ್, ಉಪನ್ಯಾಸಕರಾದ ಮೈಲಾರಪ್ಪ, ವಸಂತಲಕ್ಷ್ಮೀ, ಷಡಕ್ಷರಿ, ವಿಶ್ವನಾಥ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))