ಕನಕಗಿರಿ ಪ್ರವಾಸೋದ್ಯಮ ನಗರವನ್ನಾಗಿಸಲು ಕೈಜೋಡಿಸಿ: ತಹಶೀಲ್ದಾರ ಮುರುಡಿ

| Published : Oct 09 2024, 01:44 AM IST

ಕನಕಗಿರಿ ಪ್ರವಾಸೋದ್ಯಮ ನಗರವನ್ನಾಗಿಸಲು ಕೈಜೋಡಿಸಿ: ತಹಶೀಲ್ದಾರ ಮುರುಡಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಪ್ರವಾಸೋದ್ಯಮ ತಾಣವಾಗಿರುವ ಕನಕಗಿರಿಯನ್ನು ಸ್ವಚ್ಛ, ಸುಂದರ ನಗರವನ್ನಾಗಿಸಲು ಪಕ್ಷಬೇಧ ಮರೆತು ಕೈಜೋಡಿಸಬೇಕು.

ಪಪಂ ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಸಮಾರಂಭ

ಕನ್ನಡಪ್ರಭ ವಾರ್ತೆ ಕನಕಗಿರಿ

ಜಿಲ್ಲೆಯ ಪ್ರವಾಸೋದ್ಯಮ ತಾಣವಾಗಿರುವ ಕನಕಗಿರಿಯನ್ನು ಸ್ವಚ್ಛ, ಸುಂದರ ನಗರವನ್ನಾಗಿಸಲು ಪಕ್ಷಬೇಧ ಮರೆತು ಕೈಜೋಡಿಸಬೇಕು ಎಂದು ತಹಸೀಲ್ದಾರ ವಿಶ್ವನಾಥ ಮುರುಡಿ ಹೇಳಿದರು.

ಇಲ್ಲಿನ ರಂಭಾಪುರಿ ಸಮುದಾಯ ಭವನದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅನೇಕ ಶಿಲ್ಪಕಲೆ, ಮಂದಿರಗಳನ್ನು ಹೊಂದಿರುವ ಕನಕಗಿರಿ ನಗರ ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ. ೧೭ ವಾರ್ಡ್‌ಗಳಲ್ಲಿನ ನಿವಾಸಿಗಳ ಸಮಸ್ಯೆಗಳ ಅರಿತು ಅವುಗಳಿಗೆ ಪರಿಹಾರ ಕಂಡುಕೊಳ್ಳಲಾಗುವ ಪ್ರಯತ್ನ ಮಾಡಬೇಕು. ಸರ್ಕಾರಿ ಶಾಲೆ, ಆಸ್ಪತ್ರೆ, ಅಂಗನವಾಡಿ ಕೇಂದ್ರಗಳಿಗೆ ಹೊಸ ಕಾಯಕಲ್ಪ ನೀಡುವ ಮೂಲಕ ಪಟ್ಟಣವನ್ನು ಸುಂದರವನ್ನಾಗಿಸಲು ಮುಂದಾಗುವಂತೆ ತಿಳಿಸಿದರು.

ಮುಖಂಡರಾದ ಗಂಗಾಧರಸ್ವಾಮಿ, ಕನಕಪ್ಪ ಬಿ. ಮಾತನಾಡಿ, ಅಧಿಕಾರ ಶಾಶ್ವತವಲ್ಲ. ಮತದಾರರು ನೀಡಿದ ಅಧಿಕಾರವನ್ನು ಜನಸೇವೆಗಾಗಿ ಮುಡಿಪಾಗಿಡಬೇಕು. ಅಭಿವೃದ್ಧಿ ವಿಷಯದಲ್ಲಿ ಎಲ್ಲ ಸದಸ್ಯರು ಒಗ್ಗಟ್ಟಾಗಿ ಶ್ರಮವಹಿಸಿದರೆ ಮಾತ್ರ ನಾವು ಜಿಲ್ಲೆಯ ಇತರೆ ನಗರಗಳಿಗಿಂತ ಮುಂದೆ ಬರಲು ಸಾಧ್ಯ. ಹಿರಿಯರ, ಅಧಿಕಾರಿಗಳ ಸಲಹೆ ಪಡೆಯುವ ಮೂಲಕ ಅಭಿವೃದ್ಧಿ ಆದ್ಯತೆ ನೀಡಬೇಕು ಎಂದರು.

ಪಂಚಾಯಿತಿ ಕಚೇರಿಯಲ್ಲಿ ನಡೆಯುತ್ತಿರುವ ಫಾರಂ-೩, ಮುಟೇಷನ್ ವಿಚಾರದಲ್ಲಿ ಸಿಬ್ಬಂದಿಯವರಿಂದ ಆಗಿದೆ ಎನ್ನಲಾದ ಅವ್ಯವಹಾರ ಮತ್ತು ಮುಖ್ಯರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನಗಳ ನಿಲುಗಡೆ ಸೇರಿದಂತೆ ನಾನಾ ಸಮಸ್ಯೆಗಳನ್ನು ಕುರಿತು ಪಪಂ ಸದಸ್ಯರಾದ ನೂರಸಾಬ ಗಡ್ಡಿಗಾಲ, ಅನಿಲ ಬಿಜ್ಜಳ ಮಾತನಾಡಿದರು.

ಪಪಂ ಅಧ್ಯಕ್ಷರಾಗಿ ಹುಸೇನಬೀ ಚಳಮರದ ಹಾಗೂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ ಅವರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು.

ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಪ್ರಮಾಣವಚನ ಬೋಧಿಸಲಾಯಿತು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಸದಸ್ಯರಾದ ಶರಣೇಗೌಡ, ರಾಜಸಾಬ ನಂದಾಪೂರ, ರಾಕೇಶ ಕಂಪ್ಲಿ, ಸುರೇಶ ಗುಗ್ಗಳಶೆಟ್ರ, ಹನುಮಂತ ಬಸರಿಗಿಡ, ಶೇಷಪ್ಪ ಪೂಜಾರ, ತನುಶ್ರೀ ರಾಮಚಂದ್ರ, ನಂದಿನಿ ರಾಮಾಂಜನೇಯರೆಡ್ಡಿ, ಶೈನಜಾಬೇಗಂ ಗುಡಿಹಿಂದಲ, ನಗರ ಆಶ್ರಯ ಸಮಿತಿ ಸದಸ್ಯರು, ಪಪಂ ಸಿಬ್ಬಂದಿ, ಪಟ್ಟಣದ ಹಿರಿಯರು, ಮುಖಂಡರು ಇದ್ದರು.