ಅಪರಾಧ ತಡೆಗೆ ಕೈಜೋಡಿಸಿ: ಎಸ್.ವಿ.ಸತ್ತಿಗೇ

| Published : Dec 23 2023, 01:45 AM IST

ಸಾರಾಂಶ

ಲೋಕಾಪುರ-ಲಕ್ಷಾನಟ್ಟಿ ಆದರ್ಶ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಗುರು ಎಸ್.ವಿ.ಸತ್ತಿಗೇರಿ ಮಾತನಾಡಿ, ಸಮಾಜದಲ್ಲಿ ಅಪರಾಧಗಳ ತಡೆಗೆ ಎಲ್ಲರ ಪಾತ್ರವೂ ಮುಖ್ಯ. ವಿದ್ಯಾರ್ಥಿಗಳು ಹಾಗೂ ಯುವ ಜನತೆ ಸಹ ಈ ನಿಟ್ಟಿನಲ್ಲಿ ಪೊಲೀಸರ ಜೊತೆ ಸಹಕರಿಸಬೇಕು ಎಂದು ಹೇಳಿದರು.

ಕನ್ನಡಪ್ರಭ ಲೋಕಾಪುರ

ಸಮಾಜದಲ್ಲಿ ಅಪರಾಧಗಳ ತಡೆಗೆ ಎಲ್ಲರ ಪಾತ್ರವೂ ಮುಖ್ಯ. ವಿದ್ಯಾರ್ಥಿಗಳು ಹಾಗೂ ಯುವ ಜನತೆ ಸಹ ಈ ನಿಟ್ಟಿನಲ್ಲಿ ಪೊಲೀಸರ ಜೊತೆ ಸಹಕರಿಸಬೇಕು ಎಂದು ಮುಖ್ಯ ಗುರು ಎಸ್.ವಿ.ಸತ್ತಿಗೇರಿ ಎಂದು ಹೇಳಿದರು.

ಪಟ್ಟಣದ ಲೋಕಾಪುರ-ಲಕ್ಷಾನಟ್ಟಿ ಆದರ್ಶ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರು ಸಹ ಹುಟ್ಟುತ್ತಲೆ ಅಪರಾಧಿಗಳಲ್ಲ. ಅವರು ಬೆಳೆಯುವ ಪರಿಸರ ಹಾಗೂ ಪರಿಸ್ಥಿತಿಗಳು ಅವರನ್ನು ಅಪರಾಧ ಲೋಕಕ್ಕೆ ತಳ್ಳುತ್ತದೆ. ಹಾಗಾಗಿ ಮನೆ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಸಿಗಬೇಕು ಆಗ ಅವರು ಹಾದಿ ತಪ್ಪುವುದಿಲ್ಲ ಎಂದರು.

ಸಿಆರ್‌ಪಿ ಗಂಗಾಧರ ಗಾಣಗೇರ ಮಾತನಾಡಿ, ಅಪರಾಧವನ್ನು, ಸಮಾಜಘಾತುಕ ಕೃತ್ಯಗಳನ್ನು ತಪ್ಪಿಸುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕು. ತಪ್ಪು ಪ್ರಶ್ನಿಸುವ ಮನೋಭಾವ ಎಲ್ಲರಲ್ಲೂ ಮೂಡಬೇಕು, ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಿ ಉತ್ತಮ ಸಮಾಜ ನಿರ್ಮಿಸಲು ಪೊಲೀಸರ ಜೊತೆ ವಿದ್ಯಾರ್ಥಿಗಳು, ಯುವಜನರು ಹಾಗೂ ಎಲ್ಲ ವರ್ಗದ ಜನರು ಸಹಕರಿಸಿ ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಇಸಿಒ ವೈ.ಎಂ.ಪಮ್ಮಾರ, ಸಿಆರ್‌ಪಿ ಕೆ.ಎಲ್.ಮಾಳೇದ, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.