ಮಕ್ಕಳು ಈ ದೇಶದ ಸಂಪತ್ತು. ಮಕ್ಕಳಿಗೆ ಹಕ್ಕು ನೀಡುವ ಮೂಲಕ ಅವರ ಭವಿಷ್ಯ ರೂಪಿಸಬೇಕಾಗಿದೆ
ಯಲಬುರ್ಗಾ: ಪ್ರತಿಯೊಬ್ಬರೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಕೈಜೋಡಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಶರಣಪ್ಪ ಕೊಪ್ಪದ ಹೇಳಿದರು.
ತಾಲೂಕಿನ ಗೆದಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂನಿಂದ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದ ಅವರು,ಮಕ್ಕಳು ಈ ದೇಶದ ಸಂಪತ್ತು. ಮಕ್ಕಳಿಗೆ ಹಕ್ಕು ನೀಡುವ ಮೂಲಕ ಅವರ ಭವಿಷ್ಯ ರೂಪಿಸಬೇಕಾಗಿದೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಪ್ರಯತ್ನಿಸಬೇಕು. ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ತಡೆಗಟ್ಟುವುದು ಎಲ್ಲರ ಜವಾಬ್ದಾರಿಯಾಗಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಲು ಶ್ರಮಿಸಲಾಗುವುದು. ಕುಂದು ಕೊರತೆ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಪಿಡಿಒ ದೊಡ್ಡಪ್ಪ ನಾಯ್ಕ, ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ನಾಗಭೂಷಣ ಚಿನಿವಾಲರ ಮಾತನಾಡಿದರು.ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಹನುಮಂತಪ್ಪ ಗೋಸಾವಿ, ಆರ್‌ಎಸ್‌ಪಿಆರ್ ನವೀನ ನಾಯ್ಕರ್‌ಜೀ, ಪೊಲೀಸ್ ಸಿಬ್ಬಂದಿ ಕಳಕಮ್ಮ, ಆರೋಗ್ಯ ಇಲಾಖೆಯ ವಿದ್ಯಾಶ್ರೀ, ರಜಿಯಾ, ಮುಖ್ಯಶಿಕ್ಷಕ ರುದ್ರಗೌಡ ಗೋಣಿ, ಶಿವಾನಂದ ಅಂಗಡಿ, ಹನುಮಪ್ಪ ಬಸರಿಗಿಡದ, ಶರಣಪ್ಪ ಅಂಗಡಿ, ವಿಸ್ತಾರ ಸಂಸ್ಥೆಯ ಶೋಭಾ, ಫಕೀರಪ್ಪ ನಡುವಿನಮನಿ, ತಿರುಪತಿ ಬಸರಿಗಿಡದ, ಮಂಜುನಾಥ ಕೊರಡಕೇರಿ, ಕಳಕಯ್ಯ ಹಿರೇಮಠ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಮತ್ತಿತರರು ಇದ್ದರು.