ಶ್ರವಣ ಸೇವೆ ಸೌಲಭ್ಯ ಒದಗಿಸಲು ಕೈ ಜೋಡಿಸಿ: ಡಾ.ಧ್ಯಾನೇಶ್ವರ ನಿರುಗುಡೆ

| Published : Mar 07 2024, 01:46 AM IST

ಶ್ರವಣ ಸೇವೆ ಸೌಲಭ್ಯ ಒದಗಿಸಲು ಕೈ ಜೋಡಿಸಿ: ಡಾ.ಧ್ಯಾನೇಶ್ವರ ನಿರುಗುಡೆ
Share this Article
  • FB
  • TW
  • Linkdin
  • Email

ಸಾರಾಂಶ

5 ವರ್ಷದೊಳಗಿನ ಮಕ್ಕಳಲ್ಲಿ ಶ್ರವಣ ದೋಷ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಬಹುದು ಎಂದು ಡಾ.ಧ್ಯಾನೇಶ್ವರ ಹೇಳಿದರು. ಗುರುನಾನಕ್‌ ದೇವ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಶ್ರವಣ ದಿನದ ನಿಮಿತ್ತ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಶ್ರವಣ ಸೇವೆಗಳ ಸೌಲಭ್ಯ ಒದಗಿಸುವಲ್ಲಿ ನಾವೆಲ್ಲರು ಕೈಜೋಡಿಸೋಣ. ನಮ್ಮ ಜಿಲ್ಲೆಯಲ್ಲಿ ಇಲ್ಲಿಯವರೆಗೆ 25 ಯಶಸ್ವಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆಗಳು ಮಾಡಲಾಗಿದ್ದು, ರಾಜ್ಯದಲ್ಲಿ 2ನೇ ಸ್ಥಾನ ಪಡೆದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಧ್ಯಾನೇಶ್ವರ ನಿರುಗುಡೆ ಹೇಳಿದರು.

ಇಲ್ಲಿನ ಗುರುನಾನಕ್‌ ದೇವ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ವಿಶ್ವ ಶ್ರವಣ ದಿನದ ನಿಮಿತ್ತ ‘ಮನಸ್ಥಿತಿಗಳನ್ನು ಬದಲಾಯಿಸುವುದು; ಎಲ್ಲರಿಗೂ ಶ್ರವಣ ಮತ್ತು ಶ್ರವಣ ಆರೈಕೆ ಸೇವೆಗಳನ್ನು ಸಾಫಲ್ಯಗೊಳಿಸೋಣ’ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ

ಮಾತನಾಡಿ, 5 ವರ್ಷದೊಳಗೆ ಶ್ರವಣ ದೋಷ ಹೊಂದಿರುವ ಮಕ್ಕಳ ಶ್ರವಣ ಪರೀಕ್ಷೆ ಮಾಡಿಸಿ ಪತ್ತೆ ಹಚ್ಚಿದ್ದಲ್ಲಿ ಸೂಕ್ತ ಚಿಕಿತ್ಸೆ ನೀಡಬಹುದು ಎಂದರು.

ಹೇಳಿ ಎನ್‌ಪಿಪಿಸಿಡಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದಿಲೀಪ ಡೋಂಗ್ರೆ ಎನ್‌ಪಿಪಿಸಿಡಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಇಎನ್‌ಟಿ ತಜ್ಞರಾದ ಡಾ.ನಿಶಾ ಕೌರ್ ಸುಧೀರ್ಘವಾಗಿ ಮಾತನಾಡಿದರು. ಎನ್‌ಪಿಪಿಸಿಡಿ ಕಾರ್ಯಕ್ರಮದ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಮಹೇಶ ಬಿರಾದರ, ಡಾ. ಸಮಂತ ಕಣಜಿಕರ್ ಇಎನ್‌ಟಿ ವಿಭಾಗದ ಮುಖ್ಯಸ್ಥರು ಬ್ರಿಮ್ಸ್, ಪುನಿತ್ ಸಿಂಗ್ ಕಾರ್ಯದರ್ಶಿಗಳು ಜಿಎನ್‌ಡಿ ಗ್ರೂಪ್ ಆಫ್ ಇನ್ಸ್‌ಟಿಟ್ಯುಶನ್, ಡಾ. ಧನಂಜಯ್ ಜಿಎನ್‌ಡಿ ಎಂಜಿನಿಯರಿಂಗ್‌ ಕಾಲೇಜು, ಡಾ. ರವಿ ಉದಗಿರೆ ಇಎನ್‌ಟಿ ತಜ್ಞರು ಬ್ರಿಮ್ಸ್, ಡಾ. ವೆಂಕಟರಮಣ ಆಡಿಯೋಲಾಜಿಸ್ಟ್, ಬಿಲಾಲ್, ಸೋಹೇಲ್, ಮುದ್ಸರ್ ಹಾಗೂ ಶಾಲುಬಾಯಿ ಇನ್ನಿತರರು ಉಪಸ್ಥತರಿದ್ದರು.