ಸಾರಾಂಶ
ಸಿಂಧನೂರಿನ ತಾಲೂಕು ಪಂಚಾಯಿತಿ ಆವರಣದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ವನಸಿರಿ ಫೌಂಡೇಶನ್ ಹಾಗೂ ನಮ್ಮ ಕರ್ನಾಟಕ ಸೇನೆ ವತಿಯಿಂದ ಪಕ್ಷಿಗಳಿಗೆ ನೀರಿನ ದಾಹ ತಿರಿಸಲು ಗಿಡಗಳಿಗೆ ಮಣ್ಣಿನ ಮಡಿಕೆಗಳನ್ನು ಕಟ್ಟುವ ಕಾರ್ಯಕ್ರಮ ನಡೆಯಿತು.
ಸಿಂಧನೂರು: ಪಕ್ಷಿ-ಪ್ರಾಣಿ ಸಂಕುಲವನ್ನು ಉಳಿಸಲು ವನಸಿರಿ ಫೌಂಡೇಶನ್‌ನೊಂದಿಗೆ ಕೈಜೋಡಿಸಿ ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರಾ ಹೇಳಿದರು.
ನಗರದ ತಾಪಂ ಆವರಣದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ವನಸಿರಿ ಫೌಂಡೇಶನ್ ಹಾಗೂ ನಮ್ಮ ಕರ್ನಾಟಕ ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಪಕ್ಷಿಗಳಿಗೆ ನೀರಿನ ದಾಹ ತಿರಿಸಲು ಗಿಡಗಳಿಗೆ ಮಣ್ಣಿನ ಮಡಿಕೆ ಕಟ್ಟುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈ ಬೇಸಿಗೆಯ ಬಿಸಿಲಿನ ತಾಪಕ್ಕೆ ಮನುಷ್ಯರೇ ತತ್ತರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಮೂಕ ಪ್ರಾಣಿ, ಪಕ್ಷಿಗಳು ನೀರು, ಆಹಾರ ಸಿಗದೆ ಅಳಿವಿನಂಚಿನಲ್ಲಿರುವುದು ವಿಷಾದನೀಯ ಎಂದರು.ವನಸಿರಿ ಫೌಂಡೇಶನ್ ರಾಜ್ಯ ಘಟಕದ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಜೀವ ಸ್ಪಂದನ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಅವಿನಾಶ ದೇಶಪಾಂಡೆ, ಕಂಪ್ಯೂಟರ್ ಆಪರೇಟರ್ ಹನುಮೇಶ ಜಾಗೀರದಾರ, ತಾ.ಪಂ ಅಧಿಕಾರಿಗಳಾದ ವೀರೇಶ, ದಿನೇಶ, ಅನಿಲಕುಮಾರ ಇದ್ದರು.