ಸಾರಾಂಶ
ನಾಪೋಕ್ಲು : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಅವರ ಗೃಹ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ, ಕಕ್ಕಬೆ ಭಾಗದ ಹಲವು ಬಿಜೆಪಿ ಮುಖಂಡರು, ಶಾಸಕರಾದ ಪೊನ್ನಣ್ಣ ಅವರ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿ ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭ ಡಿಸಿಸಿ ಸದಸ್ಯರಾದ ಬಾಚಮಂಡ ಲವ ಚಿಣ್ಣಪ್ಪ, ಮುಖಂಡರು ಹಾಗೂ ಮಾಜಿ ಗ್ರಾ.ಪಂ ಅಧ್ಯಕ್ಷರಾದ ಕಲಿಯಂಡ ಸಂಪನ್ ಅಯ್ಯಪ್ಪ ಮುಂದಾಳತ್ವ ಹಾಗೂ ಚೋಯಮಾದಂಡ ಮೊಣ್ಣಪ್ಪ, ಮತ್ತು ಅಣಡಿಯಂಡ ಚಂಗಪ್ಪ ಹಾಗು ಬೂತ್ ಅಧ್ಯಕ್ಷರಾದ ಚೋಯಮಾದಂಡ ಪೂಣಚ್ಚ ಉಪಸ್ಥಿತಿಯಲ್ಲಿ ಸೇರ್ಪಡೆ ನಡೆಯಿತು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದವರಲ್ಲಿ ಮುಕ್ಕಾಟಿರ ಚಿದಾನಂದ, ಚೋಯಮಾದಂಡ ನಾಣಯ್ಯ, ಚೋಯಮಾದಂಡ ಸುಬ್ರಮಣಿ, ಚೋಯಮಾದಂಡ ಅಪ್ಪುಚ್ಚು, ಚೋಯಮಾದಂಡ ಕಸ್ತೂರಿ ಗಣಪತಿ, ಚೋಯಮಾದಂಡ ಮನು, ಚೋಯಮಾದಂಡ ನಾಗಿತ, ಚೋಯಮಾದಂಡ ರೀತ, ಚೋಯಮಾದಂಡ ಶರತ್, ಚೋಯಮಾದಂಡ ಪುಷ್ಪಾವತಿ, ಕಕ್ಕಬೆ ದೇವಯ್ಯ, ಕೈಬುಲಿರಾ ಸಂತೋಷ್, ಪ್ರಕಾಶ್ ಕಪಾಳರ ಗ್ರಾಮ ಪಂಚಾಯತಿ ಸದಸ್ಯರು ಮತ್ತಿತರ ಪ್ರಮುಖರು ಸೇರ್ಪಡೆಗೊಂಡರು. ಶಾಸಕರು ಸರ್ವರನ್ನು ಪಕ್ಷದ ಶಲ್ಯ ಹೊದಿಸಿ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.