ಜೊಲ್ಲೆ ದಂಪತಿ ಸಮಾಜ ಸೇವೆ ಶ್ಲಾಘನೀಯ: ಛಲವಾದಿ ನಾರಾಯಣಸ್ವಾಮಿ

| Published : Nov 25 2024, 01:01 AM IST

ಸಾರಾಂಶ

ಜೊಲ್ಲೆ ದಂಪತಿ ಗ್ರಾಮೀಣ ಮಟ್ಟದಲ್ಲಿ ಸಹಕಾರ ಕ್ಷೇತ್ರ ಹುಟ್ಟುಹಾಕಿ ರಾಜ್ಯದ ರಾಜಧಾನಿ ಸೇರಿದಂತೆ ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ತಮ್ಮ ಶಾಖೆಗಳನ್ನು ಪ್ರಾರಂಭಿಸಿದ್ದಾರೆ. ಜೊಲ್ಲೆ ಅವರು ಕೇವಲ ಸಹಕಾರ ಕ್ಷೇತ್ರಕ್ಕೆ ಸೀಮಿತವಾಗದೆ ಜೊಲ್ಲೆ ಗ್ರುಪ್ ವತಿಯಿಂದ ಅನೇಕ ವಿಧಾಯಕ ಕಾರ್ಯಗಳನ್ನು ಮಾಡಿ ಮನೆಮಾತಾಗಿದ್ದಾರೆ ಎಂದು ಕರ್ನಾಟಕ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಜೊಲ್ಲೆ ದಂಪತಿ ಗ್ರಾಮೀಣ ಮಟ್ಟದಲ್ಲಿ ಸಹಕಾರ ಕ್ಷೇತ್ರ ಹುಟ್ಟುಹಾಕಿ ರಾಜ್ಯದ ರಾಜಧಾನಿ ಸೇರಿದಂತೆ ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ತಮ್ಮ ಶಾಖೆಗಳನ್ನು ಪ್ರಾರಂಭಿಸಿದ್ದಾರೆ. ಜೊಲ್ಲೆ ಅವರು ಕೇವಲ ಸಹಕಾರ ಕ್ಷೇತ್ರಕ್ಕೆ ಸೀಮಿತವಾಗದೆ ಜೊಲ್ಲೆ ಗ್ರುಪ್ ವತಿಯಿಂದ ಅನೇಕ ವಿಧಾಯಕ ಕಾರ್ಯಗಳನ್ನು ಮಾಡಿ ಮನೆಮಾತಾಗಿದ್ದಾರೆ ಎಂದು ಕರ್ನಾಟಕ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಭಾನುವಾರ ಯಕ್ಸಂಬಾ ಪಟ್ಟಣದ ಬೀರೇಶ್ವರ ಸಭಾಭವನದಲ್ಲಿ ಮಾಜಿ ಸಚಿವೆ ಹಾಗೂ ನಿಪ್ಪಾಣಿ ವಿಧಾನಸಭೆ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆಯವರ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಜೊಲ್ಲೆ ದಂಪತಿ ಸಹಕಾರ ಕ್ಷೇತ್ರದ ಜೊತೆಗೆ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ಸೈ ಎನಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಅಥಣಿಯ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ಹುಟ್ಟುಹಬ್ಬಗಳು ಸಾಮಾಜಿಕ ಕಾರ್ಯಗಳಾಗಬೇಕು, ಸಿರಿವಂತಿಕೆ ಹಾಗೂ ಹಿರಿವಂತಿಗೆ ಸಮಾಜ ಸೇವೆ ಮಾಡಬೇಕು. ಸಮಾಜಕ್ಕಾಗಿ ಬದುಕಬೇಕು, ಅಂದಾಗ ನಮ್ಮನ್ನು ಸಮಾಜ ಗೌರವಿಸುತ್ತದೆ ಎಂದು ಹೇಳಿದರು.

ಸದಲಗಾದ ಡಾ,ಶ್ರದ್ಧಾನಂದ ಸ್ವಾಮೀಜಿ ಮತ್ತು ಘೋಡಗೇರಿಯ ಮಲ್ಲಯ್ಯ ಸ್ವಾಮೀಜಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗೋಡೆ, ಡಾ,ಗೀತಾ ಮಾನೆ, ಪೈಲ್ವಾನ್‌ ಅಮೃತ ಬೋಸಲೆ, ಪವನ ಪಾಟೀಲ, ನಿಪ್ಪಾಣಿ ನಗರಾಧ್ಯಕ್ಷ ಸೋನಾಲಿ ಕೋಠಾಡಿಯಾ ಮಾತನಾಡಿದರು.

ನಿರ್ವತ್ತ ಸಿಬ್ಬಂದಿಗೆ ಪೆನ್ಶನ್ ಪ್ರಮಾಣ ಪತ್ರ, ಜೋತಿ ಬಜಾರ್‌ನಲ್ಲಿ ದಸರಾ ದೀಪಾವಳಿ ನಿಮ್ಮಿತ್ತ ಗ್ರಾಹಕರಿಗೆ ಆಯೋಜಿಸಿದ್ದ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಣೆ ನೀಡಲಾಯಿತು. ಕ್ರೀಡಾಪಟುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅಧ್ಯಕ್ಷತೆ ವಹಿಸಿ ಮಾರ್ಗದರ್ಶನ ನೀಡಿದರು. ಶಾಸಕ ದುರ್ಯೂಧನ ಐಹೊಳೆ, ಜಯಾನಂದ ಜಾಧವ, ಸಿದ್ರಾಮ ಗಡದೆ, ಲಕ್ಷ್ಮಣ ಕಬಾಡೆ, ಶಾಂಭವಿ ಅಶ್ವತ್ಥಪೂರ, ಸತೀಶ ಅಪ್ಪಾಜಿಗೊಳ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಅದ್ಯಕ್ಷ ಎಂ.ಪಿ ಪಾಟೀಲ, ವಿಲಾಸ ಗಾಡಿವಡ್ಡರ, ಯಶಶ್ವಿನಿ ಜೊಲ್ಲೆ, ಪ್ರೀಯಾ ಜೊಲ್ಲೆ. ಜೊಲ್ಲೆ ಗ್ರುಪ್‌ನ ವಿವಿಧ ಅಂಗಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಸಹಕಾರ ಧುರೀಣರು, ಮಹಿಳೆಯರು ಉಪಸ್ಥಿತರಿದ್ದರು.

ಬಸವ ಜ್ಯೋತಿ ಯೂತ್‌ ಫೌಂಡೇಶನ್‌ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ರಮೇಶ ಪಾಟೀಲ ನಿರೂಪಿಸಿದರು.ಕಳೆದ 34 ವರ್ಷಗಳ ಹಿಂದೆ ಯಕ್ಸಂಬಾದಲ್ಲಿ ಆರಂಭಿಸಿದ ಬೀರೇಶ್ವರ ಸಹಕಾರಿ ಸಂಸ್ಥೆ ಇಂದು ಕರ್ನಾಟಕ. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ 221 ಶಾಖೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಗುರುಗಳ ಮತ್ತು ಸಾರ್ವಜನಿಕರ ಆಶೀರ್ವಾದದಿಂದ ಹೆಮ್ಮರವಾಗಿ ಬೆಳೆದೆ. ಜೊಲ್ಲೆ ಗ್ರುಪ್ ಸಹಕಾರದೊಂದಿಗೆ ಸಾಮಾಜಿಕ ಕಾರ್ಯ ಮಾಡುತ್ತಿದೆ.

- ಶಶಿಕಲಾ ಜೊಲ್ಲೆ ಶಾಸಕಿ ನಿಪ್ಪಾಣಿ