ಲೀಸ್‌ಗೆ ಮುಂದಾಗಿದ್ದಕ್ಕೆ ಜೊಲ್ಲೆ ಸಹಕಾರ ಅನಿವಾರ್ಯವಾಯ್ತು!

| Published : Mar 06 2025, 12:31 AM IST

ಲೀಸ್‌ಗೆ ಮುಂದಾಗಿದ್ದಕ್ಕೆ ಜೊಲ್ಲೆ ಸಹಕಾರ ಅನಿವಾರ್ಯವಾಯ್ತು!
Share this Article
  • FB
  • TW
  • Linkdin
  • Email

ಸಾರಾಂಶ

ಆರ್ಥಿಕ ಸಂಕಷ್ಟದಲ್ಲಿರುವ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕಿನಿಂದ ಸಾಲ ನೀಡುವಂತೆ ಹಲವಾರು ಬಾರಿ ವಿನಂತಿಸಿಕೊಂಡರೂ ನಕಾರ ಮಾಡಿದ ಕತ್ತಿ ಅವರು ಕಾರ್ಖಾನೆಯನ್ನು ಲೀಸ್‌ ನೀಡುವ ನಿರ್ಣಯದ ವಿರುದ್ಧ ಕಾರ್ಖಾನೆಯ 7 ಜನ ನಿರ್ದೇಶಕರಾದ ನಾವು ಅಣ್ಣಾಸಾಹೇಬ ಜೊಲ್ಲೆಯವರ ಸಹಕಾರ ಪಡೆಯುವ ಪ್ರಸಂಗ ಬಂತು ಎಂದು ಹಿರಣ್ಯಕೇಶಿ ಕಾರ್ಖಾನೆಯ ನಿರ್ದೇಶಕ ಬಾಬಾಸಾಹೇಬ ಅರಬೋಳೆ ಅವರು ಕತ್ತಿ ಕುಟುಂಬದ ವಿರುದ್ಧ ಹೊಸ ಬಾಂಬ್ ಸಿಡಿಸಿದರು.

ಕನ್ನಡಪ್ರಭ ವಾರ್ತೆ ಸಂಕೇಶ್ವರ

ಹಿರಣ್ಯಕೇಶಿ ಕಾರ್ಖಾನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು 7 ಜನ ನಿರ್ದೇಶಕರು ಹಿರಣ್ಯಕೇಶಿ ಕಾರ್ಖಾನೆಯನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಕತ್ತಿ ಕುಟುಂಬದ ಅಧೀನದಲ್ಲಿರುವ ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕಿನಿಂದ ಸಾಲ ನೀಡಿ, ಕಾರ್ಖಾನೆ ಸುಗಮವಾಗಿ ನಡೆಸೋಣ ಎಂದು ಹಲವಾರು ಬಾರಿ ಕತ್ತಿ ಅವರಿಗೆ ಮನವಿ ಮಾಡಿಕೊಂಡೆವು. ಆದರೆ, ಕತ್ತಿ ಅವರು ಇದಕ್ಕೆ ಒಪ್ಪಲಿಲ್ಲ. ಇದರಿಂದ ನಾವು ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯು ಸಹಕಾರ ತತ್ವದಲ್ಲಿ ನಡೆದುಕೊಂಡು ಬಂದಿದೆ. ಅದೇ ರೀತಿ ಸಹಕಾರ ತತ್ವದಲ್ಲಿ ನಡೆಸಿಕೊಂಡು ಹೋಗೋಣ ಎಂದು ಹೇಳಿದ್ದೇವೆ. ಆದರೆ, ಅವರು ಕಾರ್ಖಾನೆಯನ್ನು ಖಾಸಗಿ ಅವರಿಗೆ ಲೀಜ್ (ಗುತ್ತಿಗೆ ಆಧಾರ) ಮೇಲೆ ನಡೆಸಲು ನೀಡುವ ಬಗ್ಗೆ ರಮೇಶ ಕತ್ತಿಯವರು ಚಿಂತನೆ ಮಾಡಿದರು. ಈ ಬಗ್ಗೆ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಪ್ರಸ್ತಾವ ಮಾಡಿದ್ದರು. ನಾವು ನಿರ್ದೇಶಕರಾಗಿದ್ದರಿಂದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಏನು ಮಾತನಾಡಲು ಆಗಲಿಲ್ಲ. ಆ ನಿರ್ಧಾರಕ್ಕೆ ನಾವು 7 ಜನ ನಿರ್ದೇಶಕರು ವಿರೋಧ ವ್ಯಕ್ತಪಡಿಸಿ ಅಣ್ಣಾಸಾಹೇಬ ಜೊಲ್ಲೆ ಹಾಗೂ ಬಾಲಚಂದ್ರ ಜಾರಕಿಹೊಳಿ ಸಹಕಾರ ಪಡೆದು ಕಾರ್ಖಾನೆಯನ್ನು ಮುನ್ನಡೆಸುವ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.ಕಾರ್ಖಾನೆಯ ಉಳಿವಿಗಾಗಿ ಹಾಗೂ ಕಾರ್ಮಿಕರ ಏಳ್ಗೆಗಾಗಿ ಕತ್ತಿ ಅವರು ಕಾರ್ಖಾನೆ ಲೀಜ್ ನೀಡುವುದರ ವಿರುದ್ಧ ನಾವು ದಂಗೆ ಏಳಬೇಕಾಯಿತು. ನಮಗೆ ಹಿಂದೆ ಆಧಾರವಾಗಿ ಜೊಲ್ಲೆ ಅವರು ನಿಂತಿರುವ ಹಿನ್ನೆಲೆಯಲ್ಲಿ ನಾವು ಎಲ್ಲ 7 ಜನ ನಿರ್ದೇಶಕರು ಕಾರ್ಖಾನೆಯನ್ನು ಮಾದರಿಯನ್ನಾಗಿ ಮಾಡಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಹಿರಣ್ಯಕೇಶಿ ಕಾರ್ಖಾನೆಯನ್ನು ಸಹಕಾರ ತತ್ವದಡಿಯಲ್ಲಿ ಮುನ್ನಡೆಸಲು ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. ಅವರಿಗೆ ಸಕ್ಕರೆ ಸರಿಯಾಗಿ ವಿತರಣೆ ಆಗಿರಲಿಲ್ಲ. ಕಬ್ಬು ಸರಿಯಾಗಿ ಕಟಾವು ಮಾಡಿ ಕಾರ್ಖಾನೆಗೆ ತಂದಿರಲಿಲ್ಲ. ಇದರಿಂದ ಕೆಲವರು ನಿರಾಸೆಯಾಗಿದ್ದರು ಎಂದು ತಿಳಿಸಿದರು.