ಸಾರಾಂಶ
ನಿರಂತರ ೨೦ ವರ್ಷಗಳಿಂದ ಧಾರವಾಡ ಕ್ಷೇತ್ರದ ಸಂಸದರಾಗಿರುವ ಜೋಶಿಯವರ ಕೊಡುಗೆ ಶೂನ್ಯವಾಗಿದ್ದು, ಹತ್ತು ವರ್ಷಗಳ ಹಿಂದೆ ಚುನಾವಣೆ ಪೂರ್ವದಲ್ಲಿ ಬಿಜೆಪಿ ಹೇಳಿದ ಒಂದೇ ಒಂದು ಕೆಲಸವನ್ನು ಮಾಡದೆ, ಗರದಿ ಗಮ್ಮತ್ತಿನ ಶೋದಂತೆ ರಾಮಮಂದಿರ ನೋಡ, ಮೋದಿ ನೋಡ ಎಂದು ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.
ಶಿಗ್ಗಾವಿ: ನಿರಂತರ ೨೦ ವರ್ಷಗಳಿಂದ ಧಾರವಾಡ ಕ್ಷೇತ್ರದ ಸಂಸದರಾಗಿರುವ ಜೋಶಿಯವರ ಕೊಡುಗೆ ಶೂನ್ಯವಾಗಿದ್ದು, ಹತ್ತು ವರ್ಷಗಳ ಹಿಂದೆ ಚುನಾವಣೆ ಪೂರ್ವದಲ್ಲಿ ಬಿಜೆಪಿ ಹೇಳಿದ ಒಂದೇ ಒಂದು ಕೆಲಸವನ್ನು ಮಾಡದೆ, ರಾಮಮಂದಿರ ನೋಡ, ಮೋದಿ ನೋಡ ಎಂದು ಗರದಿ ಗಮ್ಮತ್ತಿನ ಶೋದಂತೆ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಶಾಸಕ ವಿನಯ ಕುಲಕರ್ಣಿ ಕಿಡಿಕಾರಿದರು.
ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಹ್ಲಾದ ಜೋಶಿಯವರ ಆಶೀರ್ವಾದದಿಂದ ನಾಲ್ಕು ವರ್ಷಗಳಿಂದ ನಾನು ಧಾರವಾಡ ಕ್ಷೇತ್ರಕ್ಕೆ ಕಾಲಿಡದಂತ ಸ್ಥಿತಿ ಎದುರಾಗಿದ್ದರೂ ನನ್ನ ಜನತೆ ನನ್ನನ್ನು ಗೆಲ್ಲಿಸಿದ್ದಾರೆ, ದ್ವೇಷದ ರಾಜಕಾರಣಕ್ಕೆ ಜನ ಬೆಂಬಲ ನೀಡುವುದಿಲ್ಲ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆ ಮುಗಿಯುವವರಗೆ ವಿಶ್ರಾಂತಿ ಪಡೆಯದೆ ಮನೆ ಮನೆಗೆ ತೆರಳಿ ಜನರನ್ನು ಮನವೊಲಿಸಬೇಕು, ಜಾತಿ ಮತ ಎಂಬ ವಿಷ ಬೀಜಕ್ಕೆ ತುತ್ತಾಗದೆ ಯುವಜನಾಂಗ ಬಹಳ ಎಚ್ಚರಿಕೆಯಿಂದ ಮತದಾನ ಮಾಡಬೇಕು, ರಾಜ್ಯ ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿರುವ ಮಹಿಳೆಯರು ಆತ್ಮ ಸಂತೋಷದಿಂದ ವಿನೋದ ಅಸೂಟಿಯವರಿಗೆ ಮತ ಚಲಾಯಿಸಿ ಗೆಲ್ಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಯಾಸೀರಖಾನ ಪಠಾಣ, ಸೋಮಣ್ಣಾ ಬೇವಿನಮರದ, ತಾಲೂಕು ಅಧ್ಯಕ್ಷ ಬಿ.ಸಿ.ಪಾಟೀಲ, ವೀರೇಶ ಅಜೂರ, ಎಜೆ ಮುಲ್ಲಾ. ಎಸ್.ವಿ. ಪಾಟೀಲ, ಮಲ್ಲಮ್ಮಾ ಸೋಮನಕಟ್ಟಿ, ಸುಧೀರ ಲಮಾಣಿ, ಗುಡ್ಡಪ್ಪಾ ಜಲದಿ, ಬಾಬರ ಬಾವೋಜಿ ಇತರರಿದ್ದರು.