ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು

| Published : Oct 09 2025, 02:02 AM IST

ಸಾರಾಂಶ

ರಬಕವಿ-ಬನಹಟ್ಟಿ ರಸ್ತೆಯ ಬಂಡಿಗಣಿ ಕ್ರಾಸ್‌ನಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ ತಾಲೂಕಿನ ಆಲಗೂರು ಗ್ರಾಮದ ನಿವಾಸಿ ಪತ್ರಕರ್ತ ಬಸವರಾಜ ರಾಮಪ್ಪ ಕಾನಗೊಂಡ (40) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ರಬಕವಿ-ಬನಹಟ್ಟಿ ರಸ್ತೆಯ ಬಂಡಿಗಣಿ ಕ್ರಾಸ್‌ನಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ ತಾಲೂಕಿನ ಆಲಗೂರು ಗ್ರಾಮದ ನಿವಾಸಿ ಪತ್ರಕರ್ತ ಬಸವರಾಜ ರಾಮಪ್ಪ ಕಾನಗೊಂಡ (40) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ದ್ವಿಚಕ್ರವಾಹನದ ಹಿಂಬದಿಯ ಗಾಲಿ ಕಿತ್ತು ಹೋಗಿದೆ. ಮೃತರಿಗೆ ತಂದೆ-ತಾಯಿ, ಸಹೋದರ, ಪತ್ನಿ, ಓರ್ವ ಪುತ್ರಿ, ಅಪಾರ ಬಂಧು ಬಳಗ ಇದೆ. ಈ ಕುರಿತು ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.