ಸಾರಾಂಶ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೊಳೆಹೊನ್ನೂರು ಘಟಕ ಉಪಾಧ್ಯಕ್ಷ, ಡೈಲಿ ನ್ಯೂಸ್ ವರದಿಗಾರ ತಟ್ಟೆಹಳ್ಳಿ ರವಿಕುಮಾರ್ (35) ಹೃದಯಾಘಾತದಿಂದ ಮಂಗಳವಾರ ಸುಣ್ಣಿಗೆರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.
ಹೊಳೆಹೊನ್ನೂರು: ಜಿಲ್ಲಾ ಕಾರ್ಯನಿತ ಪತ್ರಕರ್ತರ ಸಂಘದ ಹೊಳೆಹೊನ್ನೂರು ಘಟಕ ಉಪಾಧ್ಯಕ್ಷ, ಡೈಲಿ ನ್ಯೂಸ್ ವರದಿಗಾರ ತಟ್ಟೆಹಳ್ಳಿ ರವಿಕುಮಾರ್ (35) ಹೃದಯಾಘಾತದಿಂದ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.
ಅಪ್ಪನ ತಂಗಿಯ ಸಾವಿಗೆಂದು ಚನ್ನಗಿರಿ ತಾಲೂಕಿನ ಸುಣ್ಣಿಗೆರೆಗೆ ಮಂಗಳವಾರ ಬೆಳಗಿನ ಜಾವ ಹೋಗಿದ್ದರು. ಆ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡಿದೆ. ಯಾರಿಗೂ ತಿಳಿಸದೇ ಒಮಿನಿಯಲ್ಲಿ ಡೋರ್ ಲಾಕ್ ಮಾಡಿ, ಕುಳಿತಿದ್ದರು. ಬಹಳ ಸಮಯವಾದರೂ ಯಾರಿಗೂ ಕಾಣದೇ ಹುಡುಕಾಡಿದಾಗ, ಒಮಿನಿಯಲ್ಲಿ ರವಿಕುಮಾರ್ ಇರಬಹುದು ಗೊತ್ತಾಗಿದೆ. ಜನರು ಎಷ್ಟು ಕರೆದರೂ ಎಚ್ಚರವಾಗಿಲ್ಲ. ಅನುಮಾನ ಬಂದು ವಾಹನದ ಗಾಜು ಒಡೆದು, ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಪರೀಕ್ಷಿಸಿ, ರವಿಕುಮಾರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ.ತಟ್ಟೆಹಳ್ಳಿ ಗ್ರಾಮದಲ್ಲಿ ಮಂಗಳವಾರದಿಂದ ಮೂರು ದಿನಗಳ ಕಾಲ ಮಾರಿ ಜಾತ್ರಾ ಮಹೋತ್ಸವವಿತ್ತು. ಆದಕಾರಣ, ಮೃತರ ತೋಟದಲ್ಲಿ ಮಂಗಳವಾರ ಸಂಜೆ ಅಂತ್ಯಸಂಸ್ಕಾರ ಮಾಡಲಾಯಿತು. ಪತ್ರಕರ್ತರ ಸಂಘದ ಹೊಳೆಹೊನ್ನೂರು ಹೋಬಳಿ ಘಟಕ ಸಂತಾಪ ಸೂಚಿಸಿದೆ.
- - - -19ಎಚ್ಎಚ್‌ಆರ್02: ತಟ್ಟೆಹಳ್ಳಿ ರವಿಕುಮಾರ್