ಕನ್ನಡಪ್ರಭದ ಅಜೀಜ್‌ ಅಹ್ಮದ ಬಳಗಾನೂರ, ವೆಂಕಟೇಶ ಲಾಳಗೆ ಸೇರಿದಂತೆ 13 ಜನರಿಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಲಭಿಸಿದೆ.

ಹುಬ್ಬಳ್ಳಿ: ಕನ್ನಡಪ್ರಭದ ಅಜೀಜ್‌ ಅಹ್ಮದ ಬಳಗಾನೂರ, ವೆಂಕಟೇಶ ಲಾಳಗೆ ಸೇರಿದಂತೆ 13 ಜನರಿಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಲಭಿಸಿದೆ.

ಪತ್ರಕರ್ತರ ಸಂಘವು ಪ್ರತಿವರ್ಷ ಕೊಡಮಾಡುವ ಪ್ರಶಸ್ತಿಯ ಅತ್ಯುತ್ತಮ ನಗರ ಲೇಖನ ವಿಭಾಗದಲ್ಲಿ ವರದಿಗಾರ ಅಜೀಜ್‌ ಅಹ್ಮದ ಬಳಗಾನೂರ, ಅತ್ಯುತ್ತಮ ಪುಟವಿನ್ಯಾಸ ವಿಭಾಗದಲ್ಲಿ ಪ್ರಧಾನ ಪುಟವಿನ್ಯಾಸಕ ವೆಂಕಟೇಶ ಲಾಳಗೆ ಪ್ರಶಸ್ತಿ ಲಭಿಸಿದೆ.

ಇನ್ನುಳಿದಂತೆ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆಗೆ ನಾಗರಾಜ ಕುಂಕೂರು, ಅತ್ಯುತ್ತಮ ನಗರ ವರದಿಗಾರಿಕೆಗೆ ಶಿವರಾಯ ಪೂಜಾರಿ, ಮಾಲತೇಶ ಹೂಲಿಹಳ್ಳಿ, ಮಹಿಳಾ ವಿಭಾಗದ ವಿಶೇಷ ವರದಿಗೆ ವೀಣಾ ಕುಂಬಾರ, ಅತ್ಯುತ್ತಮ ಮಾನವಾಸಕ್ತ ವರದಿಗೆ ಶಾಹಿನ್ ಮೊಕಾಶಿ, ಅತ್ಯುತ್ತಮ ಲೇಖನ ಪ್ರಶಸ್ತಿಗೆ ಅಂಬರೀಶ ಹಾನಗಲ್‌, ತನಿಖಾ ವರದಿ ಪ್ರಶಸ್ತಿಗೆ ಮಂಜುನಾಥ ಅಂಗಡಿ, ಅತ್ಯುತ್ತಮ ಗ್ರಾಮೀಣ ಲೇಖನ ಪ್ರಶಸ್ತಿಗೆ ಸಿ.ವೈ. ಲಗಮ್ಮಣ್ಣವರ, ಆಂಗ್ಲ ಭಾಷೆ ವರದಿಗಾರಿಕೆ ಪ್ರಶಸ್ತಿಗೆ ಸಂಗಮೇಶ ಮೆಣಸಿನಕಾಯಿ, ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಗೆ ಗಿರೀಶ ಮುಕ್ಕಲ್, ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿಗೆ ಸದ್ದಾಂ ಮುಲ್ಲಾ ಆಯ್ಕೆಯಾಗಿದ್ದಾರೆ.

ಜೀವಮಾನ ಸಾಧನೆ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಗಣೇಶ ಜೋಶಿ, ಅವ್ವ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಮಂದಾಕಿನಿ ಅವರು ಭಾಜನರಾಗಿದ್ದಾರೆ.

ಪತ್ರಿಕಾ ದಿನ

ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಜು. 26ರಂದು ಬೆಳಗ್ಗೆ 10.30ಕ್ಕೆ ನಡೆಯಲಿರುವ ಪತ್ರಿಕಾ ದಿನಾಚರಣೆಯಲ್ಲಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ವಿಆರ್‌ಎಲ್‌ ಸಮೂಹ ಸಂಸ್ಥೆಗಳ ಚೇರಮನ್‌ ಡಾ. ವಿಜಯ ಸಂಕೇಶ್ವರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕೆಎಲ್‌ಇ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮಾಧ್ಯಮ ಅಕಾಡೆಮಿ ಸದಸ್ಯ ಜೆ.ಅಬ್ಬಾಸ್‌ ಮುಲ್ಲಾ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಬಸವರಾಜ ಕಟ್ಟಿಮನಿ, ಗಣಪತಿ ಗಂಗೊಳ್ಳಿ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಬಂಡು ಕುಲಕರ್ಣಿ ವಹಿಸಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಗುರು ಭಾಂಡಗೆ ತಿಳಿಸಿದ್ದಾರೆ.