ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯನ್ನು ಹೊಂದಿದ್ದು,ದೃಶ್ಯ ಮಾದ್ಯಮದ ಆರ್ಭಟದ ಮದ್ಯೆಯಲ್ಲಿ ಪತ್ರಿಕಾ ರಂಗ ಗೌರವ ಉಳಿಸಿಕೊಳ್ಳುಲ್ಲಿ ಪತ್ರಕರ್ತರ ಕೊಡುಗೆ ಮಹತ್ವದ್ದಾಗಿದೆ ಎಂದು ಕ್ಷೇತ್ರದ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯನ್ನು ಹೊಂದಿದ್ದು,ದೃಶ್ಯ ಮಾದ್ಯಮದ ಆರ್ಭಟದ ಮದ್ಯೆಯಲ್ಲಿ ಪತ್ರಿಕಾ ರಂಗ ಗೌರವ ಉಳಿಸಿಕೊಳ್ಳುಲ್ಲಿ ಪತ್ರಕರ್ತರ ಕೊಡುಗೆ ಮಹತ್ವದ್ದಾಗಿದೆ ಎಂದು ಕ್ಷೇತ್ರದ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅಭಿಪ್ರಾಯಪಟ್ಟರು.ಪಟ್ಟಣದ ಪತ್ರಿಕಾ ಭವನದಲ್ಲಿ ತಾಲೂಕು ಕಾರ್ಯನಿರತ ಪರ್ತಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದರು.
ಹೆಚ್ಚಿನ ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುವ ಪರ್ತಕರ್ತರು ಕಾಲಕಾಲಕ್ಕೆ ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಪತ್ರಕರ್ತರ ಜವಾಬ್ದಾರಿ ಹೆಚ್ಚಿದ್ದು ದೃಶ್ಯ ಮಾದ್ಯಮದ ಆರ್ಭಟದಲ್ಲಿ ಇಂದಿಗೂ ಪತ್ರಿಕಾ ರಂಗ ಗೌರವ ಘನತೆ ಉಳಿಸಿಕೊಳ್ಳುವಲ್ಲಿ ಪತ್ರಕರ್ತರ ಕೊಡುಗೆ ಮಹತ್ವದ್ದಾಗಿದೆ ಎಂದು ಪ್ರಶಂಸಿಸಿದರು.ಸರ್ಕಾರ ಹಾಗೂ ಜನಪ್ರತಿನಿಧಿಗಳ ತಪ್ಪು ನಿರ್ದಾರದಿಂದ ಸಮಾಜ ಪರಿಣಾಮ ಎದುರಿಸದಂತೆ ಸಕಾಲದಲ್ಲಿ ಎಚ್ಚರಿಸಿ ಕಿವಿ ಹಿಂಡುವ ಕೆಲಸ ಪತ್ರಿಕಾ ಕ್ಷೇತ್ರ ಸಮರ್ಥವಾಗಿ ನಿರ್ವಹಿಸುತ್ತಿದ್ದು ಈ ದಿಸೆಯಲ್ಲಿ ತಂದೆ,ಮಾಜಿ ಸಿ.ಎಂ ಯಡಿಯೂರಪ್ಪನವರು ಪತ್ರಿಕಾ ಕ್ಷೇತ್ರ ಹಾಗೂ ಪರ್ತಕರ್ತರ ಬಗ್ಗೆ ಅಪಾರ ಗೌರವ ಹೊಂದಿದ್ದು ಈ ಸಂಪ್ರದಾಯವನ್ನು ಪಾಲಿಸುತ್ತಿರುವುದಾಗಿ ತಿಳಿಸಿದರು.
ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ,ತಂದೆ ಯಡಿಯೂರಪ್ಪನವರು ಪರ್ತಕರ್ತರ ಬಗ್ಗೆ ವಿಶೇಷವಾದ ಮಮಕಾರ ಹೊಂದಿದ್ದು ನಿತ್ಯ ಪತ್ರಿಕೆ ಒದಲು ಸಮಯ ನಿಗದಿಪಡಿಸಿದ್ದಾರೆ ಒಂದು ವಿಷಯ ವಿಭಿನ್ನ ಮನಸ್ಥಿತಿಯ ಹಲವು ಪತ್ರಕರ್ತರು ವಿಶ್ಲೇಷಿಸುವ ಮೂಲಕ ವಿಶೇಷ ರೀತಿಯಲ್ಲಿ ಒದುಗರಿಗೆ ತಲುಪಿಸಲಾಗುತ್ತದೆ ಎಂದು ಶ್ಲಾಘಿಸಿ ಪೂರ್ವಾಗ್ರಹವಿಲ್ಲದ ಬರಹ ಮಾತ್ರ ಸಮಾಜದಲ್ಲಿನ ಪ್ರತಿಯೊಬ್ಬರನ್ನು ತಲುಪಲಿದೆ. ಹೆಚ್ಚು ಹೆಚ್ಚು ಅರ್ಥಪೂರ್ಣ ಸುದ್ದಿಗಾಗಿ ಪತ್ರಕರ್ತರಿಗೆ ಅಧ್ಯಯನದ ಅಗತ್ಯವಿದೆ ಎಂದು ತಿಳಿಸಿದರು.ವಸ್ತುನಿಷ್ಠ ವರದಿ ಮೂಲಕ ಸಮಾಜಕ್ಕೆ ಕೊಡುಗೆ ಸಲ್ಲಿಸುತ್ತಿರುವ ಪರ್ತಕರ್ತರ ವರದಿ ವಿಶಿಷ್ಟ ಶಕ್ತಿ ಹೊಂದಿದೆ. ಹಲವು ಪರ್ತಕರ್ತರು ನಾಡಿನ ಸಾಹಿತ್ಯ ಸಾಂಸ್ಕೃತಿಕ ಪರಂಪರೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯನಿರತ ಪರ್ತಕರ್ತರ ಸಂಘದ ರಾಜ್ಯ ಚುನಾವಣಾಧಿಕಾರಿ ರವಿಕುಮಾರ್ ಟೆಲೆಕ್ಸ್ ಮಾತನಾಡಿ, ಪರ್ತಕರ್ತರ ಹಿತಾಸಕ್ತಿಗಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ವಿಶೇಷವಾದ ಕೊಡುಗೆ ನೀಡಿದ್ದು ಕೊರೋನಾ ಸಂದರ್ಬದಲ್ಲಿ ಮೃತಪಟ್ಟ 56 ಪರ್ತಕರ್ತರ ಪ್ರತಿ ಕುಟುಂಬಕ್ಕೆ 5 ಲಕ್ಷ ರು. ವಿತರಿಸಿದ್ದಾರೆ ಎಂದು ಸ್ಮರಿಸಿ ಪ್ರಸ್ತುತ ಸಂಸದರು ಹಾಗೂ ಶಾಸಕರು ರಾಜ್ಯ ಸರ್ಕಾರದ ಗಮನ ಸೆಳೆದು ಆರೋಗ್ಯ ವಿಮೆ.ಕ್ಯಾಶ್ ಲೆಸ್ ಆರೋಗ್ಯ ಯೋಜನೆ ಜಾರಿಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.ತಾ.ಕಾರ್ಯನಿರತ ಪರ್ತಕರ್ತರ ಸಂಘದ ನೂತನ ಅದ್ಯಕ್ಷರಾಗಿ ಆಯ್ಕೆಯಾದ ಎಂ.ನವೀನ್ ಕುಮಾರ್, ಶಿರಾಳಕೊಪ್ಪ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಠದ್, ಉಪಾಧ್ಯಕ್ಷ ಎಚ್.ಎಸ್ ರಘು, ಎಚ್.ಕೆ ಪ್ರಕಾಶ್, ಖಜಾಂಚಿ ಬಗನಕಟ್ಟೆ ಮಂಜಪ್ಪ, ಸಹಕಾರ್ಯದರ್ಶಿ ಅರುಣ್ ಕುಮಾರ್ ಶಿರಾಳಕೊಪ್ಪ, ಕಾಳಿಂಗ್ ರಾವ್ ಅವರನ್ನು ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರ ಗೌರವಿಸಿ ಸನ್ಮಾನಿಸಿದರು.
ಅಧ್ಯಕ್ಷತೆಯನ್ನು ತಾ.ಕಾ.ಪರ್ತಕರ್ತರ ಸಂಘದ ಅಧ್ಯಕ್ಷ ಬಿ.ಎಲ್ ರಾಜು ವಹಿಸಿದ್ದರು. ಜಿಲ್ಲಾಧ್ಯಕ್ಷ ವೈದ್ಯನಾಥ್,ಉಪಾಧ್ಯಕ್ಷ ಹುಚ್ರಾಯಪ್ಪ,ಪ್ರ.ಕಾ ಹಾಲಸ್ವಾಮಿ,ಕಾರ್ಯದರ್ಶಿ ದೀಪಕ್ ಸಾಗರ್, ಸಂ.ಕಾ ಗಾ.ರಾ ಶ್ರೀನಿವಾಸ್, ಜಿಲ್ಲಾ ಸಂಘದ ನಿರ್ದೇಶಕ ರಾಜಾರಾವ್ ಜಾಧವ್, ತಾ.ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಸಿ ವೇಣು ಗೋಪಾಲ್, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಇ.ಎಚ್ ಬಸವರಾಜ್, ಹಿರಿಯ ಸದಸ್ಯ ಅರುಣ್ ಕುಮಾರ್, ವೈಭವ ಶಿವಣ್ಣ, ಬಾಲಕೃಷ್ಣ ಜೋಯಿಸ್, ಚಂದ್ರಶೇಖರ್ ಮಠದ್, ಕೋಟೇಶ್ವರ್, ವಿನಯ್ ಕುಮಾರ್ ವಾಲಿ, ನವೀದ್,ಐ.ಎಫ್ ಮಳಗಿ, ರಾಘವೇಂದ್ರ, ಸತೀಶ್, ಗಣ್ಯರು ಹಾಜರಿದ್ದರು.