ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮಾತು ಬಾರದ, ಕಿವಿ ಕೇಳದ ಬಡ ಮಕ್ಕಳಿಗಾಗಿ ತನ್ನ ಬದುಕನ್ನೇ ಅರ್ಪಿಸಿ, ಅವರಿಗೆ ಧ್ವನಿಯಾಗಿರುವ ಸುಜಾತ ರೇಶ್ಮಿ ಅವರು ನಿಜಾರ್ಥದಲ್ಲಿ ಮಹಾತಾಯಿಯಷ್ಟೇ ಗೌರವಕ್ಕೆ ಪಾತ್ರರು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಶ್ಲಾಘಿಸಿದರು.ನಗರದ ಸ್ವಪ್ನಾ ಕಿವುಡ ಹಾಗೂ ಮೂಗ ಮಕ್ಕಳ ಶಾಲೆಯಲ್ಲಿ ಕಾನಿಪ ನೂತನ ಪದಾಧಿಕಾರಿಗಳಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, 2009ರಲ್ಲಿ ಕೇವಲ ಮೂರು ಮಕ್ಕಳಿಂದ ಯಾರ ಸಹಾಯವಿಲ್ಲದೆ ಆರಂಭವಾದ ಈ ಶಾಲೆ ಇಂದು 130 ಮಕ್ಕಳಿಗೆ ಆಶ್ರಯ ಕೂಡುವ ಮಟ್ಟಕ್ಕೆ ಬೆಳೆದಿರುವುದು ಅಚ್ಚರಿಯ ಸಂಗತಿ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಮಾತನಾಡಿ, ಶಾಲೆಯ ಮುಂದಿನ ಬೆಳವಣಿಗೆಗಾಗಿ ಹಾಗೂ ಶೈಕ್ಷಣಿಕ ಸೌಲಭ್ಯಗಳ ವೃದ್ಧಿಗಾಗಿ ಸಂಘವು ರೇಶ್ಮಿ ಕುಟುಂಬದೊಂದಿಗೆ ಕೈ ಜೋಡಿಸುವುದಾಗಿ ಭರವಸೆ ನೀಡಿದರು.ಈ ವೇಳೆ ಕಾನಿಪ ಸಂಘದ ನೂತನ ಪದಾಧಿಕಾರಿಗಳಾದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ, ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ, ಉಪಾಧ್ಯಕ್ಷ ಶಶಿಕಾಂತ ಮೆಂಡೆಗಾರ, ಖಜಾಂಚಿ ರಾಹುಲ್ ಆಪ್ಟೆ, ಕಾರ್ಯದರ್ಶಿಗಳಾದ ಅವಿನಾಶ ಬಿದರಿ, ವಿನೋದ ಸಾರವಾಡ, ಸದ್ದಾಂ ಜಮಾದಾರ, ಕಾರ್ಯಕಾರಿ ಸದಸ್ಯರಾದ ಗುರುರಾಜ ಗದ್ದನಕೇರಿ, ಸುರೇಶ ತೇರದಾಳ, ಚಿದಂಬರ ಕುಲಕರ್ಣಿ, ಸಂಜಯ ಕೋಳಿ, ಶ್ರೀನಿವಾಸ ಸೂರಗೊಂಡ, ಗೋಪಾಲ ಕನಿಮಣಿ, ಶಿವಾನಂದ ಶಿವಶರಣ, ಪ್ರಭು ಕುಮಟಗಿ, ಹಿರಿಯ ಸಾಧಕರಾದ ಶೈಲಜಾ ಬಿದರಿ, ಶೈಲಾ ಮಣೂರ, ರುದ್ರಮ್ಮ ರೊಳ್ಳಿಯನ್ನು ಸನ್ಮಾನಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಶಿವಾನಂದ ರೇಶ್ಮಿ, ಉಪಾಧ್ಯಕ್ಷ ಪ್ರಬಣ್ಣ ಬಿರಾದಾರ, ಶಾಲೆಯ ಮುಖ್ಯಗುರುಮಾತೆ ಸುಜಾತ ಬಿರಾದಾರ (ರೇಶ್ಮಿ), ಹಿರಿಯ ಪತ್ರಕರ್ತರಾದ ಶರಣು ಮಸಳಿ, ಮಹೇಶ ಶೆಟಗಾರ, ಮೋಹನ ಕುಲಕರ್ಣಿ, ಕೆ.ಕೆ.ಕುಲಕರ್ಣಿ, ರಾಜು ಕೊಂಡಗೂಳಿ, ವಿಠ್ಠಲ ಲಂಗೋಟಿ, ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕಿ ರುಕ್ಮಿಣಿ ಕೋಳಿ ನಿರೂಪಿಸಿದರು. ಹೇಮಾ ಕೆಂಗಸೂರ ಸ್ವಾಗತಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))