ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುದೇಶದ ಎಲ್ಲಾ ಜನರು ಸಮಾನವಾಗಿ ಬದುಕುವ ಹಕ್ಕು, ಅವಕಾಶ ಕಲ್ಪಿಸಿಕೊಟ್ಟ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ವಿರುದ್ಧ ವಾತನಾಡುವವರೇ ನಿಜವಾದ ದೇಶದ್ರೋಹಿಗಳು ಎಂದು ಮಾಜಿ ಮೇಯರ್ ಪುರುಷೋತ್ತಮ್ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.ಕೆಎಸ್ಸಾರ್ಟಿಸಿ ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗದ ಪ.ಜಾತಿ ಮತ್ತು ಪ.ಪಂಗಡದ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ, ಪ.ಜಾತಿ ಮತ್ತು ಪ.ಪಂಗಡದ ನೌಕರರ ಸಂಘದ ಸಹಯೋಗದಲ್ಲಿ ಶನಿವಾರ ನಗರದ ಪತ್ರಕರ್ತರ ಭವನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಒಳಗೊಂಡ ಕ್ಯಾಲೆಂಡರ್ ಬಿಡುಗಡೆಗೊಳಿಸಿ ವಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ವಿವಿಧ ಜಾತಿ, ಧರ್ಮ, ಭಾಷೆ, ಪಂಗಡಗಳ ಹೆಸರಿನಲ್ಲಿ ಹಂಚಿಹೋಗಿರುವ ದೇಶದ ಜನರನ್ನು ಒಂದಾಗಿ ಬೆಸೆದಿದೆ. ಎಲ್ಲರೂ ಸೌಹಾರ್ಧ ಯುತವಾಗಿ ಬದುಕುವ ಕಾನೂನಾತ್ಮಕ ವ್ಯವಸ್ಥೆಯನ್ನು ಅಂಬೇಡ್ಕರ್ ರಚಿತ ಸಂವಿಧಾನ ನಿರ್ಮಾಣ ಮಾಡಿದೆ ಎಂದು ಬಣ್ಣಿಸಿದರು.ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತಕ್ಕೆ ಫ್ಯಾಷನ್ ಮಾತ್ರವಲ್ಲ. ಅಂಬೇಡ್ಕರ್ ಅವರು ಇಡೀ ವಿಶ್ವಕ್ಕೆ ಸ್ಫೂರ್ತಿಯಾಗಿದ್ದಾರೆ. ಆದ್ದರಿಂದಲೇ ಇಡೀ ವಿಶ್ವ ಅವರನ್ನು ವಿಶ್ವಜ್ಞಾನಿ ಎಂದು ಗೌರವಿಸುತ್ತದೆ. ಅಂಬೇಡ್ಕರ್ ಎಂದರೆ ದೇಶದ ಜನರ ಪ್ರಾಣ ಎಂದರು.ಅವರಿಗೆ ಅವಮಾನ ಮಾಡುವುದೆಂದರೆ ದೇಶದ ಘನತೆ ಮತ್ತು ಸಾರ್ವಭೌಮತ್ವಕ್ಕೆ ಮಾಡಿದ ಅವಮಾವಾ ಎಂದು ಅವರು ತಿಳಿಸಿದರು.ಸಾರ್ವಜನಿಕರು ಬಸ್ಸು ಹತ್ತುವಾಗ ಮತ್ತು ಇಳಿಯುವಾಗ ಕೆಎಸ್ಸಾರ್ಟಿಸಿ ನೌಕರರು ಯಾವುದೇ ಒಬ್ಬ ವ್ಯಕ್ತಿಯನ್ನೂ ನೀನು ಯಾವ ಜಾತಿ ಎಂದು ಕೇಳುವುದಿಲ್ಲ. ಆದ್ದರಿಂದ ಕೆಎಸ್ಸಾರ್ಟಿಸಿ ಒಂದು ಜ್ಯಾತ್ಯಾತೀತ ಸಂಸ್ಥೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಕೆಎಸ್ಸಾರ್ಟಿಸಿ ಮೈಸೂರು ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಿ. ಶ್ರೀನಿವಾಸ್, ನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ. ವೀರೇಶ್ ತ್ಯಾಪಿ, ಸಂಘದ ರಾಜ್ಯಾಧ್ಯಕ್ಷ ಎನ್. ರವೀಂದ್ರ ಮೊದಲಾದವರು ಇದ್ದರು.