26ಕ್ಕೆ ಪತ್ರಿಕಾ ದಿನ ಆಚರಣೆಗೆ ಪತ್ರಕರ್ತರ ಸಿದ್ಧತೆ

| Published : Jul 07 2025, 11:48 PM IST

ಸಾರಾಂಶ

ಮುದ್ದೇಬಿಹಾಳ: ಕಾರ್ಯನಿರತ ಪತ್ರಕರ್ತರ ಸಂಘದ ಮುದ್ದೇಬಿಹಾಳ ತಾಲೂಕು ಘಟಕದಿಂದ ಜು.26ರಂದು ಪತ್ರಿಕಾ ದಿನಾಚರಣೆ, ತಾಲೂಕು ಮಟ್ಟದ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಸೋಮವಾರ ಪ್ರವಾಸಿ ಮಂದಿರದಲ್ಲಿ ಅಧ್ಯಕ್ಷ ಮುತ್ತು ವಡವಡಗಿ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಮುದ್ದೇಬಿಹಾಳ: ಕಾರ್ಯನಿರತ ಪತ್ರಕರ್ತರ ಸಂಘದ ಮುದ್ದೇಬಿಹಾಳ ತಾಲೂಕು ಘಟಕದಿಂದ ಜು.26ರಂದು ಪತ್ರಿಕಾ ದಿನಾಚರಣೆ, ತಾಲೂಕು ಮಟ್ಟದ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಸೋಮವಾರ ಪ್ರವಾಸಿ ಮಂದಿರದಲ್ಲಿ ಅಧ್ಯಕ್ಷ ಮುತ್ತು ವಡವಡಗಿ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಜು.26ರಂದು ಬೆಳಿಗ್ಗೆ 9 ಗಂಟೆಗೆ ಆಲಮಟ್ಟಿ ರಸ್ತೆ ಪಕ್ಕದ ಅರಿಹಂತಗಿರಿಯ ಅರಿಹಂತ ಚಾರಿಟೇಬಲ್ ಟ್ರಸ್ಟ್‌ನ ಕಾಲೇಜು ಆವರಣದಲ್ಲಿ ಸಮಾರಂಭ ನಡೆಯಲಿದೆ. ಪಿಯುಸಿ, ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ, ತಾಲೂಕಿನ ಐವರು ಪತ್ರಕರ್ತರಿಗೆ ತಾಲೂಕು ಮಟ್ಟದ ಉತ್ತಮ ಪತ್ರಕರ್ತ ಪ್ರಶಸ್ತಿಗೆ ಆಯ್ಕೆಗೆ ಒಪ್ಪಿಗೆ ನೀಡಿದರು. ಇದೇ ಸಮಾರಂಭದಲ್ಲಿ ಕೆಯುಡಬ್ಲ್ಯೂಜೆ ವಿಜಯಪುರ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷ ಬಸವನ ಬಾಗೇವಾಡಿಯ ಹಿರಿಯ ಪತ್ರಕರ್ತ ಪ್ರಕಾಶ ಬೆಣ್ಣೂರರನ್ನು ಸನ್ಮಾನಿಸಲು ಮತ್ತು ಜಿಲ್ಲೆಯ ಎಲ್ಲ ಪದಾಧಿಕಾರಿಗಳನ್ನು ಆಹ್ವಾನಿಸಲು ಸಭೆ ಒಪ್ಪಿಗೆ ಸೂಚಿಸಿತು.ಈ ವೇಳೆ ಕೆಯುಡಬ್ಲ್ಯೂಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಿ.ಬಿ.ವಡವಡಗಿ ಮಾತನಾಡಿ, ಸರ್ವ ಸದಸ್ಯರು ಜವಾಬ್ಧಾರಿ ವಹಿಸಿಕೊಂಡು ಯಾರಿಂದಲೂ ಚಂದಾ ಎತ್ತದೆ ಸಮಾರಂಭ ಹಮ್ಮಿಕೊಳ್ಳುವುದಾಗಿ ತಿಳಿಸಿದರು.ಜಿಲ್ಲಾ ಪ್ರಶಸ್ತಿಗೆ ಆಯ್ಕೆ: ಸಂಘದ ಹಿರಿಯ ಸದಸ್ಯ ನೂರೇನಬಿ ನದಾಫರನ್ನು ಚೀಟಿ ಮೂಲಕ ಸಂಘದ ಜಿಲ್ಲಾ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಜಿಲ್ಲಾ ಘಟಕ ವಿಜಯಪುರದಲ್ಲಿ ಜು.19ರಂದು ಆಯೋಜಿಸಿರುವ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ, ಅಭಿನಂದನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ತಾಲೂಕು ಪ್ರಶಸ್ತಿಗೆ ಐವರ ಆಯ್ಕೆ: ತಾಲೂಕು ಉತ್ತಮ ಪತ್ರಕರ್ತ ವಾರ್ಷಿಕ ಪ್ರಶಸ್ತಿಗೆ ಯುವ ಪತ್ರಕರ್ತರಾದ ಹಣಮಂತ ಬೀರಗೊಂಡ(ಢವಳಗಿ), ರಿಯಾಜ್ ಮುಲ್ಲಾ, ಮುತ್ತು ಟಕ್ಕಳಕಿ, ಈಶ್ವರ ಈಳಗೇರ(ರೂಢಗಿ) ಮತ್ತು ಕೃಷ್ಣಾ ಕುಂಬಾರ ಅವರನ್ನು ಆಯ್ಕೆ ಮಾಡಲಾಯಿತು.

ಸಂಘದ ತಾಲೂಕು ಉಪಾಧ್ಯಕ್ಷ ಸಿದ್ದು ಚಲವಾದಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ನಂದೆಪ್ಪನವರ್, ಸಂಘದ ಮಾಜಿ ಅಧ್ಯಕ್ಷ ಎಚ್.ಆರ್.ಬಾಗವಾನ, ಅಮೀನಸಾಬ ಮುಲ್ಲಾ, ಸದಸ್ಯರಾದ ನೂರೇನಬಿ ನದಾಫ, ಬಂದೇನವಾಜ್ ಕುಮಸಿ, ಬಸವರಾಜ ಕುಂಬಾರ, ಸಾಗರ ಉಕ್ಕಲಿ, ಪುಂಡಲೀಕ ಮುರಾಳ, ಮಕ್ಬುಲ್ ಬನ್ನೆಟ್ಟಿ, ಹಣಮಂತ ಬೀರಗೊಂಡ(ಢವಳಗಿ), ಮುತ್ತು ಬೀರಗೊಂಡ(ಢವಳಗಿ), ಗುರುರಾಜ ಪತ್ತಾರ(ಬಡಿಗೇರ), ಕೃಷ್ಣಾ ಕುಂಬಾರ, ಸೂರಜ್ ರಿಸಾಲ್ದಾರ್, ಈಶ್ವರ ಈಳಗೇರ(ರೂಢಗಿ), ನಾಗೇಂದ್ರ ಶಿವಸಿಂಪಿ ಇತರರು ಇದ್ದರು.