ಸಾರಾಂಶ
ಕೊಪ್ಪಳ:
ಪತ್ರಕರ್ತರು ನೈತಿಕವಾಗಿ ತಲೆ ಎತ್ತಿ ಮಾತನಾಡುವ ವೃತ್ತಿಪರತೆ ಹಾಗೂ ಪ್ರಾಮಾಣಿಕತೆ ರೂಢಿಸಿಕೊಳ್ಳಬೇಕೆಂದು ಪತ್ರಕರ್ತ ಶಿವಕುಮಾರ ಮೆಣಸಿನಕಾಯಿ ಹೇಳಿದರು.ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಮಂಗಳವಾರ ಬಾಲಾಜಿ ಫಂಕ್ಷನ್ ಹಾಲ್‌ನಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ಹೆಚ್ಚು ಜವಾಬ್ದಾರಿಯಿಂದ ಇರಬೇಕು. ಪತ್ರಿಕಾ ರಂಗ ಉದ್ಯಮವಾಗಿ ಬದಲಾಗಿರಬಹುದು. ಆದರೆ, ಪತ್ರಕರ್ತ ವರ್ತಕನಾಗಬಾರದು ಎಂದ ಅವರು, ಅಪರಾಧಿ ಸ್ಥಾನದಲ್ಲಿ ಪತ್ರಿಕೋದ್ಯಮ ಸಾಗುತ್ತಿದೆ. ಈ ಕಾಲಘಟ್ಟದಲ್ಲಿ ಇತಿ-ಮಿತಿಯಲ್ಲಿ ಕನಿಷ್ಠ ಮಟ್ಟದ ಪ್ರಾಮಾಣಿಕ ಪತ್ರಕರ್ತನಾಗಿ ಬದುಕಬೇಕು. ವೃತ್ತಿ ಧರ್ಮ, ವೃತ್ತಿಪರತೆ ಕಾಪಾಡಿಕೊಳ್ಳಬೇಕು ಎಂದರು.ಮೀಡಿಯಾ ಕ್ಲಬ್ ಅಧ್ಯಕ್ಷ ರವೀಂದ್ರ ವಿ.ಕೆ. ಮಾತನಾಡಿ, ಮಾಧ್ಯಮ ಕ್ಷೇತ್ರ ಬದಲಾಗಿದ್ದು ಹಲವು ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದರು.
ವಾರ್ಷಿಕ ಪ್ರಶಸ್ತಿ ಪ್ರದಾನ:ಅನ್ವಿತಾ ಮಹಿಳೆಯರ ವೃದ್ಧರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ರೇವಣಕಿ ವತಿಯಿಂದ ಪ್ರಥಮ ಬಾರಿಗೆ ಕೊಡುವ ವಾರ್ಷಿಕ ಪ್ರಶಸ್ತಿಯನ್ನು ಪಬ್ಲಿಕ್ ಟಿವಿ ಸುದ್ದಿ ನಿರೂಪಕ ಅರುಣ್ ಸಿ. ಬಡಿಗೇರ್ ಅವರಿಗೆ ಪ್ರದಾನ ಮಾಡಲಾಯಿತು.
ನಾಟಕ ಕೃತಿ ಲೋಕಾರ್ಪಣೆ:ಹಿರಿಯ ಪತ್ರಕರ್ತ ಬಸವರಾಜ ಬಿನ್ನಾಳ ಬರೆದ ‘ದೊಡ್ಮನೆ ದೇವರು’ ನಾಟಕದ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಬಳಿಕ ಕೃಷಿ ಹಿರೇಗೌಡರ್ ಭರತನಾಟ್ಯ ಪ್ರದರ್ಶನ ಮಾಡಿದರು.
ವಾರ್ತಾಧಿಕಾರಿ ಡಾ. ಜಿ. ಸುರೇಶ, ವನ್ಯಜೀವಿ ಛಾಯಾಗ್ರಾಹಕ ಕೃಪಾಕರ, ಸೇನಾನಿ ಇದ್ದರು.ಪತ್ರಕರ್ತರಿಗೆ ಸನ್ಮಾನ:ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಾದ ಬಸವರಾಜ ಕರುಗಲ್, ಸಂತೋಷ ದೇಶಪಾಂಡೆ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಮಾಧ್ಯಮ ಅಕಾಡೆಮಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕ್ಲಬ್‌ನ ಗೌರವಾಧ್ಯಕ್ಷ ಪ್ರಕಾಶ ಕಂದಕೂರ, ತೃತೀಯ ಬಹುಮಾನ ಪಡೆದ ಭರತ್ ಕಂದಕೂರ, ಸಮಾಧಾನಕರ ಬಹುಮಾನ ಪಡೆದ ಕನ್ನಡಪ್ರಭದ ಹಿರಿಯ ಛಾಯಾಗ್ರಾಹಕ ನಾಭಿರಾಜ ದಸ್ತೇನವರ ಮತ್ತು ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗೆ ಭಾಜನರಾದ ವರದಿಗಾರ ಪ್ರಮೋದ ಕುಲಕರ್ಣಿ ಹಾಗೂ ಪತ್ರಿಕೆ ವಿತರಕರಾಗಿ ಸೇವೆ ಸಲ್ಲಿಸುತ್ತಿರುವ ಮೆಹಬೂಬ್ ಮನಿಯಾರ್ ಅವರನ್ನು ಸನ್ಮಾನಿಸಲಾಯಿತು. ಸದ್ಯ ಪತ್ರಿಕೋದ್ಯಮ ಹೊರಗಡೆ ಕಲರ್ ಫುಲ್ ಆಗಿ ಕಾಣುತ್ತಿದೆಯೇ ಹೊರತು ಒಳಗಡೆ ಐಸಿಯುನಲ್ಲಿದೆ. ನಾನು ಪತ್ರಿಕೋದ್ಯಮಕ್ಕೆ ಸೇರುವಾಗ ಇದ್ದ ಮೌಲ್ಯವು ಇಂದಿಲ್ಲ. ಪತ್ರಿಕೋದ್ಯಮಕ್ಕೆ ಬಂದರೆ ಒಂದೇ ಕೆಲಸಕ್ಕೆ ಸೀಮಿತವಿಲ್ಲ. ಎರಡ್ಮೂರು ವಿಭಾಗಗಳಲ್ಲಿ ಕೆಲಸ ಮಾಡಬೇಕು. ಪ್ರತಿಭೆ ಇದ್ದರೆ ಮಾಧ್ಯಮಕ್ಕೆ ಏಕೆ ಬರಬೇಕು? ಡಿಜಿಟಲ್ ಮಾಧ್ಯಮ, ಸಾಮಾಜಿಕ ಜಾಲತಾಣ ಅವಕಾಶ ಸೃಷ್ಟಿಸಿಕೊಳ್ಳಿ.
ಅರುಣ್ ಸಿ. ಬಡಿಗೇರ ನಿರೂಪಕಸಮಾಜ ಕ್ರಮಬದ್ಧವಾಗಿ ಬದುಕಲು ಪತ್ರಿಕೋದ್ಯಮ ಕೊಡುಗೆ ಅಪಾರವಾಗಿದೆ. ಮಂಗಳೂರು ಸಮಾಚಾರದಲ್ಲಿ ಕನಕದಾಸರು ಸೇರಿದಂತೆ ಮಹನೀಯರ ಕೀರ್ತನೆಗಳು ಪ್ರಕಟವಾಗುತ್ತಿದ್ದವು. ವಿದೇಶಿಗರು ಕನ್ನಡಕ್ಕೆ ಆದ್ಯತೆ ನೀಡಿದ್ದು ಎಲ್ಲರೂ ಕನ್ನಡಲ್ಲೇ ಮಾತನಾಡಬೇಕು ಹಾಗೂ ವ್ಯವಹರಿಸಬೇಕು.ಫಾದರ್ ಜಬಮಲೈ, ಎಸ್ಎಫ್ಎಸ್ ಶಾಲೆಯ ಪ್ರಾಚಾರ್ಯ