ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ರಂಗಕರ್ಮಿ ಪ್ರಶಸ್ತಿ ದೊರೆತಿರುವುದು ಸ್ವಾಗತಾರ್ಹ. ತಗಡೂರು ಒಬ್ಬ ಸ್ನೇಹತ್ವ, ಸಮನ್ವಯತೆಯುಳ್ಳ ಜೀವಿ. ಬೇಲೂರು ತಾಲೂಕು ಪತ್ರಕರ್ತರ ಸಂಘ ಕ್ಷೇಮಾಭಿವೃದ್ಧಿ ನಿಧಿಯಲ್ಲಿ ಪತ್ರಕರ್ತನೋರ್ವ ಮೃತಪಟ್ಟ ಕುಟುಂಬಕ್ಕೆ ೨೫ ಸಾವಿರ ರು. ಕೊಡುವ ಹಾಗೂ ಅನಾರೋಗ್ಯಗೊಂಡವರಿಗೆ ನೆರವು ಒದಗಿಸುವ ಅದ್ಯಕ್ಷ ಬಿ. ಬಿ ಶಿವರಾಜ್ ಹಾಗೂ ತಂಡದವರ ಅಲೋಚನೆ ಉತ್ತಮ ನಡೆಯಾಗಿದ್ದು ಎಲ್ಲಾ ತಾಲೂಕುಗಳಲ್ಲಿ ಇದು ವಿಸ್ತರಣೆಯಾಗಬೇಕೆಂದರು.
ಕನ್ನಡಪ್ರಭ ವಾರ್ತೆ ಬೇಲೂರು ಪತ್ರಕರ್ತರು ವಸ್ತುನಿಷ್ಠ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ದಿಟ್ಟತನದಿಂದ ಸವಾಲುಗಳನ್ನು ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ. ವಿ. ಮಲ್ಲಿಕಾರ್ಜುನಯ್ಯ ಹೇಳಿದರು.ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರಿಗೆ ರಾಜ್ಯ ಸರಕಾರದ ನಾಟಕ ಅಕಾಡೆಮಿಯ ರಂಗಕರ್ಮಿ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಏರ್ಪಡಿಸಿದ್ದ ಅಭಿನಂದನ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುದ್ದಿ ಬರೆಯುವಾಗ ಸ್ನೇಹಿತ, ಶತ್ರು ಎಂದು ತಾರತಮ್ಯ ಮಾಡದೇ ನೇರ ದಿಟ್ಟ ನಿರಂತರವಾಗಿ ಸುದ್ದಿ ಮಾಡಬೇಕು. ಇಪ್ಪತ್ತು ವರ್ಷಗಳ ಹಿಂದೆ ತಾವು ಅಧ್ಯಕ್ಷರಾಗಿದ್ದಾಗ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ನೀಡಲು ಸರ್ಕಾರಕ್ಕೆ ಮನವಿ ಮಾಡಿದ್ದೆ. ಆದರೆ ಈಗ ಅದು ಕಾರ್ಯಗತವಾಗಿದೆ. ಬೇಲೂರು ಸಂಘದ ತೊ. ಚ. ಅನಂತಸುಬ್ಬರಾಯ ಹಾಗೂ ಇತರರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು. ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ರಂಗಕರ್ಮಿ ಪ್ರಶಸ್ತಿ ದೊರೆತಿರುವುದು ಸ್ವಾಗತಾರ್ಹ. ತಗಡೂರು ಒಬ್ಬ ಸ್ನೇಹತ್ವ, ಸಮನ್ವಯತೆಯುಳ್ಳ ಜೀವಿ. ಬೇಲೂರು ತಾಲೂಕು ಪತ್ರಕರ್ತರ ಸಂಘ ಕ್ಷೇಮಾಭಿವೃದ್ಧಿ ನಿಧಿಯಲ್ಲಿ ಪತ್ರಕರ್ತನೋರ್ವ ಮೃತಪಟ್ಟ ಕುಟುಂಬಕ್ಕೆ ೨೫ ಸಾವಿರ ರು. ಕೊಡುವ ಹಾಗೂ ಅನಾರೋಗ್ಯಗೊಂಡವರಿಗೆ ನೆರವು ಒದಗಿಸುವ ಅದ್ಯಕ್ಷ ಬಿ. ಬಿ ಶಿವರಾಜ್ ಹಾಗೂ ತಂಡದವರ ಅಲೋಚನೆ ಉತ್ತಮ ನಡೆಯಾಗಿದ್ದು ಎಲ್ಲಾ ತಾಲೂಕುಗಳಲ್ಲಿ ಇದು ವಿಸ್ತರಣೆಯಾಗಬೇಕೆಂದರು.ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಪತ್ರಕರ್ತರು ತಮ್ಮ ವೃತ್ತಿಪರತೆ, ಗುಣ, ವ್ಯಕ್ತಿತ್ವ, ಬರವಣಿಗೆಯಲ್ಲಿ ಗುರುತಿಸಿಕೊಳ್ಳಬೇಕು. ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ಕೊಡಿಸುವ ಕೆಲದಲ್ಲಿ ಸಂಘ ನಿರತವಾಗಿದ್ದು ಇದರಿಂದ ಪ್ರತಿಯೊಬ್ಬ ಪತ್ರಕರ್ತನಿಗೆ ೫ ಲಕ್ಷ ರು. ಆರೋಗ್ಯ ವಿಮೆ ಅನುಕೂಲ ಆಗಲಿದೆ. ನಿವೃತ್ತಿವೇತನ ವಿಚಾರದಲ್ಲಿ ನಿಯಮ ಸಡಿಲಿಕೆ ಚರ್ಚೆಯಲ್ಲಿದ್ದು ಸಂಘ ಸಂಘಟನೆಯಲ್ಲಿ ಬಲವಾಗಿದ್ದರೆ ಎಲ್ಲವೂ ಆಗಲಿದೆ. ಯಾರೇ ಆಗಲಿ ಸಣ್ಣಪುಟ್ಟ ವೈಮನಸ್ಸು ಬಂದಾಗ ಸಂಘದೊಳಗೆ ಬೀದಿ ರಂಪ ಮಾಡದೇ ಒಳಗೆ ಪರಿಹರಿಸಿಕೊಳ್ಳಬೇಕು ಎಂದರು.ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್. ಬಿ. ಮದನಗೌಡ ಮಾತನಾಡಿ, ರಾಜ್ಯ ಸಂಘ ಭದ್ರವಾಗಿ ನಿಂತಿದ್ದರೆ ಅದಕ್ಕೆ ತಳಪಾಯ. ಹಾಕಿದ ಮಲ್ಲಿಕಾರ್ಜುನಯ್ಯ ಅವರ ಕೊಡುಗೆ ಅಪಾರ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು, ಸಂಘದ ಚಟುವಟಿಕೆಯೊಂದಿಗೆ ತಮ್ಮದೇ ಆದ ರಂಗಸಿರಿ ತಂಡ ಕಟ್ಟಿಕೊಂಡು, ರಂಗಭೂಮಿ ನಟರಾಗಿ, ಸಾಕ್ಷರತೆ ಯೋಜನೆ, ಬಾಗೂರು ನವಿಲೆ ಹೋರಾಟ ಇತ್ಯಾದಿಗಳೊಂದಿಗೆ ತಮ್ಮದೇ ಬದುಕು ಕಟ್ಟಿಕೊಂಡಿದ್ದಾರೆಂದರೆಂದ ಅವರು, ರಂಗಕರ್ಮಿ ಪ್ರಶಸ್ತಿ ದೊರೆತಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.ತಾಲೂಕು ಅಧ್ಯಕ್ಷ ಬಿ. ಬಿ. ಶಿವರಾಜ್ ಮಾತನಾಡಿ, ಬೇಲೂರು ತಾಲೂಕು ಪತ್ರಕರ್ತರ ಸಂಘದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಸ್ಥೆ ಆರಂಭಿಸಿದ್ದ ಧಾನಿಗಳ ಕೊಡುಗೆಯಿಂದ ೧೦.೩೦ ಲಕ್ಷ ರು. ಕ್ರೂಢೀಕರಿಸಲಾಗಿದೆ. ಈ ಹಣವನ್ನು ಠೇವಣಿ ಇಟ್ಟು ಈ ಹಣದಿಂದ ಬಂದ ಬಡ್ಡಿಯಲ್ಲಿ ಪತ್ರಕರ್ತರಿಗೆ ತುರ್ತು ಆರೋಗ್ಯ ಸಂದರ್ಭ ನೆರವು ನೀಡಲಾಗುವುದು ಎಂದರು. ಶಿವಾನಂದ ತಗಡೂರು ಅವರು ಸಂಘದ ಪರವಾಗಿ ಹಲವಾರು ಕೇಸುಗಳನ್ನು ಹಾಕಿಸಿಕೊಂಡರು ಎದೆಗುಂದದೆ ಮುನ್ನಡೆಯುತ್ತಿದ್ದಾರೆ ಎಂದರು.
ಈ ಸಂದರ್ಭ ರಾಜ್ಯ ಸಂಘದ ಕಾರ್ಯದರ್ಶಿ ಲೋಕೇಶ್, ನಿರ್ದೇಶಕ ದೇವರಾಜು, ಜಿಲ್ಲಾ ನಿರ್ದೇಶಕ ಮಲ್ಲೇಶ್, ತಾಲೂಕು ಕಾರ್ಯದರ್ಶಿ ಬಿ. ಎಲ್. ಲಕ್ಷ್ಮಣ್, ಹಿರಿಯ ಪತ್ರಕರ್ತರಾದ ಅನಂತರಾಜೇ ಅರಸು, ಬಿ. ಎನ್. ತಾರಾನಾಥ್, ರಾಘವೇಂದ್ರ ಹೊಳ್ಳ, ಭಾರತಿ ಗೌಡ, ಹಾಲಪ್ಪ, ಪೈಂಟ್ ರವಿ, ಮಹೇಶ್ ಮಾತನಾಡಿದರು.