ಕಾಪು ಕ್ಷೇತ್ರದಲ್ಲಿ ಜೆಪಿ ಹೆಗ್ಡೆ ಬಿರುಸಿನ ಮತಯಾತನೆ

| Published : Apr 19 2024, 01:02 AM IST

ಸಾರಾಂಶ

ಮೊದಲಿಗೆ ಕುಕ್ಕೆಹಳ್ಳಿಯ ಓಝೋನ್ ಕ್ಯಾಷ್ಯು ಇಂಡಸ್ಟ್ರಿ, ನಂತರ ಹಿರಿಯಡ್ಕದ ಮಹಾಲಸಾ ಎಕ್ಸ್‌ಪೋರ್ಟ್, ಮೆಸ್ಸಿಲಿ ಇಂಡಿಯಾ ಪ್ಯಾಕರ್ಸ್, ಹರಿಖಂಡಿಗೆಯ ಶಂಕರ್ ಕ್ಯಾಷ್ಯು ಇಂಡಸ್ಟ್ರಿ, ಅನ್ನಪೂರ್ಣ ಇಂಡಸ್ಟ್ರಿ, ಪೆರ್ಡೂರಿನ ಬುಕ್ಕಿಗುಡ್ಡೆಯ ಸಿಂಧೂ ಕ್ಯಾಷ್ಯು ಇಂಡಸ್ಟ್ರಿಗಳಿಗೆ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರು ಗುರುವಾರ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಮತಯಾಚನೆ ನಡೆಸಿದರು. ಕ್ಷೇತ್ರದ ಮುಖ್ಯ ಉದ್ಯಮಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದ ಹೆಗ್ಡೆ, ತಾನು ಸಂಸದನಾದರೆ ಈ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.

ಮೊದಲಿಗೆ ಕುಕ್ಕೆಹಳ್ಳಿಯ ಓಝೋನ್ ಕ್ಯಾಷ್ಯು ಇಂಡಸ್ಟ್ರಿ, ನಂತರ ಹಿರಿಯಡ್ಕದ ಮಹಾಲಸಾ ಎಕ್ಸ್‌ಪೋರ್ಟ್, ಮೆಸ್ಸಿಲಿ ಇಂಡಿಯಾ ಪ್ಯಾಕರ್ಸ್, ಹರಿಖಂಡಿಗೆಯ ಶಂಕರ್ ಕ್ಯಾಷ್ಯು ಇಂಡಸ್ಟ್ರಿ, ಅನ್ನಪೂರ್ಣ ಇಂಡಸ್ಟ್ರಿ, ಪೆರ್ಡೂರಿನ ಬುಕ್ಕಿಗುಡ್ಡೆಯ ಸಿಂಧೂ ಕ್ಯಾಷ್ಯು ಇಂಡಸ್ಟ್ರಿಗಳಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಲಾಭ ಪಡೆದಿರುವ ಅಲ್ಲಿನ ಮಹಿಳಾ ಉದ್ಯೋಗಿಗಳು ಹೆಗ್ಡೆ ಅವರಿಗೆ ಮತ ನೀಡುವಂತೆ, ಮುಂದೆ ಕಾಂಗ್ರೆಸ್ ಪಕ್ಷದಿಂದ ಇನ್ನಷ್ಟು ಗ್ಯಾರಂಟಿಗಳ ಲಾಭ ಪಡೆಯುವಂತೆ ಮನವಿ ಮಾಡಿದರು.

ನಡುವೆ ಹರಿಖಂಡಿಗೆಯ ಶ್ರೀ ವೆಂಕಟರಮಣ ದೇವಸ್ಥಾನ, ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನ, ಕುಕ್ಕೆಹಳ್ಳಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಕಟಪಾಡಿಯ ಪೇಟೆಬೆಟ್ಟಿನ ಕೊಗರಜ್ಜ ಸನ್ನಿಧಿ, ಕೋಟೆ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎಂ.ಎ. ಗಫೂರ್, ಜಿ.ಪಂ. ಮಾಜಿ ಅಧ್ಯಕ್ಷೆ ಸರಸು ಬಂಗೇರ, ಪಕ್ಷದ ನಾಯಕರಾದ ಸಂತೋಷ್ ಪಕ್ಕಾಲು, ನವೀನ್ ಚಂದ್ರ ಸುವರ್ಣ ಮತ್ತಿತತರಿದ್ದರು.