ವಿಜಯಪುರ ನಗರಕ್ಕೆ ಬಿಜೆಪಿಯವರ ಆಹ್ವಾನದ ಮೇರೆಗೆ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್‌ ಭೇಟಿ : ರಾಜಕೀಯ ದೊಂಬರಾಟ

| Published : Nov 08 2024, 12:38 AM IST / Updated: Nov 08 2024, 10:00 AM IST

 Waqf Property
ವಿಜಯಪುರ ನಗರಕ್ಕೆ ಬಿಜೆಪಿಯವರ ಆಹ್ವಾನದ ಮೇರೆಗೆ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್‌ ಭೇಟಿ : ರಾಜಕೀಯ ದೊಂಬರಾಟ
Share this Article
  • FB
  • TW
  • Linkdin
  • Email

ಸಾರಾಂಶ

  ಬಿಜೆಪಿಯವರ ಆಹ್ವಾನದ ಮೇರೆಗೆ ಯಾವುದೇ ಜೆಪಿಸಿ ಸಮಿತಿ ಸದಸ್ಯರಿಲ್ಲದೆ ಆಗಮಿಸಿರುವ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್‌ ಭೇಟಿ ಕೇಂದ್ರ ಬಿಜೆಪಿಯವರ ವಕ್ಫ್‌ ವಿರುದ್ಧದ ಪೂರ್ವನಿಯೋಯೋಜಿತ ರಾಜಕೀಯ ದೊಂಬರಾಟ ಎಂದು ಕೆಪಿಸಿಸಿ ವೈದ್ಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ರವಿಕುಮಾರ ಬಿರಾದಾರ ಟೀಕಿಸಿದ್ದಾರೆ.

ವಿಜಯಪುರ:  ವಿಜಯಪುರ ನಗರಕ್ಕೆ ಬಿಜೆಪಿಯವರ ಆಹ್ವಾನದ ಮೇರೆಗೆ ಯಾವುದೇ ಜೆಪಿಸಿ ಸಮಿತಿ ಸದಸ್ಯರಿಲ್ಲದೆ ಆಗಮಿಸಿರುವ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್‌ ಭೇಟಿ ಕೇಂದ್ರ ಬಿಜೆಪಿಯವರ ವಕ್ಫ್‌ ವಿರುದ್ಧದ ಪೂರ್ವನಿಯೋಯೋಜಿತ ರಾಜಕೀಯ ದೊಂಬರಾಟ ಎಂದು ಕೆಪಿಸಿಸಿ ವೈದ್ಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ರವಿಕುಮಾರ ಬಿರಾದಾರ ಟೀಕಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲರ ಪ್ರಾಮಾಣಿಕ ಪ್ರಯತ್ನದಿಂದಾಗಿ ರೈತರಿಗೆ ನ್ಯಾಯವಾಗಿರುವುದನ್ನು ಮನಗಂಡು ರಾಜ್ಯ ರೈತಸಂಘ ತಮ್ಮ ಹೋರಾಟವನ್ನು ಹಿಂತೆಗುದುಕೊಂಡಿದೆ. ಆದರೆ ಆರ್.ಎಸ್.ಎಸ್ ಅಂಗ ಸಂಸ್ಥೆಯಾದ ಭಾರತೀಯ ಕಿಸಾನ್ ಸಂಘ ಕೇಂದ್ರ ಬಿಜೆಪಿ ಅಣತಿಯಂತೆ ಕಾರ್ಯನಿರ್ವಹಿಸುತ್ತಿವೆ. ಬಿಜೆಪಿಯವರು ಕೇಂದ್ರದಲ್ಲಿ ತರಬೇಕೆಂದಿರುವ ವಕ್ಫ್‌ ತಿದ್ದುಪಡಿಗಾಗಿ ಬಿಜೆಪಿಯ ಅಂಗ ಸಂಸ್ಥೆಗಳು ರೈತರಲ್ಲಿ ಜನಸಾಮಾನ್ಯರಲ್ಲಿ ಗೊಂದಲ ಮೂಡಿಸುತ್ತಿವೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ವಕ್ಫ ರಕ್ಷಣೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ ಹೇಳುತ್ತಾರೆ.

ಕೇಂದ್ರ ಬಿಜೆಪಿ 2024 ರ ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ವಕ್ಫ್‌ ರಕ್ಷಣೆಗೆ ಒತ್ತು ಕೊಡುವುದಾಗಿ ಹೇಳಿತ್ತು. ಅಲ್ಲದೇ ಬಿಜೆಪಿ ಜೆಡಿಎಸ್ ಸರ್ಕಾರಗಳು ತಮ್ಮ ಅಧಿಕಾರಾವಧಿಯಲ್ಲಿ ಸಾಕಷ್ಟು ಪಹಣಿಗಳನ್ನು ವಕ್ಫ್‌ ಹೆಸರಿನಲ್ಲಿ ಮಾಡಿರುವ ಉದಾಹರಣೆಗಳಿವೆ. ಆದರೆ ಕೇವಲ ಚುನಾವಣೆಗೋಸ್ಕರ ಈಗ ತಮ್ಮ ನಿಲುವುಗಳನ್ನು ಬದಲಿಸಿ ವಕ್ಫ್‌ ರದ್ದು ಮಾಡಬೇಕೆಂದು ಹೋರಾಟ ಮಾಡುತ್ತಿರುವ ಬಿಜೆಪಿಗರು ಎರಡು ನಾಲಿಗೆಯುಳ್ಳವರಾಗಿದ್ದಾರೆ. ಎಲ್ಲಾ ಬಿಜೆಪಿ ಪ್ರಾಯೋಜಿತ ಹೋರಾಟ, ಬಿಜೆಪಿ ಪ್ರಾಯೋಜಿತ ಜೆಪಿಸಿ, ಅಲ್ಲದೇ ಜೆಪಿಸಿ ಮುಖ್ಯಸ್ಥರು ಕರ್ನಾಟಕಕ್ಕೆ ಕಾಲಿಡುತ್ತಲೇ ಇನ್ನೂ ಯಾವುದೇ ಪರಿಶೀಲನೆ ಮಾಡದೇ ವಕ್ಫ್‌ ವಿಷಯವಾಗಿ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವುದನ್ನು ನೋಡಿದರೆ ಇದು ಸಂಪೂರ್ಣ ರಾಜಕೀಯ ಭೇಟಿ. ವಕ್ಫ್‌ ಅಸ್ತಿ ವಿಷಯವಾಗಿ ಬಿಜೆಪಿಗರು ಸುಳ್ಳು ಹೇಳಿ ಕೋಮು ಸೌಹಾರ್ದತೆಯನ್ನು ಕೆಡಿಸುವುದನ್ನು ಬಿಟ್ಟು 1913ರಿಂದ ಇಲ್ಲಿಯವರೆಗೆ ವಕ್ಫ್‌ ಆಸ್ತಿಯ ಮೂಲವನ್ನು ದಾಖಲೆ ಮೂಲಕ ಬಹಿರಂಗಪಡಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.