₹396.90 ಕೋಟಿ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ

| Published : Aug 07 2024, 01:11 AM IST

ಸಾರಾಂಶ

ಪ್ರಸಕ್ತ 2024-25ನೇ ಸಾಲಿನ ಜಿಲ್ಲಾ ಪಂಚಾಯತಿಯ ವಿವಿಧ ಕಾರ್ಯಕ್ರಮಗಳ ಒಟ್ಟು ₹396.90 ಕೋಟಿ ವಾರ್ಷಿಕ ಕ್ರಿಯಾ ಯೋಜನೆಗೆ ಜಿಪಂ ಆಡಳಿತಾಧಿಕಾರಿ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮದ್ ಮೊಹಸಿನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಸಕ್ತ 2024-25ನೇ ಸಾಲಿನ ಜಿಲ್ಲಾ ಪಂಚಾಯತಿಯ ವಿವಿಧ ಕಾರ್ಯಕ್ರಮಗಳ ಒಟ್ಟು ₹396.90 ಕೋಟಿ ವಾರ್ಷಿಕ ಕ್ರಿಯಾ ಯೋಜನೆಗೆ ಜಿಪಂ ಆಡಳಿತಾಧಿಕಾರಿ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮದ್ ಮೊಹಸಿನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಸಕ್ತ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಇಲಾಖಾವಾರು ಫಲಾನುಭವಿಗಳಿಗೆ ₹8.51 ಕೋಟಿ, ವೇತನಕ್ಕೆ ₹142.19 ಕೋಟಿ, ಕಾಮಗಾರಿಗಳಿಗೆ ₹9.60 ಕೋಟಿ ಹಾಗೂ ಇತರೆ ಕಾರ್ಯಕ್ರಮಗಳಿಗೆ ₹236.59 ಕೋಟಿ ಸೇರಿ ಒಟ್ಟು ₹396.90 ಕೋಟಿ ಅನುದಾನ ನಿಗದಿಪಡಿಸಿ ಅನುಮೋದನೆ ನೀಡಲಾಯಿತು. ಕೆಲವು ಕ್ರಿಯಾ ಯೋಜನೆಗಳಿಗೆ ಅನುಮೋದನೆಗೊಂಡ ಅನುದಾನದಲ್ಲಿಯೇ ಬದಲಾವಣೆ ಮಾಡಿಕೊಳ್ಳಲು ಸೂಚಿಸಲಾಯಿತು.

ಪಂಚಾಯತ್ ರಾಜ್ ಇಲಾಖೆಗೆ ₹5.46 ಕೋಟಿ, ಸಾರ್ವಜನಿಕ ಶಿಕ್ಷಣ ಇಲಾಖೆಗೆ ₹150.69 ಕೋಟಿ, ವಯಸ್ಕರ ಶಿಕ್ಷಣಕ್ಕೆ ₹48.20 ಲಕ್ಷ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ₹1.34 ಕೋಟಿ, ವೈದ್ಯಕೀಯ ಮತ್ತು ಜನಾರೋಗ್ಯ ಸೇವೆಗಳಿಗೆ ₹66.72 ಕೋಟಿ, ಕುಟುಂಬ ಕಲ್ಯಾಣ ಕಾರ್ಯಕ್ರಮಗಳಿಗೆ ₹24.78 ಕೋಟಿ, ಆಯುಷ್‌ ಇಲಾಖೆಗೆ ₹5.21 ಕೋಟಿ ಅನುದಾನ ನಿಗದಿಪಡಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆಗೆ ₹21.65 ಕೋಟಿ, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ₹68.55 ಕೋಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಗೆ ₹2.48 ಕೋಟಿ, ತೋಟಗಾರಿಕೆಗೆ ₹7.02 ಕೋಟಿ, ಕೃಷಿ ಇಲಾಖೆಗೆ ₹1.43 ಕೋಟಿ, ಭೂಸಾರ ಮತ್ತು ಜಲಸಂರಕ್ಷಣೆಗೆ ₹2.04 ಕೋಟಿ, ಪಶು ಸಂಗೋಪನೆಗೆ ₹ 4.31 ಕೋಟಿ, ಮೀನುಗಾರಿಕೆಗೆ ₹1.17 ಕೋಟಿ, ಅರಣ್ಯ ಮತ್ತು ವನ್ಯಜೀವನಕ್ಕೆ ₹ 9.86 ಕೋಟಿ, ಸಹಕಾರ ಇಲಾಖೆಗೆ ₹ 4.12 ಲಕ್ಷ, ಇತರೆ ಗ್ರಾಮೀಣಾಭಿವೃದ್ದಿ ಕಾರ್ಯಕ್ರಮಗಳಿಗೆ ₹ 7.03 ಕೋಟಿ ನಿಗದಿಪಡಿಸಲಾಗಿದೆ.

ಸಣ್ಣ ನೀರಾವರಿ ₹ 41.20 ಲಕ್ಷ, ರೇಷ್ಮೆ ಇಲಾಖೆಗೆ ₹ 4.54 ಕೋಟಿ, ಗ್ರಾಮೀಣ ಮತ್ತು ಸಣ್ಣ ಉದ್ಯಮಗಳಿಗೆ ₹ 82.46 ಲಕ್ಷ, ಕೈಮಗ್ಗ ಮತ್ತು ಜವಳಿಗೆ ₹ 89.33 ಲಕ್ಷ, ಸಚಿವಾಲಯದ ಆರ್ಥಿಕ ಸೇವೆಗಳು ಜಿಲ್ಲಾ ಯೋಜನಾ ಘಟಕಕ್ಕೆ ₹ 69.33 ಲಕ್ಷ, ಕೃಷಿ ಮಾರಾಟ (ಇತರೆ ಸಾಮಾನ್ಯ ಆರ್ಥಿಕ ಸೇವೆಗಳು) ₹ 16 ಲಕ್ಷ ಹಾಗೂ ರಸ್ತೆ ಮತ್ತು ಸೇತುವೆಗೆ ₹ 2.60 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಯಿತು.

ಸಭೆಯಲ್ಲಿ ಉಸ್ತುವಾರಿ ಕಾರ್ಯದರ್ಶಿಗಳು ಕ್ರಿಯಾ ಯೋಜನೆಗೆ ಅನುಮೋದನೆ ಕೊಡುವ ಪೂರ್ವದಲ್ಲಿ ನಿಗದಿಪಡಿಸಿದ ವಿವಿಧ ಇಲಾಖೆಗಳಿಗೆ ನಿಗದಿಪಡಿಸಿದ ಅನುದಾನದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು. ಈ ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಪಂ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಯುಕೆಪಿ ಮಹಾವ್ಯವಸ್ಥಾಪಕ ಘಿಟ್ಟೆ ಮಾದವರಾವ್, ಜಿಪಂ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಮುಖ್ಯ ಯೋಜನಾಧಿಕಾರಿ ಪುನಿತ್, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮ ಉಕ್ಕಲಿ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.