ಜೆಎಸ್ಎಸ್‌ ಕಾಲೇಜಿನಲ್ಲಿ ಉದ್ಯೋಗ ಮೇಳ

| Published : Aug 20 2025, 01:30 AM IST

ಸಾರಾಂಶ

ಸುಮಾರು 15 ವಿವಿಧ ಕಂಪನಿಗಳು ಭಾಗವಹಿಸಿದ್ದ ಉದ್ಯೋಗ ಮೇಳದಲ್ಲಿ ಕಾಲೇಜಿನ ಸುಮಾರು 183 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡರು

ಕನ್ನಡಪ್ರಭ ವಾರ್ತೆ ನಂಜನಗೂಡು

ಪಟ್ಟಣದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಉದ್ಯೋಗ ಮತ್ತು ಮಾಹಿತಿ ಕೇಂದ್ರ, ಆಂತರಿಕ ಗುಣಮಟ್ಟ ಭರವಸೆ ಘಟಕದ ವತಿಯಿಂದ ಬೆಂಗಳೂರಿನ ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಹಯೋಗದಲ್ಲಿ ಕಾಲೇಜಿನ ಪದವೀಧರ ವಿದ್ಯಾರ್ಥಿಗಳಿಗಾಗಿ ಉದ್ಯೋಗ ಮೇಳ ಆಯೋಜಿಸಿತ್ತು.

ಸುಮಾರು 15 ವಿವಿಧ ಕಂಪನಿಗಳು ಭಾಗವಹಿಸಿದ್ದ ಉದ್ಯೋಗ ಮೇಳದಲ್ಲಿ ಕಾಲೇಜಿನ ಸುಮಾರು 183 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡರು. ಸಮರ್ಥನಂ ಅಂಗವಿಕರ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಎಸ್‌. ಸುಭಾಷ್‌ ಚಂದ್ರ ಭಾಗವಹಿಸಿದ್ದ ವಿವಿಧ ಕಂಪನಿಗಳ ಸ್ವರೂಪ, ಉದ್ಯೋಗಾವಕಾಶ ಹಾಗೂ ವೇತನ ಕುರಿತಂತೆ ಉದ್ಯೋಗ ಅರಸಿ ಬಂದಿದ್ದ ಎಲ್ಲ ಉದ್ಯೋಗಾಕಾಂಕ್ಷಿಗಳಿಗೆ ವಿಸ್ತತವಾದ ಮಾಹಿತಿಯನ್ನು ನೀಡಿದರು. ವಿವಿಧ ಕಂಪನಿಗಳು ಆಯೋಜಿಸಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿದ್ದರ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್. ಹೊನ್ನೇಗೌಡ ಮಾತನಾಡಿ, ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಪದವಿ ನಂತರದಲ್ಲಿ ವಿಶೇಷವಾಗಿ ವಿಜ್ಞಾನ ಮತ್ತು ತಾಂತ್ರಿಕ ಯುಗದಲ್ಲಿ ಉದ್ಯೋಗಾವಕಾಶಗಳನ್ನು ಬಳಸಿಕೊಂಡು ಸ್ವಾಭಿಮಾನದ ಪ್ರಜೆಗಳಾಗಿ ಬದುಕು ಸಾಗಿಸಬೇಕೆಂದು ಬಯಸುತ್ತಾ ಪದವಿ ಪಡೆಯುವುದು ಸುಲಭ ಹಾಗೆಯೇ ಉದ್ಯೋಗ ಪಡೆದುಕೊಳ್ಳುವುದೂ ಸುಲಭ ಆದರೆ ಪಡೆದ ಉದ್ಯೋಗವನ್ನು ಉಳಿಸಿಕೊಳ್ಳಬೇಕಾದರೆ ವಿನಮ್ರತೆ, ಉದ್ಯೋಗಪರ ಆಸಕ್ತಿ, ಉದ್ಯೋಗದ ಬಗ್ಗೆ ಪ್ರೀತಿ ಮತ್ತು ಗೌರವದಿಂದ ಸೇವೆ ಸಲ್ಲಿಸಿದಾಗ ಪ್ರತಿಷ್ಠಿತ ಕಾಲೇಜಿನಲ್ಲಿ ನಡೆದ ಉದ್ಯೋಗ ಮೇಳ ಸಾರ್ಥಕವಾಗುತ್ತದೆ ಎಂದು ಶುಭ ಕೋರಿದರು.

ಉದ್ಯೋಗ ಮತ್ತು ಮಾಗದರ್ಶನ ಘಟಕದ ಸಂಚಾಲಕಿ ಎಂ.ಎಸ್. ದೀಪಾಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಕಾಲಕಾಲಕ್ಕೆ ನಡೆಯುವ ಉದ್ಯೋಗ ಮೇಳಗಳಲ್ಲಿ ಭಾಗವಹಿಸಿ ಉದ್ಯೋಗಿಗಳಾಗಲಿ ಎಂದು ಆಶಿಸಿದರು.

ಸಮರ್ಥನಂ ಅಂಗವಿಕಲರ ಸಂಸ್ಥೆಯ ಮೈಸೂರು ವಿಭಾಗೀಯ ಮುಖ್ಯಸ್ಥರಾದ ಶಿವರಾಜು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಶಿವಕುಮಾರ್, ಆಂತರಿಕ ಗುಣಮಟ್ಟ ಭರವಸೆ ಘಟಕದ ಸಂಚಾಲಕ ಡಾ.ಬಿ.ಕೆ. ಕೆಂಡಗಣ್ಣಸ್ವಾಮಿ, ಕಚೇರಿ ಅಧೀಕ್ಷಕ ಕೆ.ವಿ. ಸುಂದರರಾಜು, ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳು ಇದ್ದರು.