ಸಾರಾಂಶ
ಹಿರಿಯ ನಾಗರೀಕರಿಗೆ ಮೂಳೆಗಳ ಆರೋಗ್ಯದ ಬಗ್ಗೆ ಜಾಗೃತಿ, ಮಾಹಿತಿ ಮತ್ತು ಚಿಕಿತ್ಸೆ ನೀಡುವ ಕಾರ್ಯಕ್ರಮವೇ ಆಸ್ಪೀಯೊಪೊರೋಸಿಸ್ದಿನಾಚರಣೆ. ವಯಸ್ಸಾದಂತೆಲ್ಲಾ ಮೂಳೆಗಳು ಸವೆಯುತ್ತಾ ಮುರಿತಕ್ಕೊಳಗಾಗಿ ನಡೆಯಲು ತುಂಬಾ ಕಷ್ಟವಾಗುತ್ತದೆ. ಹಿರಿಯ ನಾಗರಿಕರು ಮನೆಯಲ್ಲಿ ಶೌಚಾಲಯ ಮತ್ತು ಸ್ನಾನದ ಕೊಠಡಿಯನ್ನು ಬಹಳ ಜೋಪಾನವಾಗಿ ಉಪಯೋಗಿಸಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ವೈದ್ಯಕೀಯ ಸಂಶೋಧನೆಗೆ ಜೆಎಸ್ಎಸ್ ಸಂಸ್ಥೆಯು ಅಪಾರ ಕೊಡುಗೆ ನೀಡಿದೆ ಎಂದು ಹಿರಿಯ ವೈದ್ಯ ಮತ್ತು ಹೃದ್ರೋಗ ತಜ್ಞ ಡಾ.ಪ್ರೇಮನಾಥ್ ಹೇಳಿದರು.ನಗರದ ಜೆಎಸ್ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ವೃದ್ಧಾರೋಗ್ಯ, ಮೂಳೆ, ಕೀಲು ಹಾಗೂ ಎಂಡೋಕ್ರೈನಾಲಜಿ ವಿಭಾಗದ ವತಿಯಿಂದ ಆಯೋಜಿಸಿದ್ದ ವಿಶ್ವ ಆಸ್ಪೀಯೊಪೋರೋಸಿಸ್ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಹಿರಿಯ ನಾಗರೀಕರಿಗೆ ಮೂಳೆಗಳ ಆರೋಗ್ಯದ ಬಗ್ಗೆ ಜಾಗೃತಿ, ಮಾಹಿತಿ ಮತ್ತು ಚಿಕಿತ್ಸೆ ನೀಡುವ ಕಾರ್ಯಕ್ರಮವೇ ಆಸ್ಪೀಯೊಪೊರೋಸಿಸ್ದಿನಾಚರಣೆ. ವಯಸ್ಸಾದಂತೆಲ್ಲಾ ಮೂಳೆಗಳು ಸವೆಯುತ್ತಾ ಮುರಿತಕ್ಕೊಳಗಾಗಿ ನಡೆಯಲು ತುಂಬಾ ಕಷ್ಟವಾಗುತ್ತದೆ. ಹಿರಿಯ ನಾಗರಿಕರು ಮನೆಯಲ್ಲಿ ಶೌಚಾಲಯ ಮತ್ತು ಸ್ನಾನದ ಕೊಠಡಿಯನ್ನು ಬಹಳ ಜೋಪಾನವಾಗಿ ಉಪಯೋಗಿಸಬೇಕು ಎಂದರು.ಬಿದ್ದು ಮೂಳೆಗಳು ಮುರಿತಕ್ಕೆ ಒಳಗಾದರೆ ಬೇರೆಯವರನ್ನು ಅವಂಬಿಸಬೇಕಾಗುತ್ತದೆ. ಹಾಗಾಗಿ ಯಾರಿಗೂ ಹೊರೆಯಾಗದಂತೆ ಮುನ್ನೆಚ್ಚರಿಕೆಯಿಂದ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್. ಬಸವನಗೌಡಪ್ಪ ಮಾತನಾಡಿ, ವಿಶ್ವ ಆಸ್ಪೀಯೋಪೊರೋಸಿಸ್ ದಿನಾಚರಣೆಯು ನಮ್ಮ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದರ ಬಗ್ಗೆ ಜಾಗೃತಿ ಮೂಡಿಸುತ್ತದೆ. ವಯಸ್ಸಾದಂತೆಲ್ಲಾ ಮೂಳೆಗಳ ಸವೆತ ಮತ್ತು ಕಾಯಿಲೆಗಳ ಬಗ್ಗೆ ತಿಳಿದುಕೊಂಡು ಅದಕ್ಕೆ ಸೂಕ್ತ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜೆಎಸ್ಎಸ್ಆಸ್ಪತ್ರೆಯು ಹಿರಿಯ ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದೆ. ಸಾರ್ವಜನಿಕರು ಇದರ ಸದುಪಯೋಗಪಡೆಯಬೇಕು ಎಂದು ಅವರು ತಿಳಿಸಿದರು.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ. ಮಧು ಮಾತನಾಡಿ, ಹಿಂದೆ ಜನರು ಅವರ ಮೂಳೆಗಳು ಸವೆಯುತ್ತ ಬಂದರೆ ನಮ್ಮ ಆಯುಷ್ಯ ಮುಗಿಯುತ್ತ ಬಂತು ಎಂದುಕೊಳ್ಳುತ್ತಿದ್ದರು. ಆದರೆ ಇಂದಿನ ವೈದ್ಯಕೀಯ ತಂತ್ರಜ್ಞಾನದಿಂದ ಸಾಕಷ್ಟು ಚಿಕಿತ್ಸೆ ಮತ್ತು ಔಷಧಿಗಳು ಲಭ್ಯವಿದೆ ಎಂದರು.
ಆಸ್ಪತ್ರೆಯ ಉಪ ನಿರ್ದೇಶಕ ಡಾ. ಮಂಜುನಾಥ್, ವೈದ್ಧಾರೋಗ ವಿಭಾಗದ ಮುಖ್ಯಸ್ಥ ಡಾ. ಪ್ರತಿಭಾ ಪರೇರ, ಮೂಳೆ ಮತ್ತು ಕೀಲು ವಿಭಾಗದ ಮುಖ್ಯಸ್ಥ ಡಾ. ಸಿದ್ದಲಿಂಗಮೂರ್ತಿ, ಎಂಡೋಕ್ರೈನಾಲಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ಲಕ್ಷ್ಮೀ ನಾಗೇಂದ್ರ, ಡಾ. ಅಜಯ್ಹನುಮಂತು, ಡಾ. ಕ್ಷಮಾ ಮೊದಲಾದವರು ಇದ್ದರು.