ಜೆಎಸ್ಎಸ್ ಮೈಸೂರು ಅರ್ಬನ್ ಹಾತಲ್ಲಿ ರಾಜ್ಯ ಕೈಮಗ್ಗ ವಸ್ತುಗಳ ಮೆರುಗು

| Published : Nov 16 2024, 12:31 AM IST

ಸಾರಾಂಶ

ಈಗ ಸಾಲು ಸಾಲು ಹಬ್ಬಗಳ ಸಂಭ್ರಮ. ಇಂಥ ಸಂಭ್ರಮಕ್ಕೆ ಸೂರು ಒದಗಿಸಿರುವುದು ಹಲವು ವಿಶಿಷ್ಟತೆಗಳ ಆಗರವಾಗಿರುವ ಹೆಬ್ಬಾಳು ಕೈಗಾರಿಕಾ ಪ್ರದೇಶದ ಜೆಎಸ್ಎಸ್ ಮೈಸೂರು ಅರ್ಬನ್ಹಾತ್. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ವಸ್ತುಗಳು ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ನೇಕಾರರಿಂದ ಸಿಗುತ್ತಿವೆ. ಹಲವು ಆಯ್ಕೆಗಳು ಈ ಬಾರಿಯ ಮೇಳದಲ್ಲಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಈಗ ಸಾಲು ಸಾಲು ಹಬ್ಬಗಳ ಸಂಭ್ರಮ. ಇಂಥ ಸಂಭ್ರಮಕ್ಕೆ ಸೂರು ಒದಗಿಸಿರುವುದು ಹಲವು ವಿಶಿಷ್ಟತೆಗಳ ಆಗರವಾಗಿರುವ ಹೆಬ್ಬಾಳು ಕೈಗಾರಿಕಾ ಪ್ರದೇಶದ ಜೆಎಸ್ಎಸ್ ಮೈಸೂರು ಅರ್ಬನ್ಹಾತ್.

ಈ ಬಾರಿ ಒಂದೇ ಸೂರಿನಡಿ ವಿಶೇಷ ಕೈಮಗ್ಗ ಮೇಳ ನಡೆಯುತ್ತಿದ್ದು, ಗ್ರಾಹಕರಿಗೆ ಹೆಚ್ಚು ಅನುಕೂಲವಾಗಿದೆ. ನವದೆಹಲಿಯ ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಜವಳಿ ಸಚಿವಾಲಯದ ಸಹಯೋಗದೊಂದಿಗೆ ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿದೇರ್ಶಕರು, ಬೆಂಗಳೂರಿನ ಕೈಮಗ್ಗ ಮತ್ತು ಜವಳಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ಮತ್ತು ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನ ಆಶ್ರಯದಲ್ಲಿ ಕೈಮಗ್ಗ ಮೇಳ , ನನ್ನ ಕೈಮಗ್ಗ ನನ್ನ ಹೆಮ್ಮೆ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಆಯೋಜಿಸಿದೆ.

ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ವಸ್ತುಗಳು ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ನೇಕಾರರಿಂದ ಸಿಗುತ್ತಿವೆ. ಹಲವು ಆಯ್ಕೆಗಳು ಈ ಬಾರಿಯ ಮೇಳದಲ್ಲಿವೆ. ವಿಶೇಷ ಕೈಮಗ್ಗ ಮೇಳದಲ್ಲಿ ಜಮ್ಮು-ಕಾಶ್ಮೀರ, ದೆಹಲಿ, ರಾಜಸ್ತಾನ್, ಗುಜರಾತ್, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಹರಿಯಾಣ, ಬಿಹಾರ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಹಾಗೂ ಕರ್ನಾಟಕದ ಕೈಮಗ್ಗ ನೇಕಾರರ ಮಳಿಗೆಗಳು ಮೇಳದ ಆಕರ್ಷಣೆಯಾಗಿದೆ.

ನೇಕಾರ ಸೇವಾಕೇಂದ್ರ ಕೈಮಗ್ಗದ ನೈಗೆ ಪ್ರಾತ್ಯಕ್ಷಿಕೆಯನ್ನು ಮಳಿಗೆಯಲ್ಲಿ ಮಾಡಿ ತೋರಿಸುತ್ತಾರೆ. ಇವರು ಈ ಮೇಳದಲ್ಲಿ ಥೀಮ್ ಪೆವಿಲಿಯನ್ ರಚಿಸಿದ್ದು ಮತ್ತು ಮಗ್ಗದ ಮುಖೇನ ಸಾರಿ ನೈಗೆ ಪ್ರಾತ್ಯಕ್ಷಿಕೆಯನ್ನುಮೈಸೂರಿನ ಜನತೆಗೆ ತೋರಿಸುತ್ತಿದ್ದಾರೆ.

ರಾಜಸ್ಥಾನ್ ರಾಜ್ಯದ ಭಗೀರಥ ಕೈಮಗ್ಗ ನೇಕಾರರ ಕೈಯಿಂದ ವಿಶಿಷ್ಟವಾಗಿ ಮೂಡಿ ಬಂದಿರುವ ನೆಲಹಾಸು, ಮೇಲು ಹೋದಿಕೆ, ಸಾಲುಗಳ ಸಂಗ್ರಹವೂ ಇದೆ.

ಸಿಕ್ಕಿಂ ರಾಜ್ಯದ ಉತ್ತಮ ಗುಣಮಟ್ಟದ ಉಲನ್ ಶಾಲು, ಸ್ವೆಟರ್ ಜನರನ್ನು ತಮ್ಮ ಮಳಿಗೆ ಕಡೆಗೆ ಆಕರ್ಷಿಸುತ್ತಿದೆ. ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್ ಶೀಟ್ ಗಳು, ಟವಲ್ ಗಳು, ಕುಶನ್ ಕವರ್ಳು, ಕೈಮಗ್ಗ ಉತ್ಪನ್ನಗಳು ಮೇಳದಲ್ಲಿ ಮನ ಸೆಳೆಯುತ್ತಿವೆ. ಈ ಬಾರಿಯ ಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಸೇರಿವೆ. ಮೇಳದಲ್ಲಿ 70ಕ್ಕೂ ಹೆಚ್ಚು ಮಳಿಗೆಗಳಲ್ಲಿ ದೇಶದ ಸಂಸ್ಕೃತಿಯ ಅನಾವರಣಗೊಂಡಿದೆ.

ನ. 21ರವರೆಗೆ ಬೆಳಗ್ಗೆ 10 ರಿಂದ ರಾತ್ರಿ 9 ರವರೆಗೆ ರಾಜ್ಯ ಕೈಮಗ್ಗ ವಸ್ತು ಪ್ರದರ್ಶನ ಮತ್ತು ಮಾರಾಟ ಇದ್ದು, ಉಚಿತ ಪ್ರವೇಶವಿದೆ.