ಸಾರಾಂಶ
ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ, ತಾಳ್ಮೆ, ಕಾಯಕ ಸೇರಿದಂತೆ ಮಾನವೀಯ ಉದಾತ್ತ ಮೌಲ್ಯಗಳನ್ನು ಕಲಿಯಲು ಶಿಬಿರವು ನೇರವಾಗಲಿ
ಕನ್ನಡಪ್ರಭ ವಾರ್ತೆ ಮೈಸೂರು
ಮಾನವೀಯ ಮೌಲ್ಯಗಳನ್ನು ವೃದ್ಧಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ ಎಂದು ಬರಡನಪುರ ಮಹಾಂತೇಶ್ವರ ಮಠದ ಪರಶಿವಮೂರ್ತಿ ಸ್ವಾಮೀಜಿ ಹೇಳಿದರು.ಮೈಸೂರಿನ ಜೆಎಸ್ಎಸ್ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಜಯಪುರ ಹೋಬಳಿ ಬರಡನಪುರ ಮಹಾಂತೇಶ್ವರ ಮಠದಲ್ಲಿ 2024-25 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ, ತಾಳ್ಮೆ, ಕಾಯಕ ಸೇರಿದಂತೆ ಮಾನವೀಯ ಉದಾತ್ತ ಮೌಲ್ಯಗಳನ್ನು ಕಲಿಯಲು ಶಿಬಿರವು ನೇರವಾಗಲಿದೆ. ವಾರ್ಷಿಕ ಶಿಬಿರ ಯಶಸ್ವಿಯಾಗಿ ನಡೆಯಲಿ ಆಶೀಸಿದರು.ಮುಖ್ಯಅತಿಥಿಯಾಗಿ ಮೈಸೂರು ಮಹಾರಾಜ ಕಾಲೇಜು ಎನ್ಎಸ್ಎಸ್ ಸಂಯೋಜನಾಧಿಕಾರಿ ಲಿಂಗರಾಜು ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಸ್ತು, ನಾಯಕತ್ವ ಗುಣ, ಒಗ್ಗಟ್ಟು, ಸಮಯ ಪಾಲನೆ ಸೇರಿದಂತೆ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ತಿಳಿಸಿದರು.ಜಯಪುರ ಗ್ರಾಪಂ ಅಧ್ಯಕ್ಷ ಮಾದೇವಯ್ಯ, ಸದಸ್ಯರಾದ ರೇಣುಕಾ, ಬರಡನಪುರ ಗ್ರಾಮದ ಗಣೇಶ್ ಬುದ್ಧಿ, ಜೆಎಸ್ಎಸ್ ಮಹಿಳಾ ಪಾಲಿಟೆಕ್ನಿಕ್ ಎನ್.ಎಸ್.ಎಸ್. ಅಧಿಕಾರಿ ಸತೀಶ್, ಪ್ರಾಂಶುಪಾಲ ಲೋಕೇಶ್, ನಯನ, ಶಿಬಿರ ಅಧಿಕಾರಿ ಜಿ. ಅನುಷಾ, ಉಪನ್ಯಾಸಕರಾದ ಮನೋಹರ್, ಮಧುಸೂಧನ್, ಎಂ. ಯೋಗೇಶ್ವರಿ, ಎಸ್. ಗಿರೀಶ್ ಮತ್ತು ಜೆಎಸ್ಎಸ್ ಮಹಿಳಾ ಪಾಲಿಟೇಕ್ನಿಕ್ ಕಾಲೇಜು ಸಿಬ್ಬಂದಿ ಭಾಗವಹಿಸಿದ್ದರು.