ಸಾರಾಂಶ
ಫಿನ್‌ಲ್ಯಾಂಡ್‌ನ ಕೂಲ್ ಬ್ರೂಕ್ ಜತೆ ಸಹಕಾರ ಒಪ್ಪಂದ ಮಾಡಿಕೊಂಡಿರುವುದರಿಂದ ಉಕ್ಕು ಮತ್ತು ಸಿಮೆಂಟ್ ಉತ್ಪಾದನೆಯಲ್ಲಿ ಕಡಿಮೆ- ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಸಾಧ್ಯವಾಗಲಿದೆ.
ಬಳ್ಳಾರಿ: ಜೆಎಸ್‌ಡಬ್ಲ್ಯು ಸಂಸ್ಥೆಯು ಫಿನ್‌ಲ್ಯಾಂಡ್‌ನ ಎಂಜಿನಿಯರಿಂಗ್ ಕಂಪನಿಯಾದ ಕೂಲ್ ಬ್ರೂಕ್ ಸಂಸ್ಥೆಯೊಂದಿಗೆ ಪರಿವರ್ತನಾ ತಂತ್ರಜ್ಞಾನ ಮತ್ತು ಕಾರ್ಯತಂತ್ರದ ಸಹಕಾರ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಕೈಗಾರಿಕಾ ತಂತ್ರಜ್ಞಾನ ಪ್ರಗತಿ ನೆಲೆಯಲ್ಲಿ ಈ ಸಹಕಾರ ಒಪ್ಪಂದ ಅತ್ಯಂತ ಮಹತ್ವದ್ದಾಗಿದೆ ಎಂದು ಜೆಎಸ್‌ಡಬ್ಲು ಸ್ಟೀಲ್‌ನ ಅಧ್ಯಕ್ಷ ಪಿ.ಕೆ. ಮುರುಗನ್ ತಿಳಿಸಿದರು.
ಜೆಎಸ್‌ಡಬ್ಲ್ಯು ಸಂಸ್ಥೆಯಲ್ಲಿ ಗುರುವಾರ ಜರುಗಿದ ಫಿನ್‌ಲ್ಯಾಂಡ್ ದೇಶದ ಜತೆಗಿನ ಸಹಕಾರ ಒಪ್ಪಂದ ಸಮಾವೇಶದಲ್ಲಿ ಮಾತನಾಡಿದರು.ಜೆಎಸ್‌ಡಬ್ಲ್ಯು ಸಮೂಹ ಸಂಸ್ಥೆಯು ಭಾರತದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ 23 ಶತಕೋಟಿ ಯುಎಸ್ ಡಾಲರ್‌ನಷ್ಟು ವೈವಿಧ್ಯಮಯ ವ್ಯಾಪಾರ ವಹಿವಾಟು ಹೊಂದಿದೆ. ಫಿನ್‌ಲ್ಯಾಂಡ್‌ನ ಕೂಲ್ ಬ್ರೂಕ್ ಜತೆ ಸಹಕಾರ ಒಪ್ಪಂದ ಮಾಡಿಕೊಂಡಿರುವುದರಿಂದ ಉಕ್ಕು ಮತ್ತು ಸಿಮೆಂಟ್ ಉತ್ಪಾದನೆಯಲ್ಲಿ ಕಡಿಮೆ- ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಸಾಧ್ಯವಾಗಲಿದೆ.
ತೋರಣಗಲ್‌ನಲ್ಲಿ ಇರುವ ಜೆಎಸ್‌ಡಬ್ಯ್ಲುಉಕ್ಕು ಉತ್ಪಾದನಾ ತಾಣಗಳಲ್ಲಿ ಕೂಲ್‌ಬ್ರೂಕ್‌ನ ರೋಟೊಡೈನಾಮಿಕ್ ಹೀಟರ್ ತಂತ್ರಜ್ಞಾನ ಅನುಷ್ಠಾನಗೊಳಿಸುವುದರ ಮೇಲೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಒಪ್ಪಂದದ ಭಾಗವಾಗಿ ಎರಡೂ ಕಂಪನಿಗಳ ಸಹಭಾಗಿತ್ವದಲ್ಲಿ ಕಡಿಮೆ ಇಂಗಾಲದ ಉತ್ಪಾದನೆಯನ್ನು ಸಾಧಿಸುವ ಗುರಿಯನ್ನು ಹೊಂದಿರುವ ಮಾರ್ಗಸೂಚಿಯನ್ನು ರೂಪಿಸುತ್ತವೆ.ಜೆಎಸ್‌ಡಬ್ಲ್ಯು ಸ್ಟೀಲ್ ಮತ್ತು ಸಿಮೆಂಟ್ ಉತ್ಪಾದನಾ ಪ್ರಕ್ರಿಯೆಗಳಲ್ಲಿ ರೋಟೊಡೈನಾಮಿಕ್ ಹೀಟರ್ ತಂತ್ರಜ್ಞಾನವನ್ನು ಹಂತ- ಹಂತವಾಗಿ ಕಾರ್ಯಗತಗೊಳಿಸಲಾಗುತ್ತದೆ ಎಂದರು.
ಕೂಲ್‌ಬ್ರೂಕ್ ಸಂಸ್ಥೆಯ ಸಿಇಒ ಜೂನಸ್ ರೌರಮೊ ಮಾತನಾಡಿ, ಕೂಲ್‌ಬ್ರೂಕ್‌ನ ರೋಟೊಡೈನಾಮಿಕ್ ಹೀಟರ್ ತಂತ್ರಜ್ಞಾನದ ಬಳಕೆಯಿಂದ ಬೃಹತ್ ಕೈಗಾರಿಕೆ ಜಾಗತಿಕ ಮಟ್ಟದಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಶೇ. 30ರಷ್ಟು ಕಡಿಮೆಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರಲ್ಲದೆ, ಜೆಎಸ್‌ಡಬ್ಲ್ಯು ಜತೆ ಸಹಕಾರ ಒಪ್ಪಂದ ಮಾಡಿಕೊಳ್ಳುತ್ತಿರುವುದು ಅತೀವ ಸಂತಸ ತಂದಿದೆ ಎಂದರು.